ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 42ನೇ ಶತಕ ಸಿಡಿಸಿ ಮಿಂಚಿದ್ದು, ಇದೇ ರೀತಿ ಅವರ ಬ್ಯಾಟಿಂಗ್ ನಡೆಸಿದ್ರೆ ಏಕದಿನದಲ್ಲೇ 75-80 ಶತಕ ಸಿಡಿಸ್ತಾರೆ ಎಂದು ಟೀಂ ಇಂಡಿಯಾ ಮಾಜಿ ಪ್ಲೇಯರ್ ವಾಸಿಂ ಜಾಫರ್ ಭವಿಷ್ಯ ನುಡಿದಿದ್ದಾರೆ.
ಟೀಂ ಇಂಡಿಯಾ ಪರ 31 ಟೆಸ್ಟ್ ಪಂದ್ಯಗಳನ್ನಾಡಿರುವ ವಾಸೀಂ ಜಾಫರ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದು, 11 ಇನ್ನಿಂಗ್ಸ್ಗಳಾದ ಬಳಿಕ ವಿರಾಟ್ ಮತ್ತೊಂದು ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದು, ನನ್ನ ಪ್ರಕಾರ ಅವರು 75-80 ಶತಕ ಸಿಡಿಸುತ್ತಾರೆ ಎಂದು ಹೇಳಿದ್ದಾರೆ.
-
Normal services resumes after a break of 11 innings!!
— Wasim Jaffer (@WasimJaffer14) August 12, 2019 " class="align-text-top noRightClick twitterSection" data="
i.e. another international 💯 for Virat Kohli 👏🏽
My prediction is he will get 75-80 ODI 💯's 🤞🏽🤐#KingKohli
">Normal services resumes after a break of 11 innings!!
— Wasim Jaffer (@WasimJaffer14) August 12, 2019
i.e. another international 💯 for Virat Kohli 👏🏽
My prediction is he will get 75-80 ODI 💯's 🤞🏽🤐#KingKohliNormal services resumes after a break of 11 innings!!
— Wasim Jaffer (@WasimJaffer14) August 12, 2019
i.e. another international 💯 for Virat Kohli 👏🏽
My prediction is he will get 75-80 ODI 💯's 🤞🏽🤐#KingKohli
ಈಗಾಗಲೇ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಏಕದಿನದಲ್ಲಿ ಗಳಿಕೆ ಮಾಡಿದ್ದ 11,363ರನ್ ದಾಖಲೆ ಬ್ರೇಕ್ ಮಾಡಿರುವ ಕೊಹ್ಲಿ 11,406ರನ್ಗಳಿಕೆ ಮಾಡಿ ಭಾರತದ ಪರ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಪೈಕಿ 2ನೇ ಸ್ಥಾನದಲ್ಲಿದ್ದಾರೆ. 463 ಪಂದ್ಯಗಳಿಂದ 18,426ರನ್ಗಳಿಕೆ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 59 ರನ್ಗಳ ಅಂತರದಿಂದ ಗೆಲುವು ದಾಖಲು ಮಾಡಿಕೊಂಡಿದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಈಗಾಗಲೇ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.