ETV Bharat / sports

ವಿಶ್ವಕಪ್​​ನಲ್ಲಿ 7ನೇ ಬಾರಿ... ಐಸಿಸಿ ಟೂರ್ನಿಗಳಲ್ಲಿ ಸತತ 6ನೇ ಸಲ ಸೆಮೀಸ್​ಗೆ ಟೀಂ ಇಂಡಿಯಾ! - ಸೆಮಿಫೈನಲ್​

ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ನಂತರ 2ನೇ ತಂಡವಾಗಿ ಸೆಮಿಫೈನಲ್​ಗೆ ಟೀಂ ಇಂಡಿಯಾ ಲಗ್ಗೆ ಹಾಕಿದ್ದು, ಅನೇಕ ದಾಖಲೆ ನಿರ್ಮಿಸಿದೆ.

ಟೀಂ ಇಂಡಿಯಾ ಸಂಭ್ರಮ
author img

By

Published : Jul 2, 2019, 11:46 PM IST

Updated : Jul 3, 2019, 3:07 AM IST

ಬರ್ಮಿಂಗ್​ಹ್ಯಾಮ್​: ಪ್ರಸಕ್ತ ಸಾಲಿನ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಪಡೆ, ಆಸ್ಟ್ರೇಲಿಯಾ ಬಳಿಕ 2ನೇ ತಂಡವಾಗಿ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದ್ದು, ಈ ಮೂಲಕ 7ನೇ ಬಾರಿ ಮೆಗಾ ಟೂರ್ನಿಯಲ್ಲಿ ಸೆಮೀಸ್​ ಪ್ರವೇಶ ಪಡೆದ ತಂಡ ಎಂಬ ರೆಕಾರ್ಡ್​ ಬರೆದಿದೆ.

ಈ ಹಿಂದೆ ಭಾರತ 1983,1987,1996, 2003, 2011 ಹಾಗೂ 2015ರ ವಿಶ್ವಕಪ್​​ಗಳಲ್ಲಿ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿತ್ತು. ಈ ಸಲವೂ ಬಾಂಗ್ಲಾ ವಿರುದ್ಧ 28 ರನ್​ಗಳ ಗೆಲುವು ದಾಖಲು ಮಾಡುವ ಮೂಲಕ ಮುಂದಿನ ಹಂತಕ್ಕೆ ಅವಕಾಶ ಪಡೆದುಕೊಂಡಿದೆ. ಇನ್ನು ವಿಶ್ವಕಪ್​​ನಲ್ಲಿ ಬಾಂಗ್ಲಾದೇಶಕ್ಕೆ ಇದು ಭಾರತದ ವಿರುದ್ಧ ಸತತ ಮೂರನೇ ಸೋಲು. 2015ರಲ್ಲಿ ವಿಶ್ವಕಪ್​ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದ್ದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು.

ರೋಹಿತ್​ ಶರ್ಮಾ ದಾಖಲೆ
ವಿಶ್ವಕಪ್​ನಲ್ಲಿ ಈ ಹಿಂದೆ ಸೌರವ್​ ಗಂಗೂಲಿ 2003ರ ವಿಶ್ವಕಪ್​​ನಲ್ಲಿ ಮೂರು ಶತಕ ದಾಖಲಿಸಿದ್ದರು. ಇದೀಗ ರೋಹಿತ್​ ಶರ್ಮಾ ಆ ದಾಖಲೆ ಅಳಿಸಿ ಹಾಕುವ ಮೂಲಕ 4 ಶತಕ ಸಿಡಿಸಿರುವ ಭಾರತದ ಮೊದಲ ಬ್ಯಾಟ್ಸ್​ಮನ್​ ಎಂಬ ರೆಕಾರ್ಡ್​ ಸಹ ಬರೆದಿದ್ದಾರೆ. ಗಂಗೂಲಿ ಕಿನ್ಯಾ ವಿರುದ್ಧ 2 ಶತಕ ಹಾಗೂ ನಮಿಬಿಯಾ ವಿರುದ್ಧ 1 ಶತಕ ದಾಖಲು ಮಾಡಿದ್ದರು.

ಸಚಿನ್​ ದಾಖಲೆ ಸಮ
ವಿಶ್ವಕಪ್​​ನಲ್ಲಿ ಈ ಹಿಂದೆ ಯುವರಾಜ್​ ಸಿಂಗ್​ 2011ರಲ್ಲಿ 4 ಸಲ ಮ್ಯಾನ್​ ಆಫ್​ ದಿ ಮ್ಯಾಚ್​ ಅವಾರ್ಡ್​ ಪಡೆದುಕೊಂಡಿದ್ದು, ಸಚಿನ್​ 2003ರಲ್ಲಿ ಮೂರು ಸಲ ಈ ಪ್ರಶಸ್ತಿ ಪಡೆದುಕೊಂಡಿದ್ದರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 104 ರನ್ ​ಗಳಿಕೆ ಮಾಡಿರುವ ರೋಹಿತ್​ 3ನೇ ಸಲ ಈ ಅವಾರ್ಡ್​ ಪಡೆದುಕೊಂಡು ಸಚಿನ್​ ದಾಖಲೆ ಸರಿಗಟ್ಟಿದ್ದಾರೆ.

ಐಸಿಸಿ ಟೂರ್ನಿಯಲ್ಲಿ ಸತತವಾಗಿ 6ನೇ ಸಲ ಸೆಮೀಸ್​ಗೆ ಭಾರತ ಲಗ್ಗೆ

ಟೀಂ ಇಂಡಿಯಾ 2013ರಿಂದಲೂ ಐಸಿಸಿ ಆಯೋಜನೆ ಮಾಡುತ್ತಿರುವ ಟೂರ್ನಿಗಳಲ್ಲಿ ಸತತವಾಗಿ 6ನೇ ಸಲ ಸೆಮಿಫೈನಲ್​ಗೆ ಲಗ್ಗೆ ಹಾಕಿ ದಾಖಲೆ ನಿರ್ಮಾಣ ಮಾಡಿದೆ

  • 2013ರ ಚಾಂಪಿಯನ್​ ಟ್ರೋಫಿ(ಗೆಲುವು)
  • 2014ರ ಟಿ-20 ವಿಶ್ವಕಪ್​​(ರನ್ನರ್​ಅಪ್​)
  • 2015ರ ವಿಶ್ವಕಪ್​​(ಸೆಮಿಫೈನಲ್​)
  • 2016ರ ಟಿ20 ವಿಶ್ವಕಪ್​​(ಸೆಮಿಫೈನಲ್​​)
  • 2017ರ ಚಾಂಪಿಯನ್​ ಟ್ರೋಫಿ(ರನ್ನರ್​ ಅಪ್​)
  • 2019ರ ವಿಶ್ವಕಪ್​​​ ಸೆಮಿಫೈನಲ್​​

Intro:Body:

ಬರ್ಮಿಂಗ್​ಹ್ಯಾಮ್​: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ಕೊಹ್ಲಿ ಪಡೆ ಆಸ್ಟ್ರೇಲಿಯಾ ಬಳಿಕ 2ನೇ ತಂಡವಾಗಿ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದ್ದು, ಈ ಮೂಲಕ 7ನೇ ಬಾರಿ ಮೆಗಾಟೂರ್ನಿಯಲ್ಲಿ ಸೆಮೀಸ್​ ಪ್ರವೇಶ ಪಡೆದ ತಂಡ ಎಂಬ ರೆಕಾರ್ಡ್​ ಬರೆದಿದೆ. 

ಈ ಹಿಂದೆ ಭಾರತ 1983,1987,1996,2003,2011 ಹಾಗೂ 2015ರ ವಿಶ್ವಕಪ್​​ನಲ್ಲಿ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿತು. ಈ ಸಲವೂ ಬಾಂಗ್ಲಾ ವಿರುದ್ಧ 28ರನ್​ಗಳ ಗೆಲುವು ದಾಖಲು ಮಾಡುವ ಮೂಲಕ ಮುಂದಿನ ಹಂತಕ್ಕೆ ಅವಕಾಶ ಪಡೆದುಕೊಂಡಿದೆ. ಇನ್ನು ವಿಶ್ವಕಪ್​​ನಲ್ಲಿ ಬಾಂಗ್ಲಾದೇಶಕ್ಕೆ ಇದು ಭಾರತದ ವಿರುದ್ಧ ಸತತ ಮೂರನೇ ಸೋಲು. 2015ರಲ್ಲಿ ವಿಶ್ವಕಪ್​ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದ್ದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು. 

ರೋಹಿತ್​ ಶರ್ಮಾ ದಾಖಲೆ ಬ್ರೇಕ್​

ವಿಶ್ವಕಪ್​ನಲ್ಲಿ ಈ ಹಿಂದೆ ಸೌರವ್​ ಗಂಗೂಲಿ 2003ರ ವಿಶ್ವಕಪ್​​ನಲ್ಲಿ ಮೂರು ಶತಕ ದಾಖಲಿಸಿದ್ದರು. ಇದೀಗ ರೋಹಿತ್​ ಶರ್ಮಾ ಆ ದಾಖಲೆ ಅಳಿಸಿಹಾಕುವ ಮೂಲಕ 4 ಶತಕ ಸಿಡಿಸಿರುವ ಭಾರತದ ಮೊದಲ ಬ್ಯಾಟ್ಸ್​ಮನ್​ ಎಂಬ ರೆಕಾರ್ಡ್​ ಸಹ ಬರೆದಿದ್ದಾರೆ. ಗಂಗೂಲಿ ಕಿನ್ಯಾ ವಿರುದ್ಧ 2 ಶತಕ ಹಾಗೂ ನಮಿಬಿಯಾ ವಿರುದ್ಧ 1 ಶತಕ ದಾಖಲು ಮಾಡಿದ್ದರು. 

ಸಚಿನ್​ ದಾಖಲೆ ಸರಿಸಮ

ವಿಶ್ವಕಪ್​​ನಲ್ಲಿ ಈ ಹಿಂದೆ ಯುವರಾಜ್​ ಸಿಂಗ್​  2011ರಲ್ಲಿ 4 ಸಲ ಮ್ಯಾನ್​ ಆಫ್​ ದಿ ಮ್ಯಾಚ್​ ಅವಾರ್ಡ್​ ಪಡೆದುಕೊಂಡಿದ್ದು, ಸಚಿನ್​ 2003ರಲ್ಲಿ ಮೂರು ಸಲ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 104ರನ್​ಗಳಿಕೆ ಮಾಡಿರುವ ರೋಹಿತ್​ 3ನೇ ಸಲ ಈ ಅವಾರ್ಡ್​ ಪಡೆದುಕೊಂಡು ಸಚಿನ್​ ದಾಖಲೆ ಸರಿಗಟ್ಟಿದ್ದಾರೆ. 

ಐಸಿಸಿ ಟೂರ್ನಿಯಲ್ಲಿ ಸತತವಾಗಿ 6ನೇ ಸಲ ಸೆಮೀಸ್​ಗೆ ಭಾರತ ಲಗ್ಗೆ 

ಟೀಂ ಇಂಡಿಯಾ 2013ರಿಂದಲೂ ಐಸಿಸಿ ಆಯೋಜನೆ ಮಾಡುತ್ತಿರುವ ಟೂರ್ನಿಗಳಲ್ಲಿ ಸತತವಾಗಿ 6ನೇ ಸಲ ಸೆಮಿಫೈನಲ್​ಗೆ ಲಗ್ಗೆ ಹಾಕಿ ದಾಖಲೆ ನಿರ್ಮಾಣ ಮಾಡಿದೆ

 2013ರ ಚಾಂಪಿಯನ್​ ಟ್ರೋಫಿ(ಗೆಲುವು)

2014ರ ಟಿ20 ವಿಶ್ವಕಪ್​​(ರನ್ನರ್​ಅಪ್​)

2015ರ ವಿಶ್ವಕಪ್​​(ಸೆಮಿಫೈನಲ್​)

2017ರ ಚಾಂಪಿಯನ್​ ಟ್ರೋಫಿ(ರನ್ನರ್​ ಅಪ್​)

2019ರ ವಿಶ್ವಕಪ್​​​ ಸೆಮಿಫೈನಲ್​​

Conclusion:
Last Updated : Jul 3, 2019, 3:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.