ಢಾಕಾ: ಬಾಂಗ್ಲಾದೇಶ ಕ್ರಿಕೆಟಿಗರ ಹನ್ನೊಂದು ಅಂಶಗಳ ಬೇಡಿಕೆ ಈಡೇರಿಸುವವರೆಗೆ ಮೈದಾನಕ್ಕಿಳಿಯುವುದಿಲ್ಲ ಎಂದು ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಹೇಳಿದ್ದು, ಮುಂದಿನ ತಿಂಗಳ ಆರಂಭದಲ್ಲಿ ನಿಗದಿ ಆಗಿರುವ ಭಾರತ ಪ್ರವಾಸ ಅನುಮಾನ ಎನ್ನಲಾಗಿದೆ.
ಇತ್ತೀಚೆಗೆ ನಡೆದ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯ ಬಾಂಗ್ಲಾ ಕೈಚೆಲ್ಲಿತ್ತು. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್(ಬಿಸಿಬಿ) ಹೊಸ ನಿಯಮವೊಂದನ್ನು ಜಾರಿ ಮಾಡಿತ್ತು.
ಬಿಸಿಬಿ ಹೊಸ ನಿಯಮ ಏನು..?: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಪ್ರತಿಯೊಂದು ತಂಡದಲ್ಲೂ ಆಡುವ ಹನ್ನೊಂದರ ಬಳಗದಲ್ಲಿ ಕನಿಷ್ಠ ಓರ್ವ ಲೆಗ್ ಸ್ಪಿನ್ನರ್ ಇರಲೇಬೇಕು. ಈ ನಿಯಮವನ್ನು ಪಾಲಿಸದ ಎರಡು ತಂಡಗಳ ಕೋಚ್ಗಳನ್ನು ಬಿಸಿಬಿ ಅಮಾನತು ಮಾಡಿತ್ತು.
ಟೀಂ ಇಂಡಿಯಾ ವಿರುದ್ಧದ ಟಿ-20 ಸರಣಿಗೆ ಬಾಂಗ್ಲಾ ತಂಡ ಪ್ರಕಟ.. ಜೈಲಿನಲ್ಲಿದ್ದ ಪ್ಲೇಯರ್ಗೂ ಚಾನ್ಸ್!
ಅಫ್ಘಾನ್ ವಿರುದ್ಧ ಟೆಸ್ಟ್ ಸೋಲಿನ ಬಳಿಕ ಬಾಂಗ್ಲಾ ಆಟಗಾರರ ಬ್ಯಾಟಿಂಗ್ ಬಗ್ಗೆ ಪ್ರಶ್ನೆ ಮೂಡಿತ್ತು. ಆಟಗಾರರು ಸಮರ್ಪಕವಾಗಿ ತರಬೇತಿ ನಡೆಸುತ್ತಿಲ್ಲ ಎನ್ನುವ ಮಾತು ಕೇಳಿಬಂದಿತ್ತು. ಆದರೆ, ಈ ನಿಯಮವನ್ನು ಶಕೀಬ್ ಅಲ್ ಹಸನ್ ವಿರೋಧಿಸಿದ್ದಾರೆ.
ಶಕೀಬ್ ಅಲ್ ಹಸನ್ ಮಾತಿನ ಬಳಿಕ ಬಾಂಗ್ಲಾದ ಭಾರತ ಪ್ರವಾಸದ ಮೇಲೆ ಅನುಮಾನ ಮೂಡಿದೆ. ಬಾಂಗ್ಲಾದೇಶ - ಭಾರತ ನಡುವಿನ ಮೊದಲ ಟಿ-20 ನಡೆಯಲಿದೆ. ಭಾರತದಲ್ಲಿ ಮೂರು ಟಿ20 ಹಾಗೂ 2 ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಭಾಗಿಯಾಗಲಿದೆ.