ETV Bharat / sports

2 ವರ್ಷದ ನಂತರ ಕಮ್​ಬ್ಯಾಕ್ ಮಾಡಿದ ಪಂದ್ಯದಲ್ಲೇ ಕೊಹ್ಲಿ-ರೋಹಿತ್ ದಾಖಲೆ ಸರಿಗಟ್ಟಿದ ರೈನಾ - ಸುರೇಶ್ ರೈನಾ ಅರ್ಧಶತಕ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 2ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಈ ದಾಖಲೆಗೆ ಪಾತ್ರರಾದರು. ಮಿಸ್ಟರ್​ ಐಪಿಎಲ್ ಖ್ಯಾತಿಯ ರೈನಾ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 54 ರನ್​ ಬಾರಿಸಿದರು.

ಕೊಹ್ಲಿ,ರೋಹಿತ್ ದಾಖಲೆ ಸರಿಗಟ್ಟಿದ ರೈನಾ
ಕೊಹ್ಲಿ,ರೋಹಿತ್ ದಾಖಲೆ ಸರಿಗಟ್ಟಿದ ರೈನಾ
author img

By

Published : Apr 10, 2021, 11:04 PM IST

ಮುಂಬೈ: ಎರಡು ವರ್ಷಗಳ ಬಳಿಕ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಮರಳಿದ್ದ ಸುರೇಶ್ ರೈನಾ 14ನೇ ಆವೃತ್ತಿಯ ತಮ್ಮ ಮೊದಲ ಪಂದ್ಯದಲ್ಲೇ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಅರ್ಧಶತಕ ಬಾರಿಸಿದ 3ನೇ ಬ್ಯಾಟ್ಸ್​ಮನ್​ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಜೊತೆ ಹಂಚಿಕೊಂಡಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 2ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಈ ದಾಖಲೆಗೆ ಪಾತ್ರರಾದರು. ಮಿಸ್ಟರ್​ ಐಪಿಎಲ್ ಖ್ಯಾತಿಯ ರೈನಾ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 54 ರನ್​ ಬಾರಿಸಿದರು.

ಇದು ರೈನಾ ಪಾಲಿನ 39 ಅರ್ಧಶತಕವಾಗಿದೆ. ಈಗಾಗಲೆ ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್ ಶಿಖರ್​ ಧವನ್​ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಶಿಖರ್ ಧವನ್ 42( ಇಂದಿನ ಪಂದ್ಯ ಸೇರಿಸಿ) ಅರ್ಧಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇವರನ್ನು ಹೊರೆತು ಪಡಿಸಿದರೆ ರೋಹಿತ್ ಮತ್ತು ಕೊಹ್ಲಿ 39 ಅರ್ಧಶತಕ ಬಾರಿಸಿದ್ದಾರೆ.

ಒಟ್ಟಾರೆ ಐಪಿಎಲ್​ನಲ್ಲಿ ಸನ್​ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್​ ಕೇವಲ 142 ಇನ್ನಿಂಗ್ಸ್​ಗಳಲ್ಲಿ 48 ಅರ್ಧಾಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟ್ಸ್​ಮನ್

  • ಡೇವಿಡ್ ವಾರ್ನರ್-​ 48(142 ಇನ್ನಿಂಗ್ಸ್​)
  • ಶಿಖರ್ ಧವನ್- 42(176)
  • ವಿರಾಟ್ ಕೊಹ್ಲಿ- 39 (185)
  • ಸುರೇಶ್ ರೈನಾ -39 (190)
  • ರೋಹಿತ ಶರ್ಮಾ-39(196)
  • ಎಬಿ ಡಿ ವಿಲಿಯರ್ಸ್​- 38(157)
  • ಗೌತಮ್ ಗಂಭೀರ್- 36(152)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.