ನವದೆಹಲಿ: ವೈಯಕ್ತಿಕ ಕಾರಣಗಳಿಂದ ಐಪಿಎಲ್ನಿಂದ ಹಿಂದೆ ಸರಿದಿರುವ ಸುರೇಶ್ ರೈನಾ ಅನುಪಸ್ಥಿತಿ ಸಿಎಸ್ಕೆ ತಂಡದಲ್ಲಿ ದೊಡ್ಡ ಅಂತರವನ್ನು ಸೃಷ್ಟಿಸಲಿದೆ ಎಂದು ದಕ್ಷಿಣ ಅಫ್ರಿಕಾದ ಮಾಜಿ ಆಲ್ರೌಂಡರ್ ಆಲ್ಬಿ ಮಾರ್ಕೆಲ್ ಅಭಿಪ್ರಾಯ ಪಟ್ಟಿದ್ದಾರೆ.
ಸಿಎಸ್ಕೆ ತಂಡದ ಇಷ್ಟುವರ್ಷಗಳ ಯಶಸ್ಸಿನಲ್ಲಿ ಪ್ರಮುಖ ಭಾಗವಾಗಿದ್ದ ಸುರೇಶ್ ರೈನಾ 2020ರ ಐಪಿಎಲ್ನಲ್ಲಿ ಹಿಂದೆ ಸರಿದಿದ್ದಾರೆ. ಆದರೆ ಧೋನಿ ನೇತೃತ್ವದ ತಂಡಕ್ಕೆ ಹೆಚ್ಚೇನು ಪರಿಣಾಮ ಬೀರುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಿಎಸ್ಕೆ ತಂಡದ ಮಾಜಿ ಆಟಗಾರ ಆಲ್ಬಿ ಮಾರ್ಕರ್ ರೈನಾ ಅನುಪಸ್ಥಿತಿ ತಂಡದಲ್ಲಿ ದೊಡ್ಡ ಅಂತರವನ್ನುಂಟು ಮಾಡಲಿದೆ. ಇದರಿಂದ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಫ್ರಾಂಚೈಸಿ ಬದಲಾವಣೆ ಮಾಡಬೇಕಾಗುತ್ತದೆ ಎಂದು ದಕ್ಷಿಣ ಆಫ್ರಿಕಾದ ಆಲ್ಬಿ ಮಾರ್ಕೆಲ್ ತಿಳಿಸಿದ್ದಾರೆ.
" ರೈನಾ ಸಿಎಸ್ಕೆ ತಂಡಕ್ಕೆ ರನ್ಮಷಿನ್ ಹಾಗೂ ಫೀಲ್ಡಿಂಗ್ನಲ್ಲಿ ವಿದ್ಯುತ್ನಷ್ಟೇ ಚುರುಕಾಗಿದ್ದರು. ಅವರ ಅನುಪಸ್ಥಿತಿಯು ಭಾರಿ ಅಂತರವನ್ನು ಸೃಷ್ಟಿಸುತ್ತದೆ" ಎಂದು ಇಎಸ್ಪಿನ್ಗೆ ನೀಡಿದ ಸಂದರ್ಶದಲ್ಲಿ ಅವರು ತಿಳಿಸಿದ್ದಾರೆ.
ಮಾತು ಮುಂದುವರಿಸಿ ಬಹುಶಃ ಅವರ ಸ್ಥಾನವನ್ನು ಸರಿದೂಗಿಸಲು ಮತ್ತು ತಂಡವನ್ನು ಸಮತೋಲನವನ್ನು ನಿಯಂತ್ರಿಸಲು ತಂಡ ಕೆಲವು ಬದಲಾವಣೆಗಳನ್ನು ಮಾಡಬೇಕಾಗಬಹುದು ಎಂದಿದ್ದಾರೆ.
ಇನ್ನು ಎಂಎಸ್ ಧೋನಿ ನಾಯಕತ್ವದ ಬಗ್ಗೆ ಮಾತನಾಡಿರುವ ಅವರು , ನಾನು ಸಿಎಸ್ಕೆ ತಂಡದಲ್ಲಿದ್ದಾಗ ಸಾಕಷ್ಟು ಆನಂದಿಸಿದ್ದೇನೆ. ನಾವು 6 ಯಶಸ್ವಿ ವರ್ಷಗಳನ್ನು ಕಂಡಿದ್ದೆವು. ಧೋನಿ ನಮ್ಮ ಯಶಸ್ವಿನ ಮೂಲವಾಗಿದ್ದರು. ಅವರು ಉದಾಹರಣೆಯಿಂದ ಮುನ್ನಡೆಸುವ ವ್ಯಕ್ತಿ. ಏನು ಮಾಡಿದರೂ ಬಹಳ ಕೌಶಲ್ಯಸದಿಂದ ಮಾಡುತ್ತಿದ್ದರು. ಆದರೆ ಒತ್ತಡವನ್ನು ನಿಯಂತ್ರಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದ್ದರ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಅವರು ನಂತರ ಆರ್ಸಿಬಿ, ಡೆಲ್ಲಿ ಡೇರ್ ಡೇವಿಲ್ಸ್ ಹಾಗೂ ರೈಸಿಂಗ್ ಪುಣೆ ವಾರಿಯರ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಒಟ್ಟಾರೆ 91 ಪಂದ್ಯಗಳನ್ನಾಡಿದ್ದ ಮಾರ್ಕೆಲ್ 974 ರನ್ ಹಾಗೂ 85 ವಿಕೆಟ್ ಪಡೆದಿದ್ದಾರೆ.