ದುಬೈ: ಸನ್ರೈಸರ್ಸ್ ವಿರುದ್ಧದ ದುಬೈನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ 3ನೇ ಪಂದ್ಯದಲ್ಲಿ ಆರ್ಸಿಬಿ ತಂಡದ ಉಮೇಶ್ ಯಾದವ್ ಬೇಡದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
13ನೇ ಆವೃತ್ತಿಯಲ್ಲಿ ಇಂದೇ ಮೊದಲ ಪಂದ್ಯದಲ್ಲಿ ಆಡುತ್ತಿರುವ ಆರ್ಸಿಬಿ ಮೊದಲು ಬ್ಯಾಟಿಂಗ್ ನಡೆಸಿ 5 ವಿಕೆಟ್ ಕಳೆದುಕೊಂಡು 163 ರನ್ಗಳಿಸಿತ್ತು.
ಚೇಸಿಂಗ್ ವೇಳೆ ಮೊದಲ ಓವರ್ನಲ್ಲೇ 12 ರನ್ ಬಿಟ್ಟುಕೊಟ್ಟಿದ್ದ ಉಮೇಶ್ ಯಾದವ್ ಡೇವಿಡ್ ವಾರ್ನರ್ ರನ್ಔಟ್ ಮಾಡಿದ್ದರು. ಆದರೆ ಮುಂದಿನ 3 ಓವರ್ಗಳಲ್ಲೂ 10ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟರು. ಒಟ್ಟಾರೆ 4 ಓವರ್ಗಳ ಕೋಟಾದಲ್ಲಿ ವಿಕೆಟ್ ಇಲ್ಲದೆ 48 ರನ್ ಬಿಟ್ಟುಕೊಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 40 ಪ್ಲಸ್ ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು.
ಉಮೇಶ್ ಯಾದವ್ 120 ಪಂದ್ಯಗಳಲ್ಲಿ 17 ಬಾರಿ 40 ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಇವರನ್ನು ಹೊರೆತುಪಡಿಸಿದರೆ ಭಾರತದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ 16 ಬಾರಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ನ ಆಲ್ರೌಂಡರ್ ಡ್ವೇನ್ ಬ್ರಾವೋ 16 ಬಾರಿ 40ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ.
ಇನ್ನು ಧಾರುಣವಾದ ವಿಚಾರವೆಂದರೆ ಹೈದರಾಬಾದ್ ವಿರುದ್ಧ ಕಳೆದ 4 ಪಂದ್ಯಗಳಿಂದ ಉಮೇಶ್ ಯಾದವ್ ಒಂದು ವಿಕೆಟ್ ಪಡೆಯದೇ, 31, 47, 46 ಮತ್ತು 48 ರನ್ ಚಚ್ಚಿಸಿಕೊಂಡಿದ್ದಾರೆ.