ETV Bharat / sports

ಬಲಿಷ್ಠ ಮುಂಬೈ ಮಣಿಸಿದ ಹರಿಯಾಣ; ಪದಾರ್ಪಣೆ ಪಂದ್ಯದಲ್ಲಿ ತೆಂಡೂಲ್ಕರ್‌ ಪುತ್ರನಿಗೆ ನಿರಾಶೆ

author img

By

Published : Jan 15, 2021, 3:53 PM IST

ಮುಂಬೈ ತಂಡದ ವಿರುದ್ಧ ಹರಿಯಾಣ ಬರೋಬ್ಬರಿ 8 ವಿಕೆಟ್​ಗಳ ಗೆಲುವು ದಾಖಲು ಮಾಡಿದ್ದು, ಮುಂಬೈ ತಂಡ ಮತ್ತೊಮ್ಮೆ ನಿರಾಸೆ ಅನುಭವಿಸಿದೆ.

Syed Mushtaq Ali Trophy
Syed Mushtaq Ali Trophy

ಮುಂಬೈ: ಪ್ರಸಕ್ತ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡದ ಮೇಲೆ ಹರಿಯಾಣ ಸವಾರಿ ಮಾಡಿದ್ದು, 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ಹರಿಯಾಣ ಬೌಲಿಂಗ್ ದಾಳಿಗೆ ತತ್ತರಿಸಿ 19.3 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 143 ರನ್ ಗಳಿಕೆ ಮಾಡಿತು. ತಂಡದ ಪರ ಆರಂಭಿಕ ಆಟಗಾರ ಜೈಸ್ವಾಲ್ ​(35), ಸರ್ಫರಾಜ್ ಖಾನ್ ​(30) ಹಾಗೂ ಅಂಕೋಲ್ಕರ್​ (37) ರನ್ ಕಲೆ ಹಾಕಿದರು. ಉಳಿದಂತೆ ಯಾವೊಬ್ಬ ಪ್ಲೇಯರ್ಸ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ಹರಿಯಾಣ ತಂಡದ ಪರ ಅರುಣ್​ 3 ವಿಕೆಟ್, ಜಯಂತ್ ಯಾದವ್​ 4 ವಿಕೆಟ್ ಪಡೆದುಕೊಂಡರೆ, ಚಹಾಲ್, ರಾಹುಲ್​ ತೆವಾಟಿಯಾ ತಲಾ 1 ವಿಕೆಟ್ ಪಡೆದರು.

144 ರನ್​ ಗುರಿ ಬೆನ್ನತ್ತಿದ್ದ ಹರಿಯಾಣ ಆರಂಭದಲ್ಲೇ ಆಘಾತ ಅನುಭವಿಸಿತು. ಚೈತನ್ಯ ಬಿಶ್ಣೋಯಿ 4 ರನ್​ಗಳಿಸಿದ್ದ ವೇಳೆ ಅರ್ಜುನ್ ತೆಂಡೂಲ್ಕರ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕ್ರೀಸಿಗೆ ಬಂದ ಅರುಣ್​ ಚಪ್ರಾಣ್​ 19 ರನ್​ಗಳಿಸಿದರು. ತದನಂತರ ಒಂದಾದ ಹಿಮಾನ್ಶು ರಾಣಾ (75) ಅಜೇಯ​ ಹಾಗೂ ಶುವಂ ಚೌಹಾಣ್​ (43) ರನ್​ ಗಳಿಕೆ ಮಾಡಿ ತಂಡವನ್ನು 17.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿಸಿದರು.

ಮುಂಬೈ ಪರ ಅರ್ಜುನ್​ ತೆಂಡೂಲ್ಕರ್ ಹಾಗೂ ಶಾಮ್ಸ್​ ಮುಲಾನಿ ತಲಾ 1ವಿಕೆಟ್ ಪಡೆದುಕೊಂಡರು.

ಅರ್ಜುನ್ ತೆಂಡೂಲ್ಕರ್ ಪದಾರ್ಪಣೆ

ಅಂಡರ್​-19 ಹಾಗೂ ಮುಂಬೈನ ವಿವಿಧ ತಂಡಗಳಲ್ಲಿ ಆಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಇಂದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡರು. ಈ ಮೂಲಕ ಹಿರಿಯರ ತಂಡದಲ್ಲೂ ಭಾಗಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.