ಮೆಲ್ಬೋರ್ನ್: ಜನವರಿ 7ರಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭಗೊಳ್ಳಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಗಾಯಾಳು ಉಮೇಶ್ ಯಾದವ್ ಜಾಗಕ್ಕೆ ಟಿ. ನಟರಾಜನ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
-
NEWS: T Natarajan to replace Umesh Yadav in India’s Test squad. #TeamIndia #AUSvIND
— BCCI (@BCCI) January 1, 2021 " class="align-text-top noRightClick twitterSection" data="
Details 👉 https://t.co/JeZLOQaER3 pic.twitter.com/G9oXK5MQUE
">NEWS: T Natarajan to replace Umesh Yadav in India’s Test squad. #TeamIndia #AUSvIND
— BCCI (@BCCI) January 1, 2021
Details 👉 https://t.co/JeZLOQaER3 pic.twitter.com/G9oXK5MQUENEWS: T Natarajan to replace Umesh Yadav in India’s Test squad. #TeamIndia #AUSvIND
— BCCI (@BCCI) January 1, 2021
Details 👉 https://t.co/JeZLOQaER3 pic.twitter.com/G9oXK5MQUE
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಉಮೇಶ್ ಯಾದವ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಆಯ್ಕೆ ಸಮಿತಿ ಈ ನಿರ್ಧಾರ ಕೈಗೊಂಡಿದೆ.
ತಮಿಳುನಾಡಿನ ರಣಜಿ ಆಟಗಾರ ನಟರಾಜನ್, ಈಗಾಗಲೇ ಟಿ-20 ಪಂದ್ಯದಲ್ಲಿ ತಮ್ಮ ಬೌಲಿಂಗ್ ಸಾಮರ್ಥ್ಯ ತೋರಿಸಿದ್ದಾರೆ. ಉದಯೋನ್ಮುಖ ವೇಗಿ ನಟರಾಜನ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದು, ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಕಂಟಕವಾಗಿದ್ದರು.
ವಿಶೇಷವೆಂದರೆ, ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮುಂದಿನ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಹೊಸ ಪ್ರತಿಭೆಗಳು ಅವಕಾಶ ಪಡೆದುಕೊಳ್ಳುತ್ತಿದ್ದು, ತಮ್ಮ ಸಾಮರ್ಥ್ಯ ತೋರಿಸಲು ಇದೊಂದು ಉತ್ತಮ ವೇದಿಕೆ ಎಂದು ಬಿಸಿಸಿಐ ಹೇಳಿದೆ.
ಈಗಾಗಲೇ ಟೀಂ ಇಂಡಿಯಾದ ಹಿರಿಯ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ತಂಡದಿಂದ ಹೊರಗುಳಿದಿದ್ದು, ಇದೀಗ ಉಮೇಶ್ ಯಾದವ್ ಸೇವೆ ಕೂಡ ತಂಡಕ್ಕೆ ಅಲಭ್ಯವಾಗಲಿದೆ. ಇದರ ಮಧ್ಯೆ ಕ್ವಾರಂಟೈನ್ನಲ್ಲಿದ್ದ ಉಪನಾಯಕ ರೋಹಿತ್ ಶರ್ಮಾ ತಂಡ ಸೇರಿಕೊಂಡಿರುವುದು ತಂಡದ ಶಕ್ತಿ ಹೆಚ್ಚಿಸಿದೆ.
ಕಾಂಗರೂ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಪೈಕಿ ಈಗಾಗಲೇ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ತಲಾ ಒಂದು ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ.
ಸಂಭವನೀಯ ಟೀಂ ಇಂಡಿಯಾ:
ಅಜಿಂಕ್ಯ ರಹಾನೆ (ಕ್ಯಾಪ್ಟನ್), ರೋಹಿತ್ ಶರ್ಮಾ (ಉಪನಾಯಕ), ಮಯಾಂಕ್ ಅಗರವಾಲ್, ಪೃಥ್ವಿ ಶಾ, ಕೆ.ಎಲ್.ರಾಹುಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿ.ಕೀಪರ್), ರಿಷಭ್ ಪಂತ್ (ವಿ,ಕೀಪರ್), ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗು ಟಿ.ನಟರಾಜನ್.