ETV Bharat / sports

ಹೊಸತನದೊಂದಿಗೆ ಮೈದಾನಕ್ಕಿಳಿಯುತ್ತೇವೆ; ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ ಸಜ್ಜಾದ ವಾರ್ನರ್​!

"ಇಂಗ್ಲೆಂಡ್​ನಲ್ಲಿ ನಡೆಯುವ ಪಂದ್ಯಗಳಲ್ಲಿ ಆಡಲು ನಾವು ತೀರಾ ಉತ್ಸುಕರಾಗಿದ್ದೇವೆ. ಅಲ್ಲದೇ ನಾವು ಹೊಸತನದೊಂದಿಗೆ ಮೈದಾನಕ್ಕಿಳಿಯುತ್ತೇವೆ. ಇಂಗ್ಲೆಂಡ್ ತಂಡ ಕಳೆದ ಮೂರು ವಾರಗಳಿಂದ ಲಾಕ್‌ಡೌನ್​ನಲ್ಲಿದ್ದು, ಕ್ವಾರಂಟೈನ್​ನಲ್ಲಿದ್ದಾರೆ. ಆ ಬಳಿಕ ಅವರು ಐರ್ಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧ ಏಕದಿನ ಸರಣಿಗೆ ಸಜ್ಜಾಗಲಿದ್ದಾರೆ" ಎಂದು ವಾರ್ನರ್ ಹೇಳಿಕೆಯನ್ನು ಸುದ್ದಿ ಮಾಧ್ಯಮವೊಂದು ಉಲ್ಲೇಖಿಸಿದೆ.

Warner
ಡೇವಿಡ್ ವಾರ್ನರ್
author img

By

Published : Jul 29, 2020, 7:50 AM IST

ಸಿಡ್ನಿ: ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್​ಮನ್​​​​ ಡೇವಿಡ್ ವಾರ್ನರ್ ತಂಡಕ್ಕೆ ಮರಳಿದ್ದಾರೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮೂರು ಟೆಸ್ಟ್ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಹಿಂದೆ ಸರಣಿಯನ್ನು ಜುಲೈನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಕಾಟದಿಂದಾಗಿ ಸರಣಿಯನ್ನು ಸೆಪ್ಟೆಂಬರ್‌ ತಿಂಗಳಿಗೆ ಮುಂದೂಡಲಾಗಿದೆ.

Warner
ಡೇವಿಡ್ ವಾರ್ನರ್ ಕ್ರಿಕೆಟ್​ ದಾಖಲೆ

"ಇಂಗ್ಲೆಂಡ್​ನಲ್ಲಿ ನಡೆಯುವ ಪಂದ್ಯಗಳಲ್ಲಿ ಆಡಲು ನಾವು ತೀರಾ ಉತ್ಸುಕರಾಗಿದ್ದೇವೆ. ಅಲ್ಲದೇ ನಾವು ಹೊಸತನದೊಂದಿಗೆ ಮೈದಾನಕ್ಕಿಳಿಯುತ್ತೇವೆ. ಇಂಗ್ಲೆಂಡ್ ತಂಡ ಕಳೆದ ಮೂರು ವಾರಗಳಿಂದ ಲಾಕ್‌ಡೌನ್​ನಲ್ಲಿದ್ದು, ಕ್ವಾರಂಟೈನ್​ನಲ್ಲಿದ್ದಾರೆ. ಆ ಬಳಿಕ ಅವರು ಐರ್ಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧ ಏಕದಿನ ಸರಣಿಗೆ ಸಜ್ಜಾಗಲಿದ್ದಾರೆ" ಎಂದು ವಾರ್ನರ್ ಹೇಳಿಕೆಯನ್ನು ಸುದ್ದಿ ಮಾಧ್ಯಮವೊಂದು ಉಲ್ಲೇಖಿಸಿದೆ.

Warner
ಡೇವಿಡ್ ವಾರ್ನರ್

"ನಾವು ಮುಕ್ತ ಮನಸ್ಸಿನಿಂದ ಹೊಸತನದೊಂದಿಗೆ ಇಂಗ್ಲೆಂಡ್​ಗೆ ಹಾರಲಿದ್ದೇವೆ. ಕ್ರಿಕೆಟ್ ಆಡಲು ಸಿದ್ಧರಾಗಿದ್ದೇವೆ ಎಂದು ಆಸ್ಟ್ರೇಲಿಯಾದ ಮಾಜಿ ಉಪನಾಯಕ ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡವು ಈ ವರ್ಷದ ಮಾರ್ಚ್‌ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.