ETV Bharat / sports

ರನ್​ ಗಳಿಸಬೇಕೆಂಬ ಛಲವೇ ಕೊಹ್ಲಿ ಯಶಸ್ಸಿಗೆ ಕಾರಣ.. ಕೇನ್​ ವಿಲಿಯಮ್ಸನ್​​ ತಾರೀಫು!! - ವಿರಾಟ್​ ಕೊಹ್ಲಿ ಕೆನ್​​ ವಿಲಿಯಮ್ಸನ್

ಕ್ರಿಕೆಟ್​​ ಆಟದಲ್ಲಿ ದೇಹದ ಜತೆಗೆ ಆತನ ಮೆದುಳು ಸಹ ಅಷ್ಟೇ ಸಾಮರ್ಥ್ಯ ಹೊಂದಿದೆ. ಮೈದಾನಕ್ಕೆ ಬ್ಯಾಟ್​ ಹಿಡಿದು ಇಳಿದ್ರೆ ಸಾಧ್ಯವಾದಷ್ಟು ರನ್​ ಗಳಿಸಬೇಕು, ಎದುರಾಳಿಗಳನ್ನು ಬಗ್ಗು ಬಡಿಯಬೇಕು ಎಂಬ ಇಚ್ಛಾಶಕ್ತಿ ಹೊಂದಿರುವ ಕಾರಣದಿಂದಾಗಿ ಕೊಹ್ಲಿಗೆ ಸಾಧನೆ ಮಾಡಲು ಸಾಧ್ಯವಾಗಿದೆ.

Virat Kohli
ವಿರಾಟ್​ ಕೊಹ್ಲಿ ಮತ್ತು ನ್ಯೂಜಿಲೆಂಡಿನ ಕೆನ್​​ ವಿಲಿಯಮ್ಸನ್​​
author img

By

Published : Jun 8, 2020, 10:12 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ನ್ಯೂಜಿಲೆಂಡಿನ ಕೇನ್​​ ವಿಲಿಯಮ್ಸನ್​​ ವಿಶ್ವದ ಸ್ಟಾರ್​ ಬ್ಯಾಟ್ಸ್​ಮ್ಯಾನ್​ಗಳು. ಅದಕ್ಕಿಂತ ಮಿಗಿಲಾಗಿ ಇಬ್ಬರು ಒಳ್ಳೆಯ ಸ್ನೇಹಿತರು. ಕಿಂಗ್‌ ಕೊಹ್ಲಿಯನ್ನ ಕಿವೀಸ್​ ನಾಯಕ ಕೇನ್​​ ಮನಸಾರೆ ಹಾಡಿ ಹೊಗಳಿದ್ದಾರೆ.

ವಿರಾಟ್​ ಕೊಹ್ಲಿ ತನ್ನ ಅಬ್ಬರದ ಆಟದೊಂದಿಗೆ ಮೈದಾನದಲ್ಲಿ ರನ್ ​ಮಳೆ ಸುರಿಸಿದ್ರೆ, ಕೇನ್​ ವಿಲಿಯಮ್ಸನ್​ ತನ್ನ ಕೂಲ್​ ಆಟದೊಂದಿಗೆ ರನ್​​ ಗಳಿಸುತ್ತಾರೆ. ಕೊಹ್ಲಿ ಪ್ರಸ್ತುತ ಅತ್ಯುತ್ತಮ ಬ್ಯಾಟ್ಸ್‌ಮನ್‌. ಕೊಹ್ಲಿಯ ಆಟದಲ್ಲಿ ಪರಿಪಕ್ವತೆ ಇದೆ. ಮೈದಾನಕ್ಕೆ ಬ್ಯಾಟ್​​ ಹಿಡಿದು ಇಳಿದ್ರೆ ರನ್​ಗಳ ಮಳೆಯನ್ನೇ ಸುರಿಸಬೇಕು ಎಂಬ ಛಲ ಆತನಲ್ಲಿದೆ. ಆದ್ದರಿಂದಲೇ ಕೊಹ್ಲಿ ಭಾರತದ ರನ್​ ಮಷಿನ್​ ಆಗಿ, ಬೌಲರ್​ಗಳಿಗೆ ದುಸ್ವಪ್ನವಾಗಿದ್ದಾರೆ ಎಂದು ಕೊಹ್ಲಿ ಆಟದ ವೈಖರಿಯನ್ನ ಬಣ್ಣಿಸಿದ್ದಾರೆ ಕೇನ್.

ಕೊಹ್ಲಿ ಕೇವಲ ಆಟಗಾರನಾಗಿ ಮಾತ್ರವಲ್ಲ, ತಂಡದ ಉತ್ತಮ ನಾಯಕನಾಗಿಯೂ ಕೆಲಸ ನಿರ್ವಹಿಸುವ ಚಾಕಚಕ್ಯತೆ ಹೊಂದಿರುವಾತ. 2008ಕ್ಕೆ ಹೋಲಿಸಿದ್ರೆ ವಿರಾಟ್​​ ಕೊಹ್ಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಓರ್ವ ಸಾಮಾನ್ಯ ಕ್ರಿಕೆಟ್​ ಆಟಗಾರನಾಗಿ ಬಂದು ನಾಯಕತ್ವದ ಜತೆಗೆ ದಾಖಲೆ ನಿರ್ಮಾಣ ಮಾಡುವುದರ ಹಿಂದೆ ಸಾಕಷ್ಟು ಶ್ರಮವಿರಬೇಕು, ಕೊಹ್ಲಿ ಆ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಗಳನ್ನ ಮಾಡಿದ್ದಾರೆ ಎಂದು ಕೇನ್​​ ವಿಲಿಯಮ್ಸನ್​ ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್​​ ಆಟದಲ್ಲಿ ದೇಹದ ಜತೆಗೆ ಆತನ ಮೆದುಳು ಸಹ ಅಷ್ಟೇ ಸಾಮರ್ಥ್ಯ ಹೊಂದಿದೆ. ಮೈದಾನಕ್ಕೆ ಬ್ಯಾಟ್​ ಹಿಡಿದು ಇಳಿದ್ರೆ ಸಾಧ್ಯವಾದಷ್ಟು ರನ್​ ಗಳಿಸಬೇಕು, ಎದುರಾಳಿಗಳನ್ನು ಬಗ್ಗು ಬಡಿಯಬೇಕು ಎಂಬ ಇಚ್ಛಾಶಕ್ತಿ ಹೊಂದಿರುವ ಕಾರಣದಿಂದಾಗಿ ಕೊಹ್ಲಿಗೆ ಸಾಧನೆ ಮಾಡಲು ಸಾಧ್ಯವಾಗಿದೆ. ತಾನು ಮತ್ತು ಕೊಹ್ಲಿ ಆಟದಲ್ಲಿ ಎದುರಾಳಿಗಳಾದರೂ ಪರಸ್ಪರ ಸ್ನೇಹಿತರೆ ಎಂದು ಕೇನ್​ ಸಂತಸ ವ್ಯಕ್ತಪಡಿಸಿದ್ದಾರೆ.

ವಿರಾಟ್​ ಕೊಹ್ಲಿ ಮೇ 22ರಂದು ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನ ಕಳುಹಿಸಿದ್ದರು. ಆ ಪೋಸ್ಟ್​ ನೋಡಿ ನಾನು ತುಂಬಾ ಸಂತಸಗೊಂಡಿದ್ದೆ. ಇದು ಕೊಹ್ಲಿಯ ಸರಳತನ ಹಾಗೂ ನಮ್ಮ ಮೇಲೆ ಇರುವ ಪ್ರೀತಿ ತೋರಿಸುತ್ತದೆ ಎಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಹೇಳಿದ ಮಾತುಗಳನ್ನು ನೆನಪಿಸಿಕೊಂಡ ವಿಲಿಯಮ್ಸನ್​​, ಫಲಿತಾಂಶಗಳಿಂದ ನಾಯಕತ್ವವನ್ನು ನಿರ್ಧರಿಸಬಹುದು ಎಂದು ನಾನು ಭಾವಿಸುವುದಿಲ್ಲ. ನೀವು ತಂಡವನ್ನು ಹೇಗೆ ಒಗ್ಗೂಡಿಸುತ್ತೀರಿ ಹಾಗೂ ನಿಮ್ಮ ಸಹ ಆಟಗಾರರು ತಂಡದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಮುಖ್ಯ ಎಂಬ ಕೊಹ್ಲಿಯ ಮಾತು ಸತ್ಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಕೊಹ್ಲಿ ಓರ್ವ ಕ್ರಿಕೆಟ್​ ಆಟಗಾರನಾಗಿ ಮಾತ್ರವಲ್ಲದೆ, ಒಳ್ಳೆಯ ಸ್ನೇಹಿತ ಕೂಡ ಹೌದು. ಭಾರತವಲ್ಲದೆ ಇತರ ತಂಡದ ಆಟಗಾರರನ್ನೂ ಸಹ ಗೌರವದಿಂದ ಕಾಣುವ ಕೊಹ್ಲಿ ಓರ್ವ ಸ್ಮಾರ್ಟ್​ ಕ್ರಿಕೆಟಿಗ ಅಂದ್ರೆ ತಪ್ಪಾಗಲಾರದು ಎಂದು ಕೇನ್​​ ವಿಲಿಯಮ್ಸನ್​​, ಕೊಹ್ಲಿ ಬಗೆಗಿನ ಭಾವನೆಗಳನ್ನು ತೆರೆದಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.