ನವದೆಹಲಿ: ಬಾಕ್ಸಿಂಗ್ ಡೇ ಟೆಸ್ಟ್‌ನ ಆರಂಭಿಕ ದಿನದಂದು ಭಾರತದ ಬೌಲರ್‌ಗಳ ಪ್ರಬಲ ಪ್ರದರ್ಶನದ ನಂತರ, ಈ ಸರಣಿಯು ಭಾರತ ಬ್ಯಾಟಿಂಗ್ ಮತ್ತು ಆಸ್ಟ್ರೇಲಿಯಾದ ಬೌಲಿಂಗ್ ನಡುವಿನ ಸ್ಪರ್ಧೆಯಾಗಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
"ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನದ ಆಟವನ್ನು ನೋಡಿದ್ರೆ ಈ ಸರಣಿಯು ಭಾರತದ ಬ್ಯಾಟಿಂಗ್ ಮತ್ತು ಆಸ್ಟ್ರೇಲಿಯಾದ ಬೌಲಿಂಗ್ ನಡುವಿನ ಸ್ಪರ್ಧೆಯಾಗಿದೆ ಎಂಬ ನನ್ನ ಅಭಿಪ್ರಾಯ ಮತ್ತೊಮ್ಮೆ ಬಲವಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಮಿಂಚುವ ಮೂಲಕ ಸ್ಪರ್ಧೆಯಲ್ಲಿ ಗೆಲುವು ಸಾಧಿಸಬೇಕಿದೆ" ಎಂದು ಕೈಫ್ ಟ್ವೀಟ್ ಮಾಡಿದ್ದಾರೆ.
-
First day of Boxing Day Test has once again strengthened my view that this series is a contest between India’s batting and Australia’s bowling. To win the battle India’s batsmen need to fire and seal the deal #cricket #AusvInd
— Mohammad Kaif (@MohammadKaif) December 26, 2020 ." class="align-text-top noRightClick twitterSection" data="
.">First day of Boxing Day Test has once again strengthened my view that this series is a contest between India’s batting and Australia’s bowling. To win the battle India’s batsmen need to fire and seal the deal #cricket #AusvInd
— Mohammad Kaif (@MohammadKaif) December 26, 2020
.First day of Boxing Day Test has once again strengthened my view that this series is a contest between India’s batting and Australia’s bowling. To win the battle India’s batsmen need to fire and seal the deal #cricket #AusvInd
— Mohammad Kaif (@MohammadKaif) December 26, 2020
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ವಿರುದ್ಧ ಸಾಲಿಡ್ ಪ್ರದರ್ಶನ ತೋರಿದ ಟೀಂ ಇಂಡಿಯಾ ಬೌಲರ್ಗಳು 195 ರನ್ಗಳಿಗೆ ಕಾಂಗರೂಗಳನ್ನು ಕಟ್ಟಿಹಾಕಿದ್ರು. ವೇಗಿ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಕಬಳಿಸಿದರೆ, ಅಶ್ವಿನ್ 3 ಮತ್ತು ಚೊಚ್ಚಲ ಪಂದ್ಯವಾಡಿದ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರು.
ಓದಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವ ಮೂಲಕ ಅಪ್ಪನ ಕನಸು ಈಡೇರಿಸಿದ್ದಾನೆ: ಸಿರಾಜ್ ಸಹೋದರ
ಆತಿಥೇಯ ತಂಡ ಕಡಿಮೆ ರನ್ಗಳಿಗೆ ಕುಸಿತ ಕಂಡ ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ವೇಗಿ ಸ್ಟಾರ್ಕ್ ಶಾಕ್ ನೀಡಿದ್ರು. ಮೊದಲ ಓವರ್ನಲ್ಲೇ ಮಯಾಂಕ್ ಅಗರ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 1 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿದ್ದು, ಶುಭಮನ್ ಗಿಲ್ 28 ರನ್ ಮತ್ತು ಚೇತೇಶ್ವರ್ ಪೂಜಾರ 7 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.