ETV Bharat / sports

ಧವನ್​ಗಿಂತಲೂ ರಾಹುಲ್ ಟಿ20ಯಲ್ಲಿ ರೋಹಿತ್​ಗೆ ಉತ್ತಮ ಜೋಡಿ: ವಿವಿಎಸ್ ಲಕ್ಷ್ಮಣ್ - .ಎಲ್ ರಾಹುಲ್ಇಂ vs ಗ್ಲೆಂಡ್

ಶಿಖರ್ ಧವನ್ ಗಾಯದಿಂದ ಮರಳಿದ ನಂತರ ಭಾರತ ತಂಡಕ್ಕೆ ಮರಳಿದ್ದು, ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್​ನಲ್ಲಿಯೂ ಇವರ ಬ್ಯಾಟಿಂಗ್‌ ಉತ್ತಮ ಪ್ರದರ್ಶನ ಉತ್ತಮವಾಗಿತ್ತು. ಹೀಗಾಗಿ, ಶಿಖರ್ ಮುಂಬರುವ ಸರಣಿಗೆ ರೋಹಿತ್​ ಶರ್ಮಾ ಜೊತೆಗೆ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಆದರೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್​ ಕನ್ನಡಿಗ ರಾಹುಲ್​​ ಪರ ನಿಂತಿದ್ದು, ಹಿಟ್​ಮ್ಯಾನ್ ಜೊತೆಗೆ ರಾಹುಲ್ ಸೂಕ್ತವಾದ ಜೊತೆಗಾರ ಎಂದಿದ್ದಾರೆ.

ಭಾರತ vs ಇಂಗ್ಲೆಂಡ್​ ಟಿ20 ಸರಣಿ
ಶಿಖರ್ ಧವನ್ ರಾಹುಲ್
author img

By

Published : Mar 8, 2021, 10:21 PM IST

ಹೈದರಾಬಾದ್​: ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಯಲ್ಲಿ ಮೊದಲ ಆದ್ಯತೆಯ ಆಯ್ಕೆಯಾಗಿರುವ ರೋಹಿತ್ ಶರ್ಮಾ ಜೊತೆಗೆ ಕೆ.ಎಲ್.ರಾಹುಲ್​ ಆರಂಭಿಕ ಜೋಡಿಯಾದರೆ ಸೂಕ್ತ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗರ ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

ಶಿಖರ್ ಧವನ್ ಗಾಯದಿಂದ ಮರಳಿದ ನಂತರ ಭಾರತ ತಂಡಕ್ಕೆ ಮರಳಿದ್ದು, ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಮುಂಬರುವ ಸರಣಿಗೆ ರೋಹಿತ್​ ಶರ್ಮಾ ಜೊತೆಗೆ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಆದರೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್​ ಕನ್ನಡಿಗ ರಾಹುಲ್​​ ಪರ ನಿಂತಿದ್ದು, ಹಿಟ್​ಮ್ಯಾನ್ ಜೊತೆಗೆ ರಾಹುಲ್ ಸೂಕ್ತವಾದ ಜೊತೆಗಾರ ಎಂದಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ನ ಕ್ರಿಕೆಟ್​ ಕನೆಕ್ಟೆಡ್​ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಿಜಕ್ಕೂ ಎರಡನೇ ಆರಂಭಿಕ ಬ್ಯಾಟ್ಸ್​ಮನ್​ ಆಯ್ಕೆ ತುಂಬಾ ಕಠಿಣವಾಗಲಿದೆ. ಏಕೆಂದರೆ ರೋಹಿತ್​ ಶರ್ಮಾ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಭಾರತ ತಂಡದ ಖಾಯಂ ಆರಂಭಿಕ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

"ಆದರೆ ನಾನು ಕೆ.ಎಲ್.ರಾಹುಲ್​ರೊಂದಿಗೆ ಹೋಗಲು ಇಷ್ಟಪಡುತ್ತೇನೆ. ಏಕೆಂದರೆ ಕಳೆದ ಒಂದು ವರ್ಷದಿಂದ ಅವರು ಆರಂಭಿಕ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ನನ್ನ ಪ್ರಕಾರ ಭಾರತೀಯ ನಿರ್ವಹಣಾ ಮಂಡಳಿ ಕೂಡ ರಾಹುಲ್​ರನ್ನೇ ಆಯ್ಕೆ ಮಾಡಬಹುದು" ಎಂದಿದ್ದಾರೆ.

ಶಿಖರ್​ ಧವನ್​ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 2 ಶತಕ ಬಾರಿಸಿದ್ದಾರೆ. ಹಾಗೂ ಡೆಲ್ಲಿ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ದೊಡ್ಡ ಶತಕ ಬಾರಿಸಿದ್ದಾರೆ. ಆದರೆ ಈಗಲೂ ಆರಂಭಿಕ ಸ್ಥಾನಕ್ಕೆ ರಾಹುಲ್​ ಮೇಲೆ ಹೆಚ್ಚು ನಂಬಿಕೆಯಿಡುತ್ತೇನೆ. ಏಕೆಂದರೆ ಆರಂಭಿಕ ಸ್ಥಾನದಲ್ಲಿ ಸ್ಥಿರವಾಗಿರುವವರಿಗೆ ಮೊದಲ ಆದ್ಯತೆ ಕೊಡಬೇಕು ಎಂದರು.

ರಾಹುಲ್​ ಕಳೆದ ಕೆಲವು ತಿಂಗಳಿನಿಂದ ಆರಂಭಿಕನಾಗಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರು ಪ್ರಸ್ತುತ ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿ 816 ರೇಟಿಂಗ್ ಅಂಕಗಳನ್ನು ಹೊಂದಿದ್ದು, 2ನೇ ಸ್ಥಾನದಲ್ಲಿದ್ದಾರೆ. ಮೂವರು ಆರಂಭಿಕರು ಫಿಟ್​ ಇರುವುದರಿಂದ ಬಿಸಿಸಿಐ ಯಾವ ಜೋಡಿಗೆ ಮಣೆ ಹಾಕಲಿದೆ ಎಂಬುದೇ ಕುತೂಹಲಕಾರಿ ಸಂಗತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.