ಹೈದರಾಬಾದ್: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಕೊನೆಗೂ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿದೆ.
-
Congrats to all the teams that made it to the knockouts of the #SyedMushtaqAliTrophy. It was a very tough format but the teams that qualified have shown character. Good luck, everyone. May the best team win #DoddaMathu
— ದೊಡ್ಡ ಗಣೇಶ್ | Dodda Ganesh (@doddaganesha) January 19, 2021 " class="align-text-top noRightClick twitterSection" data="
">Congrats to all the teams that made it to the knockouts of the #SyedMushtaqAliTrophy. It was a very tough format but the teams that qualified have shown character. Good luck, everyone. May the best team win #DoddaMathu
— ದೊಡ್ಡ ಗಣೇಶ್ | Dodda Ganesh (@doddaganesha) January 19, 2021Congrats to all the teams that made it to the knockouts of the #SyedMushtaqAliTrophy. It was a very tough format but the teams that qualified have shown character. Good luck, everyone. May the best team win #DoddaMathu
— ದೊಡ್ಡ ಗಣೇಶ್ | Dodda Ganesh (@doddaganesha) January 19, 2021
ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ಜನವರಿ 18ರಂದು ಉತ್ತರ ಪ್ರದೇಶದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 5 ವಿಕೆಟ್ಗಳ ಸುಲಭ ಗೆಲುವು ಕಂಡಿತ್ತು. ಈ ಮೂಲಕ ಕರ್ನಾಟಕ ತಂಡ ಎಲೈಟ್ ಗ್ರೂಪ್ನ 'ಎ' ಯಲ್ಲಿ ಪಂಜಾಬ್ ಬಳಿಕ ದ್ವಿತೀಯ ಸ್ಥಾನದೊಂದಿಗೆ ಲೀಗ್ ಹಂತದ ಸ್ಪರ್ಧೆ ಮುಗಿಸಿತ್ತು.
ಅಗ್ರಸ್ಥಾನದಲ್ಲಿರುವ ಪಂಜಾಬ್ 5 ಪಂದ್ಯಗಳಲ್ಲಿ 5 ಗೆದ್ದು 20 ಪಾಯಿಂಟ್ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನದಲ್ಲಿರುವ ಕರ್ನಾಟಕ 5ರಲ್ಲಿ 4 ಗೆದ್ದು 16 ಪಾಯಿಂಟ್ಸ್ ಕಲೆ ಹಾಕಿದೆ. ತಮಿಳುನಾಡು ತಂಡ ಈಗಾಗಲೇ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದೆ. ಕ್ವಾರ್ಟರ್ ಫೈನಲ್ನ ಎಲ್ಲ ಪಂದ್ಯಗಳು ಅಹ್ಮದಾಬಾದ್ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿವೆ.
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆರು ತಂಡಗಳು ಹೆಚ್ಚಿನ ಪಾಯಿಂಟ್ ಆಧಾರದ ಮೇಲೆ ಡೈರೆಕ್ಟ್ ಆಗಿ ಕ್ವಾಲಿಫೈಯರ್ ಆಗಿದ್ದು, ಉಳಿದ ಎರಡು ತಂಡಗಳು ಪಾಯಿಂಟ್ ಹಾಗೂ ಹೆಚ್ಚಿನ ರನ್ರೇಟ್ ಆಧಾರದ ಮೇಲೆ ಕ್ವಾಲಿಫೈಯರ್ ಆಗಿವೆ. ರಾಜಸ್ಥಾನ ಗೆಲುವು ದಾಖಲು ಮಾಡಿದ್ದರಿಂದ ಮಧ್ಯಪ್ರದೇಶ ರನ್ರೇಟ್ ಕಡಿಮೆಯಾಗಿದ್ದು, ಕರ್ನಾಟಕ ಮುಂದಿನ ಹಂತಕ್ಕೆ ಅವಕಾಶ ಪಡೆದುಕೊಂಡಿದೆ.
ಕ್ವಾರ್ಟರ್ಫೈನಲ್ಗೆ ತಲುಪಿದ ತಂಡಗಳು
ಬಿಹಾರ,ಚಂಡೀಗಢ,ಹರಿಯಾಣ,ರಾಜಸ್ಥಾನ,ಬರೋಡಾ,ತಮಿಳುನಾಡು,ಪಂಜಾಬ್, ಕರ್ನಾಟಕ