ETV Bharat / sports

ಮುಂದಿನ ವರ್ಷದ ಐಪಿಎಲ್​ನಲ್ಲಿ 9ನೇ ತಂಡ ಎಂಟ್ರಿ.. ನಾಯಕನಾರು? - Ahmadabad

ನಾಲ್ಕೇ ತಿಂಗಳಲ್ಲಿ ಮತ್ತೊಂದು ಐಪಿಎಲ್ ಲೀಗ್​ ನಡೆಯಲಿದ್ದು, ಅದಕ್ಕೂ ಮುನ್ನ ಜನವರಿ ಅಥವಾ ಫೆಬ್ರವರಿಯಲ್ಲಿ ಐಪಿಎಲ್ ಮೆಗಾ ಆ್ಯಕ್ಷನ್​ ನಡೆಯಲಿದೆ. ಇದರಲ್ಲಿ ಹಿಂದಿನ ಪ್ರಕ್ರಿಯೆಯಂತೆ ಫ್ರಾಂಚೈಸಿಗಳು 3 ಆಟಗಾರರನ್ನು ಉಳಿಸಿಕೊಂಡು, ಇಬ್ಬರು ಆಟಗಾರರನ್ನು ಆರ್​ಟಿ ಕಾರ್ಡ್​ ಬಳಸಿ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ..

ಐಪಿಎಲ್ 2021
ಐಪಿಎಲ್ 2021
author img

By

Published : Nov 11, 2020, 5:16 PM IST

ಮುಂಬೈ: ವಿಶ್ವದ ಅತ್ಯಂತ ಪ್ರಸಿದ್ಧ ಹಾಗೂ ದೊಡ್ಡ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಆವೃತ್ತಿಯನ್ನು ಕೊರೊನಾ ಮಧ್ಯೆಯೇ ದಾದಾ ನೇತೃತ್ವದ ಬಿಸಿಸಿಐ ಭರ್ಜರಿಯಾಗಿ ಮುಗಿಸಿದೆ. ಇದೀಗ ಅಭಿಮಾನಿಗಳಿಗೆ ಖುಷಿ ವಿಚಾರವೊಂದು ಕೇಳಿ ಬರುತ್ತಿದ್ದು, 2021ರ ಐಪಿಎಲ್​ನಲ್ಲಿ 8ರ ಬದಲಾಗಿ 9 ತಂಡಗಳು ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮುಂದಿನ ನಾಲ್ಕೇ ತಿಂಗಳಲ್ಲಿ ಮತ್ತೊಂದು ಐಪಿಎಲ್ ಲೀಗ್​ ನಡೆಯಲಿದ್ದು, ಅದಕ್ಕೂ ಮುನ್ನ ಜನವರಿ ಅಥವಾ ಫೆಬ್ರವರಿಯಲ್ಲಿ ಐಪಿಎಲ್ ಮೆಗಾ ಆ್ಯಕ್ಷನ್​ ನಡೆಯಲಿದೆ. ಇದರಲ್ಲಿ ಹಿಂದಿನ ಪ್ರಕ್ರಿಯೆಯಂತೆ ಫ್ರಾಂಚೈಸಿಗಳು 3 ಆಟಗಾರರನ್ನು ಉಳಿಸಿಕೊಂಡು, ಇಬ್ಬರು ಆಟಗಾರರನ್ನು ಆರ್​ಟಿ ಕಾರ್ಡ್​ ಬಳಸಿ ತಂಡಕ್ಕೆ ಸೇರಿಸಿಕೊಳ್ಳಬಹುದುದಾಗಿದೆ.

ಸುರೇಶ್ ರೈನಾ
ಸುರೇಶ್ ರೈನಾ

ಅದಕ್ಕೂ ಹೆಚ್ಚಿನ ಖುಷಿಕೊಡುವ ವಿಚಾರವೆಂದರೆ ಮುಂದಿನ ಐಪಿಎಲ್​ನಲ್ಲಿ 9ನೇ ತಂಡ ಐಪಿಎಲ್​ಗೆ ಸೇರ್ಪಡೆಗೊಳ್ಳಲಿದೆ. ಗುಜರಾತ್​ ರಾಜ್ಯದ ಅಹ್ಮದಾಬಾದ್​ ನಗರದ ತಂಡ ಐಪಿಎಲ್​ನಲ್ಲಿ ಸ್ಪರ್ಧಸಲಿದೆ.

ಈ ಹಿಂದೆ ಗುಜರಾತ್ ಲಯನ್ಸ್ ಹೆಸರಿನ ತಂಡ ಕೂಡ ಚೆನ್ನೈ ಮತ್ತು ರಾಜಸ್ಥಾನ್ ತಂಡಗಳು 2 ವರ್ಷ ನಿಷೇಧಗೊಂಡಿದ್ದ ವೇಳೆ ಐಪಿಎಲ್​ನ ಭಾಗವಾಗಿದ್ದವು. ಇದೀಗ ಗುಜರಾತ್​ ರಾಜ್ಯದಿಂದಲೇ ಮತ್ತೊಂದು ತಂಡ ಶ್ರೀಮಂತ ಲೀಗ್​ಗೆ ಕಾಲಿಡುತ್ತಿದೆ.

ವಿಶೇಷವೆಂದರೆ ಗುಜರಾತ್ ಲಯನ್ಸ್ ತಂಡವನ್ನು ಅಂದು ಮುನ್ನಡೆಸಿದ್ದ ಸುರೇಶ್ ರೈನಾ, ಮುಂದಿನ ಹೊಸ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್​ ಜೊತೆಗಿನ ಒಪ್ಪಂದ ಕಡಿತಗೊಳಿಸಿಕೊಂಡಿರುವ ರೈನಾ ಹೊಸ ತಂಡದ ನಾಯಕರಾಗುತ್ತಾರೆಂಬ ಸುದ್ಧಿ ಹಬ್ಬಿದೆ.

ಇವರ ಜೊತೆಗೆ ಕನ್ನಡಿಗ ಮನೀಶ್ ಪಾಂಡೆ, ನ್ಯೂಜಿಲ್ಯಾಂಡ್​ನ ಕೇನ್ ವಿಲಿಯಮ್ಸನ್​, ಅಜಿಂಕ್ಯಾ ರಹಾನೆ, ರವಿಚಂದ್ರನ್ ಅಶ್ವಿನ್​ ಕೂಡ ನಾಯಕತ್ವವಹಿಸಿಕೊಳ್ಳಬಲ್ಲ ಆಟಗಾರರ ಲಿಸ್ಟ್​ನಲ್ಲಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.