ETV Bharat / sports

ಇಂಗ್ಲೆಂಡ್​ಗೆ ಅದೃಷ್ಟದ ಗೆಲುವು, ಕಿವೀಸ್​ಗೆ ಅಸಹಾಯಕತೆ ಸೋಲು: ಹೈ'ಡ್ರಾಮಾ'ದ ವಿಶ್ವಕಪ್​ಗೆ 1 ವರ್ಷ

author img

By

Published : Jul 14, 2020, 1:22 PM IST

ಕ್ರಿಕೆಟ್​ ಜನಕರಾದ ಇಂಗ್ಲೆಂಡ್​ ತಂಡ ವಿಶ್ವಕಪ್​ ಗೆದ್ದ ಸಂಭ್ರಮವನ್ನಾಚರಿಸುತ್ತಿದ್ದರೆ, ಇತ್ತ ಇಂಗ್ಲೆಂಡ್​ ವಿಚಿತ್ರ ನಿಯಮಕ್ಕೆ ಅಸಹಾಯಕರಾಗಿ ಸೋಲೊಪ್ಪಿಕೊಂಡ ಕಹಿ ನೆನಪಿನಲ್ಲಿದೆ. ಆದರೆ ಈ ಕಿವೀಸ್​ ತಂಡದ ಸೋಲು ಐಸಿಸಿಯ ಬೌಂಡರಿ ಕೌಂಟ್​ ಮೂಲಕ ವಿಜೇತ ತಂಡವನ್ನು ಘೋಷಿಸಬಹುದು ಎಂಬ ನಿಯಮವನ್ನು ತೆಗೆದು ಹಾಕಲು ನೆರವಾಯಿತು.

ಇಂಗ್ಲೆಂಡ್​ - ನ್ಯೂಜಿಲ್ಯಾಂಡ್​
ಇಂಗ್ಲೆಂಡ್​ - ನ್ಯೂಜಿಲ್ಯಾಂಡ್​

ನವದೆಹಲಿ: 2019ರ ವಿಶ್ವಕಪ್​ ಫೈನಲ್​ ನಡೆದು ಇಂದಿಗೆ ಒಂದು ವರ್ಷದ ಕಳೆದಿದ್ದು, ಬಲು ರೋಚಕತೆಯಿಂದ ಕೂಡಿದ್ದ ಫೈನಲ್​ ಪಂದ್ಯ ಹಲವು ವಿವಾದ, ವಿಷಾದಕ್ಕೆ ಒಳಗಾಗಿ ಕೊನೆಗೆ ಕ್ರಿಕೆಟ್​ನಲ್ಲಿ ಹಲವು ಬದಲಾವಣೆಗೆ ನಾಂದಿ ಹಾಡಿ ಇಂದಿಗೆ ಒಂದು ವರ್ಷ ಕಳೆದಿದೆ.

ಕ್ರಿಕೆಟ್​ ಜನಕರಾದ ಇಂಗ್ಲೆಂಡ್​ ತಂಡ ವಿಶ್ವಕಪ್​ ಗೆದ್ದ ಸಂಭ್ರಮವನ್ನಾಚರಿಸುತ್ತಿದ್ದರೆ, ಇತ್ತ ಇಂಗ್ಲೆಂಡ್​ ವಿಚಿತ್ರ ನಿಯಮಕ್ಕೆ ಅಸಹಾಯಕರಾಗಿ ಸೋಲೊಪ್ಪಿಕೊಂಡ ಕಹಿ ನೆನಪಿನಲ್ಲಿದೆ. ಆದರೆ, ಈ ಕಿವೀಸ್​ ತಂಡದ ಸೋಲು ಐಸಿಸಿಯ ಬೌಂಡರಿ ಕೌಂಟ್​ ಮೂಲಕ ವಿಜೇತ ತಂಡವನ್ನು ಘೋಷಿಸಬಹುದು ಎಂಬ ನಿಯಮವನ್ನು ತೆಗೆದು ಹಾಕಲು ನೆರವಾಯಿತು.

ಇಂಗ್ಲೆಂಡ್​ - ನ್ಯೂಜಿಲ್ಯಾಂಡ್​
ಇಂಗ್ಲೆಂಡ್​ - ನ್ಯೂಜಿಲ್ಯಾಂಡ್​

ಫೈನಲ್​ ಪಂದ್ಯದ ಹೈಲೈಟ್ಸ್​

ಲಂಡನ್‌ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್​​, ಹೆನ್ರಿ ನಿಕೋಲ್ಸ್ 55, ನಾಯಕ ಕೇನ್ ವಿಲಿಯಮ್ಸನ್ 30, ಟಾಮ್ ಲ್ಯಾಥಮ್ 47 ರನ್​ಗಳ ನೆರವಿನಿಂದ 50 ಓವರ್‌ಗೆ 8 ವಿಕೆಟ್ ಕಳೆದು 241 ರನ್ ಗಳಿಸಿತ್ತು.

ಈ ಮೊತ್ತವನ್ನು ಬೆನ್ನೆಟ್ಟಿದ್ದ ಇಂಗ್ಲೆಂಡ್ ಜಾನಿ ಬೈರ್ಸ್ಟೋವ್ 36, ಆಲ್​ರೌಂಡರ್​ ಬೆನ್ ಸ್ಟೋಕ್ಸ್ ಔಟಾಗದೇ 84, ಜೋಸ್ ಬಟ್ಲರ್ 59, ಭರ್ಜರಿ ಸಮಯೋಚಿತ ಆಟದ ನೆರವಿನಿಂದ 50 ಓವರ್​ಗಳಲ್ಲಿ 241 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು.

ಸೂಪರ್ ಓವರ್​ನಲ್ಲೂ ಟೈ

ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ನಡೆದಿದ್ದ ಮೊದಲ ಸೂಪರ್​ ಓವರ್​ನಲ್ಲಿ ಇಂಗ್ಲೆಂಡ್​ 16 ರನ್​ಗಳಿಸಿತ್ತು. ಇತ್ತ ಚೇಸಿಂಗ್​ ಮಾಡಿದ ನ್ಯೂಜಿಲ್ಯಾಂಡ್ ತಂಡ ಕೂಡ 16 ರನ್​ಗಳಿಸಿತು. ಆದರೆ, ಮೊದಲೇ ನಿಶ್ಚಯಿಸಿದಂತೆ ಹೆಚ್ಚು ಬೌಂಡರಿ ಸಿಡಿಸಿದ್ದ ಇಂಗ್ಲೆಂಡ್​ ತಂಡನ್ನು ವಿಜೇತ ತಂಡ ಎಂದು ಘೋಷಿಸಲಾಯಿತು. ಇಂಗ್ಲೆಂಡ್​ 26 ಬೌಂಡರಿ ಸಿಡಿಸಿದ್ದರೆ, ಕಿವೀಸ್​ ಕೇವಲ 17 ಬೌಂಡರಿ ದಾಖಲಿಸಿತ್ತು.

ಆದರೆ, ಈ ನಿಯಮ ಕ್ರಿಕೆಟ್​ ವಲಯದಲ್ಲಿ ಕೋಲಾಹಲ ಎಬ್ಬಿಸಿತು. ಬೌಂಡರಿ ಲೆಕ್ಕಾಚಾರದ ನಿರ್ಧಾರದ ವಿರುದ್ಧ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಟೀಕಿಸಲಾರಂಭಿಸಿದರು. ಕೊನೆಗೆ ಅನಿಲ್​ ಕುಂಬ್ಳೆ ನೇತೃತ್ವದ ಕ್ರಿಕೆಟ್​ ಸಲಹಾ ಸಮಿತಿ ಬೌಂಡರಿ ಲೆಕ್ಕಾಚಾರದಿಂದ ಗೆಲುವು ನಿರ್ಧರಿಸುವ ನಿಯಮವನ್ನು ರದ್ದುಮಾಡಿ, ತಂಡಕ್ಕೆ ಸಂಪೂರ್ಣ ಫಲಿತಾಂಶ ಸಿಗುವವರೆಗೂ ಸೂಪರ್​ ಓವರ್​ ನಡೆಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.