ETV Bharat / sports

ಬಿಸಿಸಿಐ ಆಯ್ಕೆ ಸಮಿತಿ ಹುದ್ದೆಗೆ ಮಾಜಿ ಸ್ಪಿನ್​ ದಿಗ್ಗಜರಿಂದ ಅರ್ಜಿ ಸಲ್ಲಿಕೆ... ಕನ್ನಡಿಗನಿಂದಲೂ ಪೈಪೋಟಿ ಸಾಧ್ಯತೆ! - ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ

ಭಾರತ ಸೀನಿಯರ್​ ತಂಡದ ಆಯ್ಕೆಸಮಿತಿಯ ಅಧ್ಯಕ್ಷರಾಗಿರುವ ಎಂಎಸ್​ಕೆ ಪ್ರಸಾದ್​ ಹಾಗೂ ಗಗನ್​ ಖೋಡ ಅವರ ಅಧಿಕಾರಾವಧಿ ಮುಗಿದಿರುವುದರಿಂದ ಕಳೆದ ವಾರ ಬಿಸಿಸಿಐ ಅವರ ಜಾಗ ತುಂಬಲು ತನ್ನ ಬಿಸಿಸಿಐ ವೆಬ್​ಸೈಟ್​ನಲ್ಲಿ ಜಾಹೀರಾತು ನೀಡುವ ಮೂಲಕ ಅರ್ಜಿಗೆ ಆಹ್ವಾನಿಸಿತ್ತು.

BCCI National selector post
ಬಿಸಿಸಿಐ ಆಯ್ಕೆ ಸಮಿತಿ ಹುದ್ದೆ
author img

By

Published : Jan 23, 2020, 7:17 PM IST

ಮುಂಬೈ: ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ ಹಲವು ಹುದ್ದೆಗಳಿಗೆ ಲಕ್ಷ್ಮಣ್​ ಶಿವರಾಮಕೃಷ್ಣನ್​, ರಾಜೇಶ್​ ಚೌಹಾಣ್​ ಸೇರಿದಂತೆ ಭಾರತ ತಂಡದ ಹಲವು ಮಾಜಿ ಆಟಗಾರರು ಅರ್ಜಿ ಸಲ್ಲಿಸಿದ್ದಾರೆ.

ಭಾರತ ಸೀನಿಯರ್​ ತಂಡದ ಆಯ್ಕೆಸಮಿತಿಯ ಅಧ್ಯಕ್ಷರಾಗಿರುವ ಎಂಎಸ್​ಕೆ ಪ್ರಸಾದ್​ ಹಾಗೂ ಗಗನ್​ ಖೋಡಾ ಅವರ ಅಧಿಕಾರಾವಧಿ ಮುಗಿದಿರುವುದರಿಂದ ಕಳೆದ ವಾರ ಬಿಸಿಸಿಐ ಅವರ ಜಾಗ ತುಂಬಲು ತನ್ನ ಬಿಸಿಸಿಐ ವೆಬ್​ಸೈಟ್​ನಲ್ಲಿ ಜಾಹೀರಾತು ನೀಡುವ ಮೂಲಕ ಅರ್ಜಿಗೆ ಆಹ್ವಾನಿಸಿತ್ತು.

ಜನವರಿ 24 ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿರುವುದರಿಂದ ಈಗಾಗಲೆ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಮಾಜಿ ಲೆಗ್ ಸ್ಪಿನ್ನರ್​ ಲಕ್ಷ್ಮಣ್​ ಶಿವರಾಮಕೃಷ್ಣನ್, ಮಾಜಿ ಆಫ್​ ಸ್ಪಿನ್ನರ್​ ರಾಜೇಶ್ ಚೌಹಾಣ್​ ಹಾಗೂ ಲೆಫ್ಟ್​ ಹ್ಯಾಂಡ್​ ಬ್ಯಾಟ್ಸ್​ಮನ್​​​ ಅಮಯ್​ ಕುರಾಸಿಯಾ ಅವರು ಅರ್ಜಿ ಸಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಅಂಡರ್​ 19 ತಂಡದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ವೆಂಕಟೇಶ್ ಪ್ರಸಾದ್​ ಹಾಗೂ ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್​ ಸಂಜಯ್​ ಬಂಗಾರ್​ ಕೂಡ ಅರ್ಜಿ ಸಲ್ಲಿಸುವ ಆಲೋಚನೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ, ಇವರಿಬ್ಬರು ಅರ್ಜಿ ಸಲ್ಲಿಸಿದರೆ ಬಿಸಿಸಿಐ ಅಧ್ಯಕ್ಷ ಪಟ್ಟಕ್ಕಾಗಿ ಶಿವರಾಮಕೃಷ್ಣನ್​ ಜೊತೆ ಪೈಪೋಟಿ ನಡೆಸಲಿದ್ದಾರೆ.

54 ವರ್ಷದ ಶಿವರಾಮಕೃಷ್ಣನ್ ಭಾರತದ ಪರ 9 ಟೆಸ್ಟ್​ ​16 ಏಕದಿನ ಪಂದ್ಯಗಳನ್ನಾಡಿದ್ದಾರೆ. ಸಂಜಯ್​ ಬಂಗಾರ್​ 12 ಟೆಸ್ಟ್​ 15 ಏಕದಿನ ಪಂದ್ಯಗಳನ್ನಾಡಿದ್ದರೆ, ಕರ್ನಾಟಕದ ವೆಂಕಟೇಶ್​ ಪ್ರಸಾದ್​ 33 ಟೆಸ್ಟ್​ ಹಾಗೂ 161 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.