ಮುಂಬೈ: ದೇಶೆದೆಲ್ಲೆಡೆ ಕೊರೊನಾ ದಾಳಿ ತಡೆಗೆ ಲಾಕ್ಡೌನ್ ಘೋಷಿಸಿರುವುದರಿಂದ ಮೈದಾನದಲ್ಲಿ ಬ್ಯಾಟ್-ಬಾಲ್ ಹಿಡಿದು ಆಡುತ್ತಿದ್ದ ಕ್ರಿಕೆಟಿಗರು ಮನೆಯಲ್ಲಿ ಕಾಲಕಳೆಯುವಂತಾಗಿದೆ.
ಸದಾ ಕ್ರಿಕೆಟ್ನಲ್ಲಿ ಸಮಯ ಕಳೆಯುತ್ತಿದ್ದ ಕ್ರಿಕೆಟಿಗರು ಇದೀಗ ಮನೆಯಲ್ಲಿ ಇರುವಂತಾಗಿದಎ. ಈ ಸಮಯದಲ್ಲಿ ಕೆಲವು ಕ್ರಿಕೆಟಿಗರು ತಮ್ಮ ಕುಟುಂಬಸ್ಥರ ಜೊತೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ತಾಯಿಗೆ ಅಡುಗೆ ಮಾಡಲು, ಮನೆಕೆಲಸ ಮಾಡಲು ನೆರವಾಗುತ್ತಿದ್ದಾರೆ. ಇನ್ನು ಕೆಲವರು ಲೂಡೋ, ಪಬ್ ಜಿ ಆಡುವ ಮೂಲಕ ಸಮಯ ಕಳೆಯುತ್ತಿದ್ದಾರೆ.
-
We were missing cricket, so we created our own league while at home. Presenting to you "Isolation Cricket Cup" @sthalekar93 @ReemaMalhotra8 @MonaMeshram30 @AKohli18 pic.twitter.com/6yWlmuymG3
— Veda Krishnamurthy (@vedakmurthy08) April 15, 2020 " class="align-text-top noRightClick twitterSection" data="
">We were missing cricket, so we created our own league while at home. Presenting to you "Isolation Cricket Cup" @sthalekar93 @ReemaMalhotra8 @MonaMeshram30 @AKohli18 pic.twitter.com/6yWlmuymG3
— Veda Krishnamurthy (@vedakmurthy08) April 15, 2020We were missing cricket, so we created our own league while at home. Presenting to you "Isolation Cricket Cup" @sthalekar93 @ReemaMalhotra8 @MonaMeshram30 @AKohli18 pic.twitter.com/6yWlmuymG3
— Veda Krishnamurthy (@vedakmurthy08) April 15, 2020
ಆದರೆ ಭಾರತ ಮಹಿಳಾ ತಂಡದಲ್ಲಿರುವ ಕನ್ನಡತಿ ವೇಧಾ ಕೃಷ್ಣಮೂರ್ತಿ ಮನೆಯಲ್ಲೆ ಕ್ರಿಕೆಟ್ ಟೂರ್ನಿ ಆಯೋಜಿಸುವ ಮೂಲಕ ವಿಶೇಷ ರೀತಿಯಲ್ಲಿ ಸಮಯ ಕಳೆಯುತ್ತಿದ್ದಾರೆ.
"ನಾವು ಕ್ರಿಕೆಟ್ ಆಟವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ನಾವು ಮನೆಯಲ್ಲಿ ಸ್ವಂತ ಕ್ರಿಕೆಟ್ ಲೀಗ್ ಆಯೋಜಿಸಿಕೊಂಡಿದ್ದೇವೆ. ಐಸೋಲೇಷನ್ ಕಪ್ ಅನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ" ಎಂದು ಮನೆಯಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ಸಂಪೂರ್ಣ ಎಡಿಟ್ ಮಾಡಿದ್ದಾಗಿದ್ದು, ಇದರಲ್ಲಿ ವೇದಾ ಕೃಷ್ಣಮೂರ್ತಿ ಬ್ಯಾಟರ್, ರೀಮಾ ಮೆಲ್ಹೋತ್ರ ಬೌಲರ್, ಅನುಕ್ ಮೆಲ್ಹೋತ್ರ ಅಂಪೈರ್, ಮೋನಾ ಮೆಶ್ರಾಮ್ ಫೀಲ್ಡರ್, ಆಕಾಂಕ್ಷಾ ಕೊಹ್ಲಿ ಫೀಲ್ಡರ್ ಹಾಗೂ ಇಬ್ಬರು ಬಾಲಕಿಯರು ಪ್ರೇಕ್ಷಕರಾಗಿದ್ದಾರೆ, ಇದಕ್ಕೆ ಲೀಸಾ ಶಲೇಕಾರ್ ಅವರ ಕಾಮೆಂಟರಿಯನ್ನು ಸಂಯೋಜಿಸಲಾಗಿದೆ.
ಒಂದು ನಿಮಿಷವುಳ್ಳ ಈ ವಿಡಿಯೋಗೆ ಸ್ವತಃ ಐಸಿಸಿ ಕೂಡಾ ಫಿದಾ ಆಗಿದ್ದು ಶೇರ್ ಮಾಡಿಕೊಂಡಿದೆ. ಈ ಹೊಸ ಯೋಜನೆಗೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.