ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ದ್ವಿಶತಕ ಬಾರಿಸಿ ಕಮಾಲ್ ಮಾಡಿದ್ದಾರೆ.
ಟೀಂ ಇಂಡಿಯಾ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ತ್ರಿಶತಕ ಸಿಡಿಸಿರುವ ದಾಖಲೆ ಹೊಂದಿರುವ ವೀರೇಂದ್ರ ಸೆಹ್ವಾಗ್ ಹುಟ್ಟುಹಬ್ಬವಾದ ಇಂದು ರೋಹಿತ್ ಶರ್ಮಾ ದ್ವಿಶತಕ ಬಾರಿಸಿ ವಿಶೇಷವಾಗಿ ಗಿಫ್ಟ್ ನೀಡಿದ್ದಾರೆ. ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ದಾಖಲೆಯ ದ್ವಿಶತಕ(264) ಇನ್ನೂ ಯಾರು ಸಹ ಮುರಿದಿಲ್ಲ.
249 ಎಸೆತದಲ್ಲಿ 205 ರನ್ ಬಾರಿಸಿರುವ ರೋಹಿತ್ ಇನ್ನಿಂಗ್ಸ್ನಲ್ಲಿ 5 ಸಿಕ್ಸರ್ ಹಾಗೂ 28 ಆಕರ್ಷಕ ಬೌಂಡರಿಗಳು ಸೇರಿವೆ. ಜೊತೆಗೆ ಶರ್ಮಾ ಪಾಲಿಗೆ ಇದು ಚೊಚ್ಚಲ ದ್ವಿಶತಕ ಸಂಭ್ರಮ. ಸಿಕ್ಸರ್ ಮೂಲಕ ಇನ್ನೂರರ ಗಡಿ ದಾಟಿದ್ದು, ಸೆಹ್ವಾಗ್ ಬರ್ತ್ಡೇ ದಿನವೇ ಬ್ಯಾಟಿಂಗ್ ವೈಭವ ಕಂಡುಬಂದಿದ್ದು ವಿಶೇಷವಾಗಿದೆ.
-
Take a bow, HITMAN 💯💯
— BCCI (@BCCI) 20 October 2019 " class="align-text-top noRightClick twitterSection" data="
An absolutely sensational innings from @ImRo45 as he brings up his double ton here in Ranchi. pic.twitter.com/zqLCCfQzqX
">Take a bow, HITMAN 💯💯
— BCCI (@BCCI) 20 October 2019
An absolutely sensational innings from @ImRo45 as he brings up his double ton here in Ranchi. pic.twitter.com/zqLCCfQzqXTake a bow, HITMAN 💯💯
— BCCI (@BCCI) 20 October 2019
An absolutely sensational innings from @ImRo45 as he brings up his double ton here in Ranchi. pic.twitter.com/zqLCCfQzqX
ಸೆಹ್ವಾಗ್ ದಾಖಲೆ ಸರಿಗಟ್ಟಿದ ಹಿಟ್ಮ್ಯಾನ್:
ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತದ 500ಕ್ಕೂ ಅಧಿಕ ರನ್ ಗಳಿಸಿರುವ ಆರಂಭಿಕ ಆಟಗಾರರ ಪೈಕಿ ವೀರೇಂದ್ರ ಸೆಹ್ವಾಗ್ ಮೊದಲಿಗರು. ಇಂದಿನ ಆಟದಲ್ಲಿ ರೋಹಿತ್ ಶರ್ಮಾ ಆ ದಾಖಲೆ ಸರಿಗಟ್ಟಿದ್ದಾರೆ.
-
💥 200 FOR ROHIT SHARMA 💥
— ICC (@ICC) 20 October 2019 " class="align-text-top noRightClick twitterSection" data="
He's recorded three double centuries in ODI cricket, and now he has one in Tests too 👀
What a knock this has been from the India opener!
Follow #INDvSA LIVE 👉 https://t.co/AEYe6hGC3o pic.twitter.com/6lz80LHK4C
">💥 200 FOR ROHIT SHARMA 💥
— ICC (@ICC) 20 October 2019
He's recorded three double centuries in ODI cricket, and now he has one in Tests too 👀
What a knock this has been from the India opener!
Follow #INDvSA LIVE 👉 https://t.co/AEYe6hGC3o pic.twitter.com/6lz80LHK4C💥 200 FOR ROHIT SHARMA 💥
— ICC (@ICC) 20 October 2019
He's recorded three double centuries in ODI cricket, and now he has one in Tests too 👀
What a knock this has been from the India opener!
Follow #INDvSA LIVE 👉 https://t.co/AEYe6hGC3o pic.twitter.com/6lz80LHK4C
ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರ ಎನ್ನುವ ಕೀರ್ತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ಈ ಮೊದಲು 1996/97ರಲ್ಲಿ ಮೊಹಮ್ಮದ್ ಅಜರುದ್ದೀನ್ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 388 ರನ್ ಗಳಿಸಿದ್ದು ಹಿಂದಿನ ದಾಖಲೆಯಾಗಿತ್ತು.