ನವದೆಹಲಿ: ಆಸ್ಟ್ರೇಲಿಯಾದ ಲೆಜೆಂಡರಿ ಬೌಲರ್ ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದರು. ಈ ಸಾಧನೆಯನ್ನು ಪ್ರಸ್ತುತ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಮರುಕಳಿಸಲಿದ್ದಾರೆ ಎಂದು ವಾರ್ನ್ ಭವಿಷ್ಯ ನುಡಿದರು.
ಪ್ರವಾಸಿ ವಿಂಡೀಸ್ ತಂಡದ ವಿರುದ್ಧದ ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕ್ರೈಗ್ ಬ್ರಾತ್ವೇಟ್ ವಿಕೆಟ್ ಪಡೆಯುವ ಮೂಲಕ ಬ್ರಾಡ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 7ನೇ ಹಾಗೂ ಇಂಗ್ಲೆಂಡ್ನ 2ನೇ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.
-
Congrats on the win & on the 500th wicket too mate and at only 34 years of age - still plenty of years left, 700+ a good chance 👏🏻👏🏻👏🏻 https://t.co/imDx7UPbPw
— Shane Warne (@ShaneWarne) July 28, 2020 " class="align-text-top noRightClick twitterSection" data="
">Congrats on the win & on the 500th wicket too mate and at only 34 years of age - still plenty of years left, 700+ a good chance 👏🏻👏🏻👏🏻 https://t.co/imDx7UPbPw
— Shane Warne (@ShaneWarne) July 28, 2020Congrats on the win & on the 500th wicket too mate and at only 34 years of age - still plenty of years left, 700+ a good chance 👏🏻👏🏻👏🏻 https://t.co/imDx7UPbPw
— Shane Warne (@ShaneWarne) July 28, 2020
ಈ ವೇಳೆ, '500 ನೇ ವಿಕೆಟ್ ಪಡೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ವಿಶೇಷ. ಈ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ನಾನು ಕ್ರಿಕೆಟ್ ಜೀವನವನ್ನು ಪ್ರೀತಿಸುತ್ತೇನೆ' ಎಂದು ಬ್ರಾಡ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಶೇನ್ ವಾರ್ನ್, 'ಪಂದ್ಯ ಗೆದ್ದಿರುವುದಕ್ಕೆ ಮತ್ತು 500 ವಿಕೆಟ್ ಸಾಧನೆ ಮಾಡಿರುವುದಕ್ಕೆ ಅಭಿನಂದನೆಗಳು, ಪ್ರಸ್ತುತ ನಿಮಗೆ 34 ವರ್ಷ, ಇನ್ನೂ ಸಾಕಷ್ಟು ವರ್ಷಗಳು ನಿಮ್ಮ ಮುಂದಿವೆ. 700+ ವಿಕೆಟ್ ಪಡೆಯಲು ನಿಮಗೆ ಸಾಕಷ್ಟು ಅವಕಾಶವಿದೆ ಎಂದು ತಿಳಿಸಿದ್ದಾರೆ.
3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-1ರಲ್ಲಿ ಜಯ ಸಾಧಿಸಿದೆ. ಮೊದಲ ಪಂದ್ಯದಿಂದ ಹೊರಗಿದ್ದರೂ ಬ್ರಾಡ್ 2 ಪಂದ್ಯಗಳಿಂದ 16 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪಾಕ್ ವಿರುದ್ಧ ಆಗಸ್ಟ್ 15ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಕರ್ಟ್ನಿ ವಾಲ್ಶ್ (519) ವಿಕೆಟ್‌ಗಳ ದಾಖಲೆ ಮುರಿಯಲು ಬ್ರಾಡ್ಗೆ 18 ವಿಕೆಟ್‌ಗಳ ಅವಶ್ಯಕತೆಯಿದೆ.