ಬೆಂಗಳೂರು: 12ನೇ ಆವೃತ್ತಿ ಐಪಿಎಲ್ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ಯಾಪ್ಟನ್ ಅಶ್ವಿನ್ರ ಮಂಕಡ್ ವಿವಾದ ಕ್ರೀಡಾ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿದೆ. ಇದರ ಬೆನ್ನಲ್ಲೇ ಐಪಿಎಲ್ನಲ್ಲಿ ಮತ್ತೊಂದು ವಿವಾದ ಉದ್ಭವವಾಗಿದೆ.
ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ನೀಡಿದ್ದ 188ರನ್ಗಳ ಗುರಿ ಬೆನ್ನತ್ತಿದ್ದ ಆರ್ಸಿಬಿ ತಂಡಕ್ಕೆ ಕೊನೆ ಓವರ್ನಲ್ಲಿ ಗೆಲುವಿಗೆ 17ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಮೊದಲ 5 ಎಸೆತಗಳಲ್ಲಿ ಆರ್ಸಿಬಿ 10ರನ್ಗಳಿಕೆ ಮಾಡಿತ್ತು. ಕೊನೆ ಎಸೆತದಲ್ಲಿ ತಂಡಕ್ಕೆ 7ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಮಲಿಂಗಾ ಲಾಸ್ಟ್ ಎಸೆತವನ್ನ ನೋ ಬಾಲ್ ಹಾಕಿದ್ದಾರೆ. ಆದರೆ ಅಂಪೈರ್ ಮಾತ್ರ ಅದನ್ನ ನೋ ಬಾಲ್ ನೀಡಿಲ್ಲ
IPL 2019
— தளபதி KOHLI❤️Praveen (@DiyaDharshan) March 28, 2019 " class="align-text-top noRightClick twitterSection" data="
Most of the Matches came with Horrible
Ashwin's Mankad Vs Jos
Russell Not Out Vs KXIP#NoBall at Last Ball of the Game Changing Match 😑#RCBvMI pic.twitter.com/5plWFTa39w
">IPL 2019
— தளபதி KOHLI❤️Praveen (@DiyaDharshan) March 28, 2019
Most of the Matches came with Horrible
Ashwin's Mankad Vs Jos
Russell Not Out Vs KXIP#NoBall at Last Ball of the Game Changing Match 😑#RCBvMI pic.twitter.com/5plWFTa39w
ಕೃಪೆ: ಸಾಮಾಜಿಕ ಜಾಲತಾಣ ಟ್ವಿಟರ್IPL 2019
— தளபதி KOHLI❤️Praveen (@DiyaDharshan) March 28, 2019
Most of the Matches came with Horrible
Ashwin's Mankad Vs Jos
Russell Not Out Vs KXIP#NoBall at Last Ball of the Game Changing Match 😑#RCBvMI pic.twitter.com/5plWFTa39w
ಮಲಿಂಗಾ ಎಸೆದ ಕೊನೆ ಬಾಲ್ ನೋ ಬಾಲ್ ಎಂಬುದು ಟಿವಿ ಸ್ಕ್ರೀನ್‌ನಲ್ಲಿ ರಿಪ್ಲೇ ಬಂದಾಗ ಕಂಡು ಬಂದಿದೆ. ಇದೇ ವಿಷಯಕ್ಕೆ ಕೊಹ್ಲಿ ಸಿಕ್ಕಾಪಟ್ಟಿ ಗರಂ ಆಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಾವು ಗಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಆಡುತ್ತಿರುವುದು ಐಪಿಎಲ್. ಇಂತಹ ಸಂದರ್ಭಗಳಲ್ಲಿ ಅಂಪೈರ್ ಸೂಕ್ಷ್ಮವಾಗಿರಬೇಕು ಎಂದಿದ್ದಾರೆ. ಒಂದು ವೇಳೆ ಅದು ನೋ ಬಾಲ್ ಎಂದು ಅಂಪೈರ್ ನೀಡಿದರೆ ಆರ್ಸಿಬಿ ಗೆಲುವು ದಾಖಲು ಮಾಡುವ ಸಾಧ್ಯತೆ ಇತ್ತು ಎಂಬ ಮಾತು ಸಹ ಕೇಳಿ ಬಂದಿದೆ.