ಹ್ಯಾಮಿಲ್ಟನ್: ಕಿವೀಸ್ ನೆಲದಲ್ಲಿ ಟಿ-20 ಸರಣಿ ಗೆದ್ದ ಬಳಿಕ ಏಕದಿನ ಸರಣಿಯಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿಯನ್ನ ಆಡಲಿದೆ. ಟೆಸ್ಟ್ ಸರಣಿಗೆ ಒಂದು ವಾರಗಳ ಕಾಲಾವಕಾಶವಿದೆ. ಈ ನಡುವೆ ಭಾರತ ತಂಡದ ಆಟಗಾರರು ಜಾಲಿ ಮೂಡ್ನಲ್ಲಿದ್ದಾರೆ.
-
Game time in Hamilton. @RishabhPant17 @RealShubmanGill @navdeepsaini96 @MdShami11 #VR #GameTime pic.twitter.com/zWqNjCsJ8N
— Wriddhiman Saha (@Wriddhipops) February 12, 2020 " class="align-text-top noRightClick twitterSection" data="
">Game time in Hamilton. @RishabhPant17 @RealShubmanGill @navdeepsaini96 @MdShami11 #VR #GameTime pic.twitter.com/zWqNjCsJ8N
— Wriddhiman Saha (@Wriddhipops) February 12, 2020Game time in Hamilton. @RishabhPant17 @RealShubmanGill @navdeepsaini96 @MdShami11 #VR #GameTime pic.twitter.com/zWqNjCsJ8N
— Wriddhiman Saha (@Wriddhipops) February 12, 2020
ಟೀಂ ಇಂಡಿಯಾ ಆಟಗಾರರಾದ ಮೊಹಮ್ಮದ್ ಶಮಿ, ರಿಷಬ್ ಪಂತ್, ಶುಬ್ಮನ್ ಗಿಲ್ ಮತ್ತು ನವದೀಪ್ ಸೈನಿ ಗೇಮ್ ಆಡುತ್ತಿರುವ ಫೋಟೋ ಟ್ವೀಟ್ ಮಾಡಿರುವ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ, 'ಗೇಮ್ ಟೈಮ್ ಇನ್ ಹ್ಯಾಮಿಲ್ಟನ್' ಎಂದು ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಏಕದಿನ ಸರಣಿಯಲ್ಲಿ ವೈಟ್ ವಾಶ್ ಅನುಭವಿಸಿರುವ ಕೊಹ್ಲಿ ಪಡೆ, ಫೆಬ್ರವರಿ 21ರಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಯನ್ನ ಗೆಲ್ಲುವ ಮೂಲಕ ತಿರುಗೇಟು ನೀಡುವ ಗುರಿ ಹೊಂದಿದೆ. ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದ ಯುವ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಸಲುವಾಗಿ ಬಂಗಾಳ ತಂಡದ ಪರ ರಣಜಿ ಪಂದ್ಯಗಳನ್ನ ಆಡದಂತೆ ಬಿಸಿಸಿಐ ಸೂಚನೆ ನೀಡಿತ್ತು. ಈಗಾಗಲೇ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಸಹಾ ನ್ಯೂಜಿಲ್ಯಾಂಡ್ ತಲುಪಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಮಾಡಿದ ನಂತರ ವೃದ್ಧಿಮಾನ್ ಸಹಾ, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕೇವಲ ಕೀಪಿಂಗ್ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲೂ ಸಹಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.