ETV Bharat / sports

ಎಬಿಡಿ ಬಳಿಕ ಸ್ಮಿತ್​ ಕೂಡ ಬಿಗ್​ ಬ್ಯಾಷ್​ನಲ್ಲಿ ಆಡದಿರಲು ನಿರ್ಧಾರ! - ಸ್ಮೀವ್​ ಸ್ಮಿತ್ ಬಿಗ್​ ಬ್ಯಾಷ್​ ಸುದ್ದಿ

ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್​ ಸ್ಮಿತ್ ಬಿಗ್​ಬ್ಯಾಷ್​ ಲೀಗ್​ನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದು, ಇದರ ಬಗ್ಗೆ ಮಾತನಾಡಿದ್ದಾರೆ.

Steve Smith
Steve Smith
author img

By

Published : Oct 31, 2020, 3:54 AM IST

ಅಬುಧಾಬಿ: ಇಂಡಿಯನ್ ಪ್ರೀಮಿಯರ್​ ಲೀಗ್​​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಕ್ಯಾಪ್ಟನ್​ ಆಗಿರುವ ಸ್ಮೀವ್​ ಸ್ಮಿತ್ ಮುಂಬರುವ ಬಿಬಿಎಲ್​ನಲ್ಲಿ ಆಡದಿರುವ​ ಮಾಹಿತಿ ನೀಡಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​ ಸ್ಮಿತ್ ಸದ್ಯ ಬಯೋ ಬಬಲ್​ನಲ್ಲಿ ಒಳಗಾಗಿ ಐಪಿಎಲ್​​ ಆಡುತ್ತಿದ್ದು, ಅದರಿಂದ ಹೊರಬರುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ.

ಡಿಸೆಂಬರ್​​ 3ರಿಂದ ಬಿಗ್​ ಬ್ಯಾಷ್​ ಲೀಗ್​ ಆರಂಭಗೊಳ್ಳಲಿದ್ದು, ಅದರಲ್ಲಿ ಭಾಗಿಯಾಗುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಎಲ್ಲ ಕ್ರಿಕೆಟ್​ ಟೂರ್ನಿಗಳು ಬಯೋ ಬಬಲ್​​ನಿಂದ ನಡೆಯುತ್ತಿರುವ ಕಾರಣ ಆಟಗಾರರು ಇದರ ಒಳಗೆ ಇರಬೇಕಾಗುತ್ತದೆ. ಐಪಿಎಲ್​ನಲ್ಲೂ ಇದೇ ಮಾರ್ಗಸೂಚಿ ಜಾರಿಯಲ್ಲಿರುವ ಕಾರಣ ಬಿಗ್​ ಬ್ಯಾಷ್​​ನಲ್ಲಿ ಆಡಲು ಆಗುವುದಿಲ್ಲ ಎಂದು ಸ್ಮಿತ್ ಹೇಳಿದ್ದಾರೆ.

ಐಪಿಎಲ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಆಸ್ಟ್ರೇಲಿಯಾ ಪ್ಲೇಯರ್ಸ್​​ ಇಂಗ್ಲೆಂಡ್​ ಪ್ರವಾಸದಲ್ಲಿದ್ದರೂ, ಈ ವೇಳೆ ಕೂಡ ಅವರೂ ಜೈವಿಕ ಸುರಕ್ಷಿತ ವಾತಾವರಣದಲ್ಲಿದ್ದರು. ಇನ್ನು ಡೇವಿಡ್​ ವಾರ್ನರ್​ ಹಾಗೂ ಪ್ಯಾಟ್​ ಕಮ್ಮಿನ್ಸ್​ ಕೂಡ ಈ ಸಲದ ಬಿಗ್​ ಬ್ಯಾಷ್​ ಲೀಗ್​ನಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.