ಕೇಪ್ ಟೌನ್: ಕ್ರಿಕೆಟ್ ಸೌತ್ ಆಫ್ರಿಕಾವನ್ನು ಸರ್ಕಾರ ಅಮಾನತುಗೊಳಿಸಿರುವ ಕಾರಣ ದಕ್ಷಿಣ ಆಫ್ರಿಕಾದ ಕ್ರೀಡಾ ಒಕ್ಕೂಟ ಮತ್ತು ದಕ್ಷಿಣ ಆಫ್ರಿಕಾದ ಒಲಿಂಪಿಕ್ ಸಮಿತಿ ದೇಶದಲ್ಲಿ ಕ್ರಿಕೆಟ್ ಉಸ್ತುವಾರಿ ವಹಿಸಿಕೊಳ್ಳಲಿದೆ.
ರಾಷ್ಟ್ರಗಳ ಕ್ರಿಕೆಟ್‌ನಲ್ಲಿ ಸರ್ಕಾರದ ಹಸ್ತಕ್ಷೇಪದ ಬಗ್ಗೆ ನಿಯಮವಿರುವುದರಿಂದ ಈ ಕ್ರಮವು ರಾಷ್ಟ್ರೀಯ ತಂಡವನ್ನು ಐಸಿಸಿಯಿಂದ ಹೊರಹಾಕಲು ಕಾರಣವಾಗಬಹುದು. ಐಸಿಸಿ ನಿಯಮಗಳು ಯಾವುದೇ ರಾಷ್ಟ್ರದ ಕ್ರಿಕೆಟ್ ಮಂಡಳಿಯ ಚಾಲನೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪವನ್ನು ತಡೆಯುತ್ತದೆ.
ಸಿಎಸ್ಎಗೆ ದಕ್ಷಿಣ ಆಫ್ರಿಕಾದ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿ (ಎಸ್‌ಎಎಸ್‌ಸಿಒಸಿ)ಯಿಂದ ಬಂದ ಮಾಹಿತಿಗಳ ಪ್ರಕಾರ, ಸಿಎಸ್ಎ ಮಂಡಳಿ ಮತ್ತು ಮಂಡಳಿಯಲ್ಲಿ ಎಕ್ಸ್-ಆಫೀಸಿಯೊದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು (ಕಾರ್ಯದರ್ಶಿ, ಆಕ್ಟಿಂಗ್ ಸಿಇಒ, ಸಿಎಫ್‌ಒ ಮತ್ತು ಸಿಒಒ) ಸಿಎಸ್‌ಎ ಆಡಳಿತದಿಂದ ಪೂರ್ಣ ವೇತನದಿಂದ ಹೊರಗುಳಿಯುವಂತೆ ನಿರ್ದೇಶಿಸಲಾಗಿದೆ.
2019ರ ಡಿಸೆಂಬರ್‌ನಿಂದಲೂ ಕ್ರಿಕೆಟ್ ಮಂಡಳಿಯಲ್ಲಿ ಬಹಳಷ್ಟು ದುರುದ್ದೇಶಪೂರಿತ ಮತ್ತು ದುಷ್ಕೃತ್ಯದ ಅನೇಕ ಘಟನೆಗಳು ನಡೆಯುತ್ತಿವೆ ಎಂದು ಎಸ್‌ಎಎಸ್‌ಸಿಒಸಿ ಹೇಳಿದೆ. ಸುಮಾರು ಒಂದು ತಿಂಗಳಿನಿಂದಲೂ ಅಧಿಕ ಕಾಲ ತನಿಖೆ ನಡೆಸಿದ ಎಸ್‌ಎಎಸ್‌ಸಿಒಸಿ ಈ ನಿರ್ಧಾರ ಪ್ರಕಟಿಸಿದೆ.
ಇದು ನಿಮ್ಮ ಸ್ವಂತ ಸದಸ್ಯರು, ಪೋರ್ಟೀಸ್ನ ರಾಷ್ಟ್ರೀಯ ತಂಡದ ಮಾಜಿ ಮತ್ತು ಪ್ರಸ್ತುತ ಸದಸ್ಯರು, ಪ್ರಾಯೋಜಕರು ಮತ್ತು ಕ್ರಿಕೆಟ್ ಪ್ರೀತಿ ಹೊಂದಿರುವ ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟು ಮಾಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.