ETV Bharat / sports

ಐಪಿಎಲ್​ನಲ್ಲಿ ಸೇಲ್​ ಆಗದ ಲಂಕಾ ಪ್ಲೇಯರ್ಸ್​​.. ಸಂಗಕ್ಕಾರ​, ಜಯವರ್ದನೆ ಹೇಳಿದ್ರು ಈ ಮಾತು!

author img

By

Published : Feb 19, 2021, 5:09 PM IST

Updated : Apr 11, 2021, 4:57 PM IST

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾದ ಯಾವೊಬ್ಬ ಪ್ಲೇಯರ್ಸ್ ಟೂರ್ನಿಯಲ್ಲಿ ಭಾಗಿಯಾಗುತ್ತಿಲ್ಲ. ಜತೆಗೆ ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಾರು ಸೇಲ್ ಆಗಿಲ್ಲ.

Sangakkara, Jayawardene
Sangakkara, Jayawardene

ಚೆನ್ನೈ: 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ಗೋಸ್ಕರ ನಿನ್ನೆ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಶ್ರೀಲಂಕಾದ ಯಾವೊಬ್ಬ ಪ್ಲೇಯರ್ ಕೂಡ ಸೇಲ್​ ಆಗಿಲ್ಲ. ಈ ವಿಚಾರವಾಗಿ ಲಂಕಾ ಲೆಜೆಂಡ್​ಗಳಾದ ಕುಮಾರ್​ ಸಂಗಕ್ಕಾರ ಹಾಗೂ ಮಹೇಲಾ​ ಜಯವರ್ದನೆ ಮಾತನಾಡಿದ್ದಾರೆ.

ಓದಿ: ಉಮೇಶ್ ಯಾದವ್ 1 ಕೋಟಿ ರೂ.ಗೆ ಸೇಲ್​ ಆಗಿದ್ದು ತುಂಬಾ ಆಘಾತವಾಯ್ತು: ಗೌತಮ್​ ಗಂಭೀರ್​!

ಶ್ರೀಲಂಕಾ ಪುರುಷರ ತಂಡದ ಮುಂದಿನ ಪ್ರವಾಸಗಳ ಬಗ್ಗೆ ಸ್ಪಷ್ಟತೆ ಮೂಡಿಸುವಲ್ಲಿ ಶ್ರೀಲಂಕಾ ಕ್ರಿಕೆಟ್ ವಿಫಲವಾದ ಕಾರಣ ಐಪಿಎಲ್​​ನಲ್ಲಿ ಶ್ರೀಲಂಕಾ ಪ್ಲೇಯರ್ಸ್ ಸೇಲ್​ ಆಗಿಲ್ಲ ಎಂದು ಸಂಗಕ್ಕಾರ​ ಮತ್ತು ಜಯವರ್ಧನೆ ಹೇಳಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್​ನಿಂದ ಲಸಿತ್ ಮಾಲಿಂಗ ಹೊರಗುಳಿದಿದ್ದು, ಆರ್​ಸಿಬಿ ಪರ ಕಳೆದ ವರ್ಷ ಕಣಕ್ಕಿಳಿದಿದ್ದ ಇಸುರು ಉದಾನಗೆ ತಂಡ ಕೈಬಿಟ್ಟ ನಂತರ ಯಾವೊಬ್ಬ ಲಂಕಾ ಪ್ಲೇಯರ್ಸ್ ಕೂಡ ಪ್ರಾಂಚೈಸಿಗಳಲ್ಲಿಲ್ಲ.

ಶ್ರೀಲಂಕಾದಲ್ಲಿ ಕೆಲವು ಅದ್ಭುತ ಆಟಗಾರರಿದ್ದಾರೆ. ಆದರೆ, ಶ್ರೀಲಂಕಾ ಕ್ರಿಕೆಟ್ ಪ್ರವಾದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಅವರು ಸೇಲ್​ ಆಗಿಲ್ಲ ಎಂದು ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ ಹರಾಜಿನಲ್ಲಿ ಪ್ರಾಂಚೈಸಿಗಳು ವೇಗದ ಬೌಲರ್ ಹಾಗೂ ಆಲ್​ರೌಂಡರ್​ಗಳಿಗೆ ಹೆಚ್ಚಿನ ಮಣೆ ಹಾಕಿದ್ದು, ಲಂಕಾದಲ್ಲಿ ಅದರ ಕೊರತೆ ಇದೆ ಎಂದು ಜಯವರ್ಧನೆ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಇದೇ ಮೊದಲ ಸಲ ಲಂಕಾ ಪ್ರೀಮಿಯರ್​ ಲೀಗ್ ಆಯೋಜನೆ ಮಾಡಿದ್ದರ ಹೊರತಾಗಿ ಕೂಡ ಯಾವುದೇ ಪ್ಲೇಯರ್ಸ್ ಸೇಲ್​ ಆಗಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

Last Updated : Apr 11, 2021, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.