ETV Bharat / sports

ರೋ'ಹಿಟ್​'​ ಸಿಕ್ಸರ್.. ಹೊಡೆತಕ್ಕೆ​ ಸ್ಟೇಡಿಯಂನಿಂದಾಚೆ ಚಲಿಸುತ್ತಿದ್ದ ಬಸ್​ಗೆ ಬಡಿದ ಚೆಂಡು​​​ - ಮುಂಬೈ ಇಂಡಿಯನ್ಸ್​

ರೋಹಿತ್ ಶರ್ಮಾ ಐಪಿಎಲ್​ನ ಅತ್ಯಂತ ಯಶಸ್ವಿ ಕ್ಯಾಪ್ಟನ್​ ಆಗಿದ್ದಾರೆ. ಅವರ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್​ 2013, 2015, 2017 ಹಾಗೂ 2019ರ ಆವೃತ್ತಿಗಳಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಈವರ್ಷ ಕಿವೀಸ್​ ಪ್ರವಾಸದಲ್ಲಿ 150 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ್ದ ರೋಹಿತ್​ 4 ಪಂದ್ಯಗಳಿಂದ 140 ರನ್ ಸಿಡಿಸಿದ್ದರು..

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ
author img

By

Published : Sep 9, 2020, 5:41 PM IST

Updated : Sep 9, 2020, 8:03 PM IST

ದುಬೈ : ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಅಭ್ಯಾಸದ ವೇಳೆ ಬೃಹತ್​ ಸಿಕ್ಸರ್​ ಸಿಡಿಸಿದ್ದು, ಚೆಂಡು ಸ್ಟೇಡಿಯಂನಿಂದ ಆಚೆ ಚಲಿಸುತ್ತಿದ್ದ ಬಸ್​ಗೆ ಅಪ್ಪಳಿಸಿದೆ. ಈ ವಿಡಿಯೋವನ್ನು ಮುಂಬೈ ಇಂಡಿಯನ್ಸ್​ ತನ್ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್​ ಮಾಡಿಕೊಂಡಿದೆ.

4 ಬಾರಿಯ ಐಪಿಎಲ್​ ಚಾಂಪಿಯನ್​ ಆಗಿರುವ ಮುಂಬೈ ಇಂಡಿಯನ್ಸ್​ 13ನೇ ಆವೃತ್ತಿಯ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೆಣಸಾಡುತ್ತಿದೆ. ಇದಕ್ಕಾಗಿ ಮೈದಾನದಲ್ಲಿ ಸಾಕಷ್ಟು ಬೆವರು ಸುರಿಸುತ್ತಿದೆ.

ತಂಡದ ಆಟಗಾರರು ಅಭ್ಯಾಸ ಮಾಡುವ ವಿಡಿಯೋವನ್ನು ಅಪ್​ಡೇಟ್​ ಮಾಡಿರುವ ಮುಂಬೈ ಇಂಡಿಯನ್ಸ್​, ಬುಧವಾರ ತನ್ನ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್​​ ಖಾತೆಯಲ್ಲಿ ರೋಹಿತ್ ಶರ್ಮಾ ಸಿಕ್ಸರ್​ ಮೂಲಕ ಬಸ್​ಗೆ ಹೊಡೆದ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ. ಜೊತೆಗೆ, ಲೆಜೆಂಡ್​​ ಸ್ಟೇಡಿಯಂ ಆಚೆಗೆ ಕ್ಲಿಯರ್​ ಮಾಡಿದ್ದಾರೆ. ಬೃಹತ್​ ಸಿಕ್ಸ್​ ಮೂಲಕ ಹಿಟ್​​ಮ್ಯಾನ್​ ಚೆಲಿಸುವ ಬಸ್​ಗೆ ಬಾರಿಸಿದ್ದಾರೆ ಎಂದು ಬರೆದುಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ರೋಹಿತ್ ಶರ್ಮಾ ಐಪಿಎಲ್​ನ ಅತ್ಯಂತ ಯಶಸ್ವಿ ಕ್ಯಾಪ್ಟನ್​ ಆಗಿದ್ದಾರೆ. ಅವರ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್​ 2013, 2015, 2017 ಹಾಗೂ 2019ರ ಆವೃತ್ತಿಗಳಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಈವರ್ಷ ಕಿವೀಸ್​ ಪ್ರವಾಸದಲ್ಲಿ 150 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ್ದ ರೋಹಿತ್​ 4 ಪಂದ್ಯಗಳಿಂದ 140 ರನ್ ಸಿಡಿಸಿದ್ದರು. ತಂಡದ ನಾಯಕನಾಗಿದ್ದ ಅವರು ಟಿ20 ಸರಣಿಯನ್ನು 5-0ಯಲ್ಲಿ ಗೆಲ್ಲಲು ನೆರವಾಗಿದ್ದರು. ಇದೀಗ ಐಪಿಎಲ್​ಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿದ್ದು ಮತ್ತೊಂದು ಪ್ರಶಸ್ತಿಗಾಗಿ ಮುಂಬೈ ಇಂಡಿಯನ್ಸ್‌ ತಂಡದ ಫ್ಯಾನ್ಸ್‌ ಎದುರು ನೋಡುತ್ತಿದ್ದಾರೆ.​

Last Updated : Sep 9, 2020, 8:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.