ETV Bharat / sports

ಶೇನ್ ವಾರ್ನ್​ರನ್ನು ಮೆಂಟರ್​ ಹಾಗೂ ರಾಯಭಾರಿಯಾಗಿ ನೇಮಿಸಿದ ರಾಜಸ್ಥಾನ್​ ರಾಯಲ್ಸ್​ - 2020 ಐಪಿಎಲ್​

ಈ ಆವೃತ್ತಿಯಲ್ಲಿ ತಂಡದ ಮೆಂಟರ್​ ಆಗಿ ಮೆಕ್​ಡೊನಾಲ್ಡ್​ ಮತ್ತು ಜುಬಿನ್ ಬರೋಚಾ ಹಾಗೂ ಅತ್ಯುತ್ತಮ ಸಿಬ್ಬಂದಿಯೊಂದಿಗೆ ಸೇರಲು ಎದುರು ನೋಡುತ್ತಿದ್ದೇನೆ. ಆಶಾದಾಯಕವಾಗಿ ಈ ಆವೃತ್ತಿಯಲ್ಲಿ ನಾವು ಯಶಸ್ಸು ಮತ್ತು ದೊಡ್ಡದನ್ನು ಸಾಧಿಸಬಹುದು..

author img

By

Published : Sep 13, 2020, 7:03 PM IST

ದುಬೈ : ಆಸ್ಟ್ರೇಲಿಯಾದ ಸ್ಪಿನ್​ ದಂತಕತೆ ಶೇನ್​ವಾರ್ನ್​ ರಾಜಸ್ಥಾನ್​ ರಾಯಲ್ಸ್​ಗೆ ಮರಳಿದ್ದು, ತಂಡದ ಮೆಂಟರ್​ ಹಾಗೂ ರಾಯಭಾರಿಯಾಗಿ ಆಯ್ಕೆಗೊಂಡಿದ್ದಾರೆ.

ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಚೊಚ್ಚಲ ಐಪಿಎಲ್​ನಲ್ಲಿ ಮುನ್ನಡೆಸಿದ್ದ ವಾರ್ನ್​ ಪ್ರಶಸ್ತಿ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮೆಂಟರ್​ ಆಗಿ ಆಯ್ಕೆಯಾಗಿದ್ದು, ಐಪಿಎಲ್​ ಆರಂಭಕ್ಕೂ ಮುನ್ನ ಶೀಘ್ರದಲ್ಲೇ ಯುಎಇಗೆ ತೆರಳಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಆಸೀಸ್​ ಲೆಜೆಂಡ್​ ಮೆಂಟರ್​ ಆಗಿ ಮುಖ್ಯ ಕೋಚ್​ ಆಗಿರುವ ಮೆಕ್​ಡೊನಾಲ್ಡ್​ ಅವರ ಜೊತೆ ಕೆಲಸ ನಿರ್ವಹಿಸಲಿದ್ದಾರೆ. ವಾರ್ನ್​ ಹಾಗೂ ಮೆಕ್​ಡೊನಾಲ್ಡ್​ 2003ರಿಂದ 2007ರವರೆಗೆ ವಿಕ್ಟೋರಿಯಾ ತಂಡದಲ್ಲಿ ಜೊತೆಯಾಗಿ ಆಡಿದ್ದರು. ರಾಜಸ್ಥಾನ್ ರಾಯಲ್ಸ್‌ನ ಕ್ರಿಕೆಟ್ ಮುಖ್ಯಸ್ಥ ಜುಬಿನ್ ಭರೂಚಾ ಅವರೊಂದಿಗೆ ಅವರು ವಾರ್ನ್​ ಮತ್ತೆ ಒಂದಾಗಲಿದ್ದಾರೆ.

ಶೇನ್​ ವಾರ್ನ್​
ಶೇನ್​ ವಾರ್ನ್​

'ರಾಜಸ್ಥಾನ ತಂಡಕ್ಕೆ ಎರಡು ಪಾತ್ರದಲ್ಲಿ ಮರಳುತ್ತಿರುವುದಕ್ಕೆ ಸಂತೋಷವಾಗಿದೆ. ನಾನು ಪ್ರೀತಿಸುವ ಈ ಪ್ರಾಂಚೈಸಿಯಲ್ಲಿ ಕೆಲಸ ಮಾಡುವುದೇ ರೋಮಾಂಚನಕಾರಿ. ಪ್ರಪಂಚದಾದ್ಯಂತ ಅಭಿಮಾನಿಗಳು ಪ್ರೀತಿಸುವ ಮತ್ತು ಅನುಸರಿಸುವ ಜಾಗತಿಕ ತಂಡವಾಗಬೇಕೆಂಬ ದೃಷ್ಟಿಯಲ್ಲಿ ನಾವು ಕೆಲಸ ಮಾಡಿದ್ದೇವೆ.

ಈ ಆವೃತ್ತಿಯಲ್ಲಿ ತಂಡದ ಮೆಂಟರ್​ ಆಗಿ ಮೆಕ್​ಡೊನಾಲ್ಡ್​ ಮತ್ತು ಜುಬಿನ್ ಬರೋಚಾ ಹಾಗೂ ಅತ್ಯುತ್ತಮ ಸಿಬ್ಬಂದಿಯೊಂದಿಗೆ ಸೇರಲು ಎದುರು ನೋಡುತ್ತಿದ್ದೇನೆ. ಆಶಾದಾಯಕವಾಗಿ ಈ ಆವೃತ್ತಿಯಲ್ಲಿ ನಾವು ಯಶಸ್ಸು ಮತ್ತು ದೊಡ್ಡದನ್ನು ಸಾಧಿಸಬಹುದು' ಎಂದು ವಾರ್ನ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.