ETV Bharat / sports

ಪಂದ್ಯದ ವೇಳೆ ರೋಹಿತ್​ ಕಾಲಿಗೆ ಬಿದ್ದ ಅಭಿಮಾನಿ, ಮುಗ್ಗರಿಸಿ ಬಿದ್ದ ಹಿಟ್​ಮ್ಯಾನ್​! - ರೋಹಿತ್​ ಶರ್ಮಾ

ಮಹಾರಾಷ್ಟ್ರ ಕ್ರಿಕೆಟ್​ ಅಸೋಷಿಯೇಷನ್​ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​​ ಪಂದ್ಯದ ವೇಳೆ ವಿಚಿತ್ರ ಘಟನೆ ನಡೆದಿದ್ದು, ವಿಚಲಿತಗೊಂಡಿರುವ ರೋಹಿತ್​ ಶರ್ಮಾ ಏಕಾಏಕಿ ಮುಗ್ಗರಿಸಿ ಬಿದ್ದಿದ್ದಾರೆ.

ರೋಹಿತ್​​ ಶರ್ಮಾ ಕಾಲಿಗೆ ಬಿದ್ದ ಅಭಿಮಾನಿ
author img

By

Published : Oct 12, 2019, 8:42 PM IST

ಪುಣೆ: ಕ್ರಿಕೆಟ್​ ಪಂದ್ಯ ನಡೆಯುತ್ತಿರುವಾಗಲೇ ಕ್ರೀಡಾಭಿಮಾನಿಗಳು ಮೈದಾನಕ್ಕೆ ನುಗ್ಗಿ ತಮ್ಮ ನೆಚ್ಚಿನ ಪ್ಲೇಯರ್​ ಕಾಲಿಗೆ ಬೀಳುವ ಘಟನೆ ಹಿಂದಿನಿಂದಲೂ ನಡೆಯುತ್ತಿದ್ದು, ಇದೀಗ ಮತ್ತೊಂದು ಘಟನೆ ನಡೆದಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನ ಕ್ರೀಡಾಭಿಮಾನಿ ಓಡಿ ಬಂದು ರೋಹಿತ್​ ಶರ್ಮಾ ಕಾಲಿಗೆ ಬಿದ್ದಿದ್ದಾನೆ. ಈ ವೇಳೆ ವಿಚಲಿತಗೊಂಡಿರುವ ಶರ್ಮಾ ಮುಗ್ಗರಿಸಿ ಕೆಳಗೆ ಬಿದ್ದರು.

Rohit Sharma
ಅಭಿಮಾನಿ ಕಾಲಿಗೆ ಬಿದ್ದಾಗ ಮುಗ್ಗರಿಸಿದ ರೋಹಿತ್​​ ಶರ್ಮಾ

ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿರುವ ಕ್ರೀಡಾಭಿಮಾನಿ ರೋಹಿತ್​ ಶರ್ಮಾ ಇದ್ದಲ್ಲಿಗೆ ಬಂದು ಅವರ ಕಾಲಿಗೆ ಬೀಳಲು ಮುಂದಾಗಿದ್ದಾರೆ. ಈ ವೇಳೆ ಅಭಿಮಾನಿ, ಹಿಟ್​ಮ್ಯಾನ್ ಕಾಲು ಹಿಡಿದುಕೊಂಡಿದ್ದರಿಂದ ಆಯತಪ್ಪಿ ಅವರೂ ಮೇಲೆ ಬಿದ್ದಿದ್ದಾರೆ. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಮಯಾಂಕ್​ ಹಾಗೂ ರಹಾನೆ ಅವರನ್ನು ಮೇಲೆತ್ತಿದ್ದಾರೆ.

Rohit Sharma
ಅಭಿಮಾನಿಯನ್ನು ಎಬ್ಬಿಸಲು ನೆರವಾಗುತ್ತಿರುವ ರೋಹಿತ್​​ ಶರ್ಮಾ

ಈ ಹಿಂದೆಯೂ ಸಹ ಇಂತಹ ಅನೇಕ ಘಟನಾವಳಿಗಳು ನಡೆದಿದ್ದು, ಮಹೇಂದ್ರ ಸಿಂಗ್​ ಧೋನಿ, ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕಾಲಿಗೆ ಮೈದಾನದಲ್ಲೇ ಅನೇಕ ಅಭಿಮಾನಿಗಳು ಬಿದ್ದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ವೀಕ್ಷಿಸಿರುವ ಕೊಹ್ಲಿ ಮುಗುಳುನಕ್ಕು ಸುಮ್ಮನಾಗಿದ್ದಾರೆ.

Rohit Sharma
ಘಟನೆ ನೋಡಿ ಕೊಹ್ಲಿ ಪ್ರತಿಕ್ರಿಯೆ​​

Intro:Body:

ಪಂದ್ಯದ ವೇಳೆ ರೋಹಿತ್​ ಕಾಲಿಗೆ ಬಿದ್ದ ಅಭಿಮಾನಿ... ಮುಗ್ಗರಿಸಿ ಬಿದ್ದ ಹಿಟ್​ಮ್ಯಾನ್​! 

ಪುಣೆ: ಕ್ರಿಕೆಟ್​ ಪಂದ್ಯ ನಡೆಯುತ್ತಿರುವಾಗಲೇ ಕ್ರೀಡಾಭಿಮಾನಿಗಳು ಮೈದಾನಕ್ಕೆ ನುಗ್ಗಿ ತಮ್ಮ ನೆಚ್ಚಿನ ಪ್ಲೇಯರ್​ ಕಾಲಿಗೆ ಬೀಳುವ ಘಟನೆ ಈ ಹಿಂದಿನಿಂದಲೂ ನಡೆಯುತ್ತಿದ್ದು, ಇದೀಗ ಅಂತಹ ಮತ್ತೊಂದು ಘಟನೆ ನಡೆದಿದೆ. 

ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನ ಕ್ರೀಡಾಭಿಮಾನಿವೋರ್ವ ಓಡಿ ಬಂದು ರೋಹಿತ್​ ಶರ್ಮಾ ಕಾಲಿಗೆ ಬಿದ್ದಿದ್ದಾನೆ. ಈ ವೇಳೆ ವಿಚಲಿತಗೊಂಡಿರುವ ರೋಹಿತ್​ ಶರ್ಮಾ ಮುಗ್ಗರಿಸಿ ಕೆಳಗೆ ಬಿದ್ದಿದ್ದಾರೆ. 

ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿರುವ ಕ್ರೀಡಾಭಿಮಾನಿ ರೋಹಿತ್​ ಶರ್ಮಾ ಇದ್ದಲ್ಲಿಗೆ ಬಂದು ಅವರ ಕಾಲಿಗೆ ಬೀಳಲು ಮುಂದಾಗಿದ್ದಾರೆ. ಈ ವೇಳೆ ಅಭಿಮಾನಿ ಹಿಟ್​ಮ್ಯಾನ್ ಕಾಲು ಹಿಡಿದುಕೊಂಡಿದ್ದರಿಂದ ಆಯತಪ್ಪಿ ಆತಮ ಮೇಲೆ ಬಿದ್ದಿದ್ದಾರೆ,. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಮಯಾಂಕ್​ ಹಾಗೂ ರಹಾನೆ ಅವರನ್ನ ಮೇಲಕ್ಕೆ ಎತ್ತಿದ್ದಾರೆ. ಸದ್ಯ ಈ ದೃಶ್ಯ ಸಿಕ್ಕಾಪಟ್ಟೆ ವೈರಲ್​ ಆಗಿದೆ. 

ಈ ಹಿಂದೆ ಸಹ ಅನೇಕ ಇಂತಹ ಘಟನೆ ನಡೆದಿದ್ದು, ಮಹೇಂದ್ರ ಸಿಂಗ್​ ಧೋನಿ,ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕಾಲಿಗೆ ಮೈದಾನದಲ್ಲೇ ಅನೇಕ ಅಭಿಮಾನಿಗಳು ಬಿದ್ದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ವೀಕ್ಷಣೆ ಮಾಡಿರುವ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮುಗುಳುನಗೆ ಹಾಕಿ ಸುಮ್ಮನಾಗಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.