ETV Bharat / sports

ವಿಜಯ ಹಜಾರೆ ಟ್ರೋಫಿಯಲ್ಲಿ ಆಡಿದ್ದ ಬಿಹಾರ ಆಟಗಾರನಿಗೆ ಕೋವಿಡ್​ 19 ಪಾಸಿಟಿವ್ - Bihar player tests positive for COVID-19

ಆತನಿಗೆ ವೈರಸ್​ ತಗುಲಿರುವುದು ಖಚಿತವಾಗಿದೆ, ಪ್ರಸ್ತುತ ಆ ಆಟಗಾರ ತಂಡದ ಇತರೆ ಆಟಗಾರರಿಂದ ದೂರ ಉಳಿದು ಐಸೋಲೇಟ್​ ಆಗಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿದ್ದು, ಅವರು ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಬಿಹಾರ ಕ್ರಿಕೆಟ್​ ಬೋರ್ಡ್​ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

Vijay Hazare
ಬಿಹಾರ ಆಟಗಾರನಿಗೆ ಕೋವಿಡ್​ 19 ಪಾಸಿಟಿವ್
author img

By

Published : Feb 23, 2021, 2:08 PM IST

ಮುಂಬೈ: ಪ್ರಸ್ತುತ ಸೀಮಿತ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ಕೋವಿಡ್ 19 ಪ್ರಕರಣ ಕಂಡುಬಂದಿದೆ. ಬಿಹಾರದ ಆಟಗಾರನಿಗೆ ವೈರಸ್​ ತಗುಲಿದ್ದು, ತಂಡದ ಉಳಿದ ಆಟಗಾರರು ಕೂಡ ಪರೀಕ್ಷೆಗೆ ಒಳಗಾಗಲಿದ್ದಾರೆ.

ಆತನಿಗೆ ವೈರಸ್​ ತಗುಲಿರುವುದು ಖಚಿತವಾಗಿದೆ, ಪ್ರಸ್ತುತ ಆ ಆಟಗಾರ ತಂಡದ ಇತರೆ ಆಟಗಾರರಿಂದ ದೂರ ಉಳಿದು ಐಸೋಲೇಟ್​ ಆಗಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿದ್ದು, ಅವರು ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಬಿಹಾರ ಕ್ರಿಕೆಟ್​ ಬೋರ್ಡ್​ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಮತ್ತೊಂದು ಮೂಲಗಳ ಪ್ರಕಾರ ಬಿಹಾರ ತಂಡದ ಎಲ್ಲಾ 22 ಆಟಗಾರರು ಮಂಗಳವಾರ ಕೋವಿಡ್​ 19 ಟೆಸ್ಟ್​ಗೆ ಒಳಗಾಗಿದ್ದಾರೆ. ಇವರೆಲ್ಲರ ಪರೀಕ್ಷಾ ವರದಿ ಸಂಜೆ ಬರಲಿದೆ ಎಂದು ತಿಳಿದುಬಂದಿದೆ.

ಬಿಹಾರ ತಂಡ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಬಿಹಾರ ತಂಡ ಬುಧವಾರ ನಡೆಯುವ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ.

ಬಿಹಾರ ತಂಡದ ಆಟಗಾರನಿಗೂ ಮುನ್ನ ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದ ಆಟಗಾರರಿಗೂ ಕೋವಿಡ್​ 19 ಸೋಂಕು ತಗುಲಿತ್ತು. ಆದರೂ ಆ ತಂಡಗಳು ಲೀಗ್​ ಮುಂದುವರಿದಿವೆ. ರಾಷ್ಟ್ರೀಯ ಏಕದಿನ ಚಾಂಪಿಯನ್​ಶಿಪ್​ ವಿವಿಧ ಸ್ಥಳಗಳಲ್ಲಿ ಬಯೋಬಬಲ್​ನಲ್ಲಿ ನಡೆಯುತ್ತಿವೆ.

ಇದನ್ನು ಓದಿ:ಕ್ರೀಡೆ ಕ್ರೀಡಾಪಟುವಿನ ಪ್ರದರ್ಶನ ಗುರುತಿಸುತ್ತದೆಯೇ ಹೊರೆತು, ಆತನ ಹಿನ್ನೆಲೆಯನ್ನಲ್ಲ: ತೆಂಡೂಲ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.