ETV Bharat / sports

ಎರಡನೇ ಪಂದ್ಯದಲ್ಲೂ ಗೆಲುವು ನಮ್ಮದೇ: ರೋಹಿತ್​ ಬಳಗಕ್ಕೆ ಬಾಂಗ್ಲಾ ಕ್ಯಾಪ್ಟನ್​ ಎಚ್ಚರಿಕೆ - ಟೀಂ ಇಂಡಿಯಾ

ಟೀಂ ಇಂಡಿಯಾ ವಿರುದ್ಧದ ಟಿ-20 ಕ್ರಿಕೆಟ್​ ಸರಣಿಯಲ್ಲಿ ಬಾಂಗ್ಲಾ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 7ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದೀಗ ಮತ್ತೊಂದು ಗೆಲುವಿನ ಹುಮ್ಮಸ್ಸಿನಲ್ಲಿದೆ.

ಕ್ಯಾಪ್ಟನ್​ ಮಹ್ಮುದುಲ್ಲಾ
author img

By

Published : Nov 6, 2019, 9:26 PM IST

ರಾಜ್​ಕೋಟ್​​: ಪ್ರವಾಸಿ ಬಾಂಗ್ಲಾ ವಿರುದ್ಧ ಆರಂಭಗೊಂಡಿರುವ ಮೂರು ಟಿ-20 ಪಂದ್ಯಗಳ ಕ್ರಿಕೆಟ್​​ ಸರಣಿಯಲ್ಲಿ ಈಗಾಗಲೇ ಬಾಂಗ್ಲಾ ತಂಡ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದು ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಈ ಮಧ್ಯೆ ನಾಳೆ ರಾಜ್​ಕೋಟ್​​​ನಲ್ಲಿ ಎರಡನೇ ಟಿ-20 ಪಂದ್ಯ ಶುರುವಾಗಲಿದ್ದು, ಸರಣಿ ಆಸೆ ಜೀವಂತವಾಗಿಸಿಕೊಳ್ಳಲು ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆಯಲ್ಲಿದೆ. ಮೊದಲ ಗೆಲುವಿನೊಂದಿಗೆ ಆತ್ಮವಿಶ್ವಾಸದೊಂದಿಗೆ ಬೀಗುತ್ತಿರುವ ಎದುರಾಳಿ ತಂಡದ ಕ್ಯಾಪ್ಟನ್​ ಮಹಮ್ಮದುಲ್ಲಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಂ ಇಂಡಿಯಾ ವಿರುದ್ಧ ಕ್ರಿಕೆಟ್​ ಸರಣಿ ಕೈವಶ ಮಾಡಿಕೊಳ್ಳಲು ನಮಗೆ ಇದೊಂದು ಅತ್ಯುತ್ತಮ ಅವಕಾಶ. ನಾಳೆಯ ಪಂದ್ಯದಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದು ಐತಿಹಾಸಿಕ ಸರಣಿ ಗೆಲ್ಲುವ ತವಕದಲ್ಲಿದ್ದೇವೆ ಎಂದಿದ್ದಾರೆ.

ನಮ್ಮ ತಂಡದ ಆಟಗಾರರು ಈಗಾಗಲೇ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಶಕಿಬ್​ ಅಲ್​ ಹಸನ್​ ಹಾಗೂ ತಮೀಮ್​ ಇಕ್ಬಾಲ್​ರಂತಹ ಅತ್ಯುತ್ತಮ ಆಟಗಾರರ ಅನುಪಸ್ಥಿತಿ ನಡುವೆಯೂ ತಂಡ ಸಾಂಘಿಕ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ರು.

Intro:Body:

ನಾಳೆಯ ಪಂದ್ಯದಲ್ಲೂ ಗೆಲುವು ನಮ್ಮದೇ: ರೋಹಿತ್​ ಬಳಗಕ್ಕೆ ಬಾಂಗ್ಲಾ ಕ್ಯಾಪ್ಟನ್​ ಎಚ್ಚರಿಕೆ! 

ರಾಜ್​ಕೋಟ್​​: ಪ್ರವಾಸಿ ಬಾಂಗ್ಲಾ ವಿರುದ್ಧ ಆರಂಭಗೊಂಡಿರುವ ಮೂರು ಟಿ-20 ಪಂದ್ಯಗಳ ಕ್ರಿಕೆಟ್​​ ಸರಣಿಯಲ್ಲಿ ಈಗಾಗಲೇ ಬಾಂಗ್ಲಾ ತಂಡ ಮೊದಲ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. 

ಇದರ ಮಧ್ಯೆ ನಾಳೆ ರಾಜ್​ಕೋಟ್​​​ನಲ್ಲಿ ಎರಡನೇ ಟಿ-20 ಪಂದ್ಯ ಶುರುವಾಗಲಿದ್ದು, ಸರಣಿಯಲ್ಲಿ ಜೀವಂತವಾಗಿರಲು ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಮಧ್ಯೆ ಎದುರಾಳಿ ತಂಡದ ಕ್ಯಾಪ್ಟನ್​ ಮಹ್ಮುದುಲ್ಲಾ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಟೀಂ ಇಂಡಿಯಾ ವಿರುದ್ಧ ಕ್ರಿಕೆಟ್​ ಸರಣಿ ಕೈವಶ ಮಾಡಿಕೊಳ್ಳಲು ನಮಗೆ ಇದು ಅತ್ಯುತ್ತಮ ಅವಕಾಶ. ನಾಳೆಯ ಪಂದ್ಯದಲ್ಲಿ ನಮ್ಮ ಪ್ಲೇಯರ್ಸ್​ ಉತ್ತಮ ಪ್ರದರ್ಶನ ನೀಡಲಿದ್ದು,ಐತಿಹಾಸಿಕ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದೇವೆ ಎಂದಿದ್ದಾರೆ. 

ನಮ್ಮ ತಂಡದ ಆಟಗಾರರು ಈಗಾಗಲೇ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಶಕಿಬ್​ ಅಲ್​ ಹಸನ್​ ಹಾಗೂ ತಮೀಮ್​ ಇಕ್ಬಾಲ್​ರಂತಹ ಆಟಗಾರರ ಕೊರತೆ ನಡುವೆ ಸಹ ಅದ್ಭುತ ಪ್ರದರ್ಶನ ಮೂಡಿ ಬರುತ್ತಿದೆ ಎಂದು ತಿಳಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.