ಸಿಡ್ನಿ: ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ನಡೆದ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 3 ದಿನಗಳ ಪಂದ್ಯದಲ್ಲಿ ಭಾರತ ತಂಡ ಹಿನ್ನಡೆ ಅನುಭವಿಸಿತ್ತಾದರೂ ಕೆಲವು ಆಟಗಾರರು ಅಮೂಲ್ಯ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ ರಹಾನೆ(117) ಶತಕ ಹಾಗೂ ಪೂಜಾರ ಅವರ 54 ರನ್ಗಳ ನೆರವಿನಿಂದ 247 ರನ್ ಗಳಿಸಿದರೆ, ಆಸ್ಟ್ರೇಲಿಯಾ ಇದಕ್ಕುತ್ತರವಾಗಿ 306 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. 2ನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ 189 ರನ್ ಗಳಿಸಿ 140 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ ನಿಗದಿತ ಓವರ್ಗಳ ಅಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 52 ರನ್ಗಳಿಸುವ ಮೂಲಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
ಇದನ್ನು ಓದಿ: ಮೊದಲ ಟಿ20 ಸರಣಿಯಲ್ಲೇ ಬುಮ್ರಾ-ಮಾಲಿಂಗ ದಾಖಲೆ ಸರಿಗಟ್ಟಿದ ನಟರಾಜನ್
ಮಂಗಳವಾರ ಎರಡನೇ ಇನ್ನಿಂಗ್ಸ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಉತ್ತಮ ರನ್ ಕಲೆಹಾಕಲು ವಿಫಲರಾದರು. ಪೃಥ್ವಿ ಶಾ 19, ಶುಬ್ಮನ್ ಗಿಲ್ 29, ಪೂಜಾರ್ ಸೊನ್ನೆ, ವಿಹಾರಿ 28, ರಹಾನೆ 28 ರನ್ ಗಳಿಸಿ ಔಟಾದರು. ಆದರೆ ವಿಕೆಟ್ ಕೀಪರ್ ಸಹಾ ಉತ್ತಮ ಬ್ಯಾಟಿಂಗ್ ನಡೆಸಿ ಅರ್ಧಶತಕ ಪೂರೈಸಿದರು. ಅವರು 100 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 54 ರನ್ ಗಳಿಸಿದರು.
ಅಸ್ಟ್ರೇಲಿಯಾ ಪರ ಮಾರ್ಕ್ ಸ್ಟೆಕೆಟೀ 37 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಗ್ರೀನ್ ಮತ್ತು ನೆಸರ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಡಿಸೆಂಬರ್ 17ರಿಂದ ಅಡಿಲೇಡ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಇದು ಅಹರ್ನಿಶಿ ಟೆಸ್ಟ್ ಆಗಿದ್ದು, ಭಾರತ ತಂಡ ಆಸೀಸ್ ನೆಲದಲ್ಲಿ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನಾಡಲಿದೆ.