ನವದೆಹಲಿ: ಕ್ರಿಕೆಟ್ಗೆ ಪದಾರ್ಪಣ ಮಾಡಿದ್ದ ಎರಡನೇ ಪಂದ್ಯದಲ್ಲೇ ಶಾಹೀದ್ ಅಫ್ರಿದಿ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಆದರೆ ಅಂದು ಅವರು ಉಪಯೋಗಿಸಿದ್ದ ಬ್ಯಾಟ್ ಭಾರತ ಕ್ರಿಕೆಟ್ನ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರದ್ದು ಎಂದು ಮಾಜಿ ಪಾಕಿಸ್ತಾನ ಕ್ರಿಕೆಟರ್ ಅಹರ್ ಮಹಮೂದ್ ನೆನಪಿಸಿಕೊಂಡಿದ್ದಾರೆ.
"ಆ ನಾಲ್ಕು ತಂಡಗಳ ಸರಣಿಗೆ ಅಫ್ರಿದಿ ಮೊದಲಿಗೆ ಆಯ್ಕೆಯಾಗಿರಲಿಲ್ಲ. ಆದರೆ, ಪ್ರಮುಖ ಸ್ಪಿನ್ನರ್ ಮುಷ್ತಾಕ್ ಅಹ್ಮದ್ ಅವರು ಗಾಯಕ್ಕೊಳಗಾಗಿದ್ದರಿಂದ ಅಫ್ರಿದಿಗೆ ಅದೃಷ್ಟ ಹೊಲಿದು ಬಂದಿತ್ತು" ಎಂದು ಮಹಮೂದ್ ಬಹಿರಂಗಪಡಿಸಿದ್ದಾರೆ.
ಶಾಹೀದ್ ಅಫ್ರಿದಿ 1996ರ ನೈರೋಬಿಯಲ್ಲಿ ನಡೆದಿದ್ದ ಸಹರಾ ಕಪ್ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣ ಮಾಡಿದ್ದರು. ಅದೇ ಸರಣಿಯಲ್ಲಿ ನಾನು ಪದಾರ್ಪಣ ಮಾಡಿದ್ದೆ ಎಂದು ಪೋಡ್ಕಾಸ್ಟ್ವೊಂದರಲ್ಲಿ ಹೇಳಿದ್ದಾರೆ." ಮುಷಿ(ಮುಷ್ತಾಕ್ ಅಹ್ಮದ್) ಗಾಯಕ್ಕೊಳಗಾದರು ಅದೇ ಸಂದರ್ಭದಲ್ಲಿ ಪಾಕಿಸ್ತಾನ ಎ ತಂಡದಲ್ಲಿ ವಿಂಡೀಸ್ಗೆ ಅಫ್ರಿದಿ ಪಯಣಿಸಿದ್ದರು. ಆದ್ದರಿಂದ ಮುಷಿ ಬದಲಿಗೆ ಅವರು ಅವಕಾಶ ಗಿಟ್ಟಿಸಿಕೊಂಡಿದ್ದರು.
ಇನ್ನು ಇದೇ ಸಂದರ್ಭದಲ್ಲಿ ಕೀನ್ಯಾ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳ ಒಳಗೊಂಡ 1996 ಕೆಸಿಎ ಸೆಂಟನರಿ ಟೂರ್ನಮೆಂಟ್ ಜಿಂಬಾಬ್ವೆಯ ನೈರೋಬಿಯಲ್ಲಿ ಆಯೋಜನೆ ಗೊಂಡಿತ್ತು. ಆ ಸರಣಿಯಲ್ಲಿ ವೃತ್ತಿ ಜೀವನದಲ್ಲಿ 2ನೇ ಪಂದ್ಯವನ್ನಾಡಿದ್ದ ಅಫ್ರಿದಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ವೇಗದ ಶತಕ ಬಾರಿಸಿದ್ದರು.
ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟ್ ಅನ್ನು ಪಾಕಿಸ್ತಾನ ಲೆಜೆಂಡರಿ ಬೌಲರ್ ವಾಸಿಮ್ ಅಕ್ರಮ್ಗೆ ನೀಡಿದ್ದರು. ಅಫ್ರಿದಿ ಆ ಬ್ಯಾಟ್ ಬಳಸಿ ಸ್ಫೋಟಕ ಶತಕ ಸಿಡಿಸಿದ್ದರು. ಅಲ್ಲಿಯವರೆಗೆ ಬೌಲರ್ ಎನಿಸಿಕೊಂಡಿದ್ದ ಅಫ್ರಿದಿ ಬ್ಯಾಟ್ಸ್ಮನ್ ಆಗಿ ಬದಲಾದರು. ನಂತರ ಅವರು ಅದ್ಭುತ ವೃತ್ತಿ ಜೀವನವನ್ನು ಕಂಡುಕೊಂಡರು ಎಂದು ಮಹಮೂದ್ ಈ ವೇಳೆ ನೆನಪಿಸಿಕೊಂಡಿದ್ದಾರೆ.