ಪುಣೆ, ಮಹಾರಾಷ್ಟ್ರ: ಭಾರತ- ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ಗೆ ಕೋವಿಡ್ ಮಾರ್ಗಸೂಚಿ ನಿಯಮ ಉಲ್ಲಂಘನೆ ಸಂಬಂಧ ಎರಡನೇ ಬಾರಿ ಅಂಪೈರ್ಗಳು ಎಚ್ಚರಿಕೆಯ ಕರೆಗಂಟೆ ಬಾರಿಸಿದರು.
ಬೌಲಿಂಗ್ ಮಾಡುವ ವೇಳೆ ಬೆನ್ ಸ್ಟೋಕ್ಸ್ ಚೆಂಡಿಗೆ ಎಂಜಲು (ಸಲೈವಾ) ಹಚ್ಚಿದ್ದಾರೆ. ಇದನ್ನು ಅಂಪೈರ್ಗಳಾದ ನಿತಿನ್ ಮೆನನ್ ಮತ್ತು ವಿರೇಂದರ್ ಶರ್ಮಾ ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ: ಅರ್ಚಕರ ಕ್ರಿಕೆಟ್; ಪಂಚೆ ಕಟ್ಟಿ ಬ್ಯಾಟ್ ಹಿಡಿದ ಪೂಜಾರಿಗಳು! ವಿಡಿಯೋ...
ಚೆಂಡಿಗೆ ಎಂಜಲು ಹಚ್ಚುವುದನ್ನು ಕೋವಿಡ್ ನಂತರದಲ್ಲಿ ಐಸಿಸಿ ಬ್ಯಾನ್ ಮಾಡಿತ್ತು. ಕೋವಿಡ್ ಮಾರ್ಗಸೂಚಿಗಳಂತೆ ಆಟಕ್ಕೂ ಮೊದಲು ಚೆಂಡಿಗೆ ಸ್ಯಾನಿಟೈಸ್ ಮಾಡಲಾಗುತ್ತದೆ. ಆದರೆ ಇದನ್ನು ಮರೆತು ಸ್ಟೋಕ್ಸ್ ಚೆಂಡಿಗೆ ಎಂಜಲು ಹಚ್ಚಿದ್ದರು.
ಭಾರತದ ವಿರುದ್ಧ ಇಂಗ್ಲೆಂಡ್ ಸರಣಿಯಲ್ಲಿ ಇದು ಎರಡನೇ ಬಾರಿ ಬೆನ್ ಸ್ಟೋಕ್ಸ್ಗೆ ಎಚ್ಚರಿಕೆ ನೀಡಲಾಗಿದೆ. ಇದಕ್ಕೂ ಮೊದಲು ಹಿಂದಿನ ತಿಂಗಳು ಅಹಮದಾಬಾದ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿಯೂ ಇದೇ ರೀತಿ ಚೆಂಡಿಗೆ ಎಂಜಲು ಹಚ್ಚಿ ಅಂಪೈರ್ಗಳು ಎಚ್ಚರಿಕೆ ನೀಡಿದ್ದರು.