ದುಬೈ: ಪಾಕಿಸ್ತಾನ ವಿರುದ್ಧದ ಟಿ-20 ಸರಣಿಯಲ್ಲಿ 176 ರನ್ ಸಿಡಿಸಿ ಮಿಂಚಿದ್ದ ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಟಿಮ್ ಸೀಫರ್ಟ್ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ನೂತನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬರೋಬ್ಬರಿ 24 ಸ್ಥಾನ ಏರಿಕೆ ಕಂಡಿದ್ದು, ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸೀಫರ್ಟ್ ಈ ಸರಣಿಯಲ್ಲಿ 57, 84 ಮತ್ತು 35 ರನ್ ಗಳಿಸಿದ್ದರು. ಈ ಸರಣಿಗೂ ಮುನ್ನ ಅವರು 33ನೇ ಶ್ರೇಯಾಂಕದಲ್ಲಿದ್ದರು. ಇದೀಗ 9ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಮನ್ರೋ ಒಂದು ಸ್ಥಾನ ಕುಸಿದಿದ್ದರಿಂದ ಕೊಹ್ಲಿ 8ರಿಂದ 7ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
-
Huge gains for Tim Seifert 🎉
— ICC (@ICC) December 23, 2020 " class="align-text-top noRightClick twitterSection" data="
He has climbed up 24 spots to break into the top 10 of the @MRFWorldwide ICC Men's T20I Player Rankings for batting 👀
Full list 👉 https://t.co/H7CnAiw0YT pic.twitter.com/HzjxuFo0NI
">Huge gains for Tim Seifert 🎉
— ICC (@ICC) December 23, 2020
He has climbed up 24 spots to break into the top 10 of the @MRFWorldwide ICC Men's T20I Player Rankings for batting 👀
Full list 👉 https://t.co/H7CnAiw0YT pic.twitter.com/HzjxuFo0NIHuge gains for Tim Seifert 🎉
— ICC (@ICC) December 23, 2020
He has climbed up 24 spots to break into the top 10 of the @MRFWorldwide ICC Men's T20I Player Rankings for batting 👀
Full list 👉 https://t.co/H7CnAiw0YT pic.twitter.com/HzjxuFo0NI
ಇಂಗ್ಲೆಂಡ್ನ ಡೇವಿಡ್ ಮಲನ್(915), ಬಾಬರ್ ಅಜಮ್(820), ಕೆ.ಎಲ್.ರಾಹುಲ್(816) ಮೊದಲ ಮೂರು ಸ್ಥಾನದಲ್ಲಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್(736) ಮತ್ತು ಮುಜೀಬ್(730) ಮೊದಲೆರಡು ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಆದಿಲ್ ರಶೀದ್(700), ಆ್ಯಡಂ ಜಂಪಾ(685), ಶಂಸಿ(680) ನಂತರದ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ ಶ್ರೇಯಾಂಕದಲ್ಲಿ ಅಫ್ಘಾನಿಸ್ತಾನದ ಮೊಹಮ್ಮದ್ ನಬಿ, ಶಕಿಬ್ ಅಲ್ ಹಸನ್ ಹಾಗೂ ಗ್ಲೇನ್ ಮ್ಯಾಕ್ಸ್ವೆಲ್ ನಂತರದ ಸ್ಥಾನದಲ್ಲಿದ್ದಾರೆ.