ಬೋಲ್ಯಾಂಡ್ ಪಾರ್ಕ್(ದಕ್ಷಿಣ ಆಫ್ರಿಕಾ): ಯಾವುದೇ ಕ್ರೀಡೆಯಾಗಿರಲಿ ಪ್ರತಿಯೊಬ್ಬ ಆಟಗಾರನ ಸೆಲೆಬ್ರೇಷನ್ ಒಂದಕ್ಕಿಂದ ಒಂದು ಭಿನ್ನವಾಗಿರುತ್ತೆ. ಕ್ರಿಕೆಟ್ ಆಟಗಾರರು ಕೂಡ ಈ ಸೆಲೆಬ್ರೇಷನ್ಗೆ ಹೊರತಾಗಿಲ್ಲ. ಮ್ಯಾಜಿಕ್ ಮೂಲಕ ದಕ್ಷಿಣ ಆಫ್ರಿಕಾ ಆಟಗಾರನ ಸೆಲೆಬ್ರೇಷನ್ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
-
WICKET!
— Mzansi Super League 🔥 🇿🇦 🏏 (@MSL_T20) December 4, 2019 " class="align-text-top noRightClick twitterSection" data="
A bit of magic from @shamsi90 🎩
#MSLT20 pic.twitter.com/IxMqRYF1Ma
">WICKET!
— Mzansi Super League 🔥 🇿🇦 🏏 (@MSL_T20) December 4, 2019
A bit of magic from @shamsi90 🎩
#MSLT20 pic.twitter.com/IxMqRYF1MaWICKET!
— Mzansi Super League 🔥 🇿🇦 🏏 (@MSL_T20) December 4, 2019
A bit of magic from @shamsi90 🎩
#MSLT20 pic.twitter.com/IxMqRYF1Ma
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಜಾನ್ಸಿ ಸೂಪರ್ಲೀಗ್ನಲ್ಲಿ ಸ್ಪಿನ್ನರ್ ತಬ್ರೀಜ್ ಶಂಸಿ ಆನ್ ಫೀಲ್ಡ್ನಲ್ಲೆ ಜಾದೂ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಪಾರ್ಲ್ ರಾಕ್ಸ್ ಮತ್ತು ಡರ್ಬನ್ ಹೀಟ್ ತಂಡದ ನಡುವಿನ ಪಂದ್ಯದಲ್ಲಿ ಡರ್ಬನ್ ಹೀಟ್ ತಂಡದ ಡೇವಿಡ್ ಮಿಲ್ಲರ್ ವಿಕೆಟ್ ಪಡೆದ ಶಂಸಿ ತನ್ನ ಬಳಿಯಿದ್ದ ಕರವಸ್ತ್ರವನ್ನ ಜಾದೂ ಮಾಡುವ ಮೂಲಕ ಕೋಲಾಗಿ ಪರಿವರ್ತಿಸಿ ಎಲ್ಲರ ಗಮನ ಸೆಳೆದಿದ್ದಾರೆ.
-
Tabraiz Shamsi’s celebration. This is some crazy stuff. pic.twitter.com/keMDKefw0M
— Mazher Arshad (@MazherArshad) December 5, 2019 " class="align-text-top noRightClick twitterSection" data="
">Tabraiz Shamsi’s celebration. This is some crazy stuff. pic.twitter.com/keMDKefw0M
— Mazher Arshad (@MazherArshad) December 5, 2019Tabraiz Shamsi’s celebration. This is some crazy stuff. pic.twitter.com/keMDKefw0M
— Mazher Arshad (@MazherArshad) December 5, 2019
ಶಂಸಿ ಜಾದೂ ಸೆಲೆಬ್ರೇಷನ್ ವಿಡಿಯೋ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಶಂಸಿ ಜಾದೂಗೆ ಫಿದಾ ಆಗಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಾರ್ಲ್ ರಾಕ್ಸ್ ತಂಡ 20 ಓವರ್ಗಳಲ್ಲಿ 195 ರನ್ ಪೇರಿಸಿತು. ಬೃಹತ್ ಮೊತ್ತ ಬೆನ್ನತ್ತಿದ ಡರ್ಬನ್ ಹೀಟ್ಸ್ ಅಲೆಕ್ಸ್ ಹೆಲ್ಸ್ ಅವರ 97 ರನ್ಗಳ ಬಿರುಸಿನ ಬ್ಯಾಟಿಂಗ್ ನೆರವಿನಿಂದ 18.5 ಓವರ್ಗಳಲ್ಲಿ 197 ರನ್ ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.