ಹೈದರಾಬಾದ್: ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿರುವುದಕ್ಕೆ ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನವನ್ನು ಸಚಿನ್ ತೆಂಡೂಲ್ಕರ್ ಡಿಕೋಡ್ ಮಾಡಿದ್ದು, ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಫುಲ್ ಸ್ಟ್ರೆಚ್ಡ್ ಫಾರ್ವರ್ಡ್ ಅನುಪಸ್ಥಿತಿ ಕಂಡು ಬಂದಿತ್ತು ಎಂದು ಅವರು ಹೇಳಿದ್ದಾರೆ.
ವೇಗದ ಬೌಲರ್ಗಳನ್ನು ಎದುರಿಸುವಾಗ ಬ್ಯಾಟ್ಸ್ಮನ್ಗಳು ಫುಲ್ ಸ್ಟ್ರಚ್ಡ್ ಫಾರ್ವರ್ಡ್ ಸ್ಟ್ರೈಡ್ ಮೂಲಕ ಡಿಫೆನ್ಸ್ ಆಡಬೇಕಿರುತ್ತದೆ. ಆದರೆ, ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಅದು ಕಂಡುಬರಲಿಲ್ಲ ಎಂಬುದನ್ನ ಸಚಿನ್ ಗುರುತಿಸಿದ್ದಾರೆ. ಭಾರತ ತಂಡ ಮೊದಲ ಪಂದ್ಯದಲ್ಲಿ 8 ವಿಕೆಟ್ಗಳ ಸೋಲುಕಂಡಿತ್ತು.
![ಭಾರತ vs ಆಸ್ಟ್ರೇಲಿಯಾ](https://etvbharatimages.akamaized.net/etvbharat/prod-images/untitled-design-77-1_2312newsroom_1608716520_666.jpg)
ಮೊದಲ ಇನ್ನಿಂಗ್ಸ್ನಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೆವು, ಜೊತೆಗೆ ಆರಂಭಿಕ ಆಘಾತದಲ್ಲಿ ತ್ವರಿತವಾಗಿ ಚೇತರಿಸಿಕೊಳ್ಳುವುದನ್ನ ನಾವು ತೋರಿಸಿದ್ದೆವು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ನಮ್ಮ ಬ್ಯಾಟ್ಸ್ಮನ್ಗಳು ಹೆಚ್ಚು ಆಟವಾಡಲಿಲ್ಲಲ್ಲ. ಅವರು ಸಂಪೂರ್ಣ ಲಯ ಕಳೆದುಕೊಂಡರು. ಅಲ್ಲದೇ ಚೆಂಡಿನ ಚಲನೆ ಕಡಿಮೆಯಿತ್ತು, ಈ ಕಾರಣದಿಂದ ನಮ್ಮ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದರು ಎಂದು ಸಚಿನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಆದರೆ, ನಾನು ಕಳೆದ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಸ್ಟ್ರೈಡ್ ಫಾರ್ವರ್ಡ್ ಕಾಣೆಯಾಗಿದ್ದನ್ನು ಗಮನಿಸಿದ್ದೇನೆ. ವಿದೇಶಿ ಪಿಚ್ಗಳಲ್ಲಿ ವೇಗದ ಬೌಲರ್‌ಗಳ ವಿರುದ್ಧ ಉತ್ತಮ ಸ್ಟ್ರೈಡ್ ಫಾರ್ವರ್ಡ್ ಪ್ರಯೋಗಿಸುವುದು ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆ " ಎಂದು 100 ಅಂತಾರಾಷ್ಟ್ರೀಯ ಶತಕಗಳಿಸಿರುವ ಸಚಿನ್ ಹೇಳಿದ್ದಾರೆ.
![ಪ್ಯಾಟ್ ಕಮ್ಮಿನ್ಸ್](https://etvbharatimages.akamaized.net/etvbharat/prod-images/download_2312newsroom_1608716520_578.jpg)
ಇದೇ ಸಂದರ್ಭದಲ್ಲಿ ಬ್ಯಾಟ್ಸ್ಮನ್ಗಳ ಆಪ್ ಹಾರ್ಟೆಡ್ ಫೂಟ್ ಮೂವ್ಮೆಂಟ್ ಕೂಡ ಬ್ಯಾಟ್ಸ್ಮನ್ಗಳಿಗೆ ಸಮಸ್ಯೆ ತಂದೊಡ್ಡುತ್ತದೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
ಹಾಫ್ ಅಂಡ್ ಹಾಫ್ ಡಿಫೆನ್ಸ್ ಕೂಡ ಬ್ಯಾಟ್ಸ್ಮನ್ಗಳಿಗೆ ಯಾವಾಗಲೂ ಸಮಸ್ಯೆ ತಂದೊಡ್ಡುತ್ತದೆ. ಸೀಮರ್ಗಳ ವಿರುದ್ಧ ಬ್ಯಾಟಿಂಗ್ ಮಾಡುವಾಗ ಪಾದ ಚಲನೆ ಹೆಚ್ಚು ಮಹತ್ವ ಪಡೆದಿರುತ್ತದೆ. ಆಸ್ಟ್ರೇಲಿಯಾ ಬೌಲರ್ಗಳು 2ನೇ ಇನ್ನಿಂಗ್ಸ್ನಲ್ಲಿ ಹೆಚ್ಚು ಸ್ಟಂಪ್ಗಳ ಮೇಲೆ ಬೌಲಿಂಗ್ ಮಾಡುತ್ತಿದ್ದರು. ಆದರೆ, ಮೊದಲನೇ ಇನ್ನಿಂಗ್ಸ್ನಲ್ಲಿ ಹೆಚ್ಚು ಸ್ಟಂಪ್ನ ಔಟ್ಸೈಡ್ನಲ್ಲಿ ಬೌಲಿಂಗ್ ಮಾಡಿದ್ದರಿಂದ ಭಾರತೀಯ ಬ್ಯಾಟ್ಸ್ಮನ್ಗಳಿಗೆ ಅನುಕೂಲವಾಗಿತ್ತು ಎಂದು ಸಚಿನ್ ಭಾರತೀಯ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಕೈಗನ್ನಡಿ ಹಿಡಿದಿದ್ದಾರೆ.