ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದ್ದು, ವಿರಾಟ್ ಕೊಹ್ಲಿ ತಂಡವನ್ನ ಮುನ್ನಡೆಸಲಿದ್ದಾರೆ.
ಗಾಯಗೊಂಡು ತಂಡದಿಂದ ಹೊರಬಿದ್ದಿದ್ದ ಆರಂಭಿಕ ಶಿಖರ್ ಧವನ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹಾರ್ಧಿಕ್ ಪಾಂಡ್ಯಾ ಹಾಗೂ ಬೌಲರ್ ಭುವನೇಶ್ವರ್ ಕುಮಾರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ ಡಿವೈ ಪಾಟೀಲ್ ಟಿ-20 ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಟಾಪ್ ಸ್ಕೋರ್ ಮಾಡಿದ್ದ ಆಟಗಾರನೋರ್ವ ತಂಡ ಸೇರಿಕೊಳ್ಳಲು ವಿಫಲಗೊಂಡಿದ್ದಾರೆ.
![Suryakumar Yadav](https://etvbharatimages.akamaized.net/etvbharat/prod-images/drakc9guwaeffph_0903newsroom_1583762742_57.jpg)
ಡಿವೈ ಪಾಟೀಲ್ ಟಿ20 ಕ್ರಿಕೆಟ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯಗಿಂತಲೂ ಅತಿ ಹೆಚ್ಚು ರನ್ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದಾರೆ. ತಾವಾಡಿದ್ದ ಆರು ಪಂದ್ಯಗಳಲ್ಲಿ ಮೂರು ಶತಕ ಸೇರಿದಂತೆ 441ರನ್ಗಳಿಕೆ ಮಾಡಿದ್ದ ಈ ಪ್ಲೇಯರ್ ಬರೋಬ್ಬರಿ 37 ಸಿಕ್ಸರ್ ಸಿಡಿಸಿದ್ದರು. ಇವರ ಪ್ರದರ್ಶನಕ್ಕೆ ಖುದ್ದಾಗಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಕೂಡ ಅಭಿನಂದನೆ ಸಲ್ಲಿಕೆ ಮಾಡಿದ್ದರು. ಒಂದು ಪಂದ್ಯದಲ್ಲಿ 36 ಎಸೆತಗಳಲ್ಲಿ ಬರೋಬ್ಬರಿ 143ರನ್ಗಳಿಕೆ ಮಾಡಿದ್ದ ಈ ಪ್ಲೇಯರ್ 7 ಸಿಕ್ಸರ್ ಹಾಗೂ 14 ಬೌಂಡರಿ ಸಿಡಿಸಿದ್ದರು. ಆದರೆ ಆಯ್ಕೆ ಸಮಿತಿ ಮಾತ್ರ ಇವರಿಗೆ ಅವಕಾಶ ನೀಡಲ್ಲ.
![Suryakumar Yadav](https://etvbharatimages.akamaized.net/etvbharat/prod-images/dz8cvcgwwaeyy78_0903newsroom_1583762742_767.jpg)
ಹರ್ಭಜನ್ ಸಿಂಗ್ ಕಿಡಿ
ಟೀಂ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ಗೆ ಸ್ಥಾನ ಸಿಗದ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಿನ್ನರ್ ಹರ್ಭಜನ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ. ತಂಡಕ್ಕೆ ಇವರನ್ನ ಆಯ್ಕೆ ಮಾಡದೇ ಇರಲು ಕಾರಣವೇನು? ಎಲ್ಲರಂತೆ ಇವರು ಪ್ರತಿವೊಂದು ಪಂದ್ಯದಲ್ಲೂ ರನ್ಗಳಿಕೆ ಮಾಡುತ್ತಿದ್ದಾರೆ. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಬೇಡಿ ಎಂದು ಹರಿಹಾಯ್ದಿದ್ದಾರೆ.