ETV Bharat / sports

ಬ್ರಿಸ್ಬೇನ್​ ಟೆಸ್ಟ್​ನಲ್ಲಿ ದ್ರಾವಿಡ್​ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ - ಕೃಷ್ಣಮಾಚಾರಿ ಶ್ರೀಕಾಂತ್

ರೋಹಿತ್ ಶರ್ಮಾಗೂ ಮೊದಲು 1969/70 ಏಕನಾಥ ಸೋಲ್ಕರ್, 1991/92ರಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಹಾಗೂ 1997/98 ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧ 5 ಕ್ಯಾಚ್‌​ ಪಡೆದಿದ್ದರು..

ರೋಹಿತ್ ಶರ್ಮಾ
ರೋಹಿತ್ ಶರ್ಮಾ
author img

By

Published : Jan 18, 2021, 10:48 PM IST

ಬ್ರಿಸ್ಬೇನ್ ​: ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ ವೇಳೆ ರಾಹುಲ್​ ದ್ರಾವಿಡ್​ ಮತ್ತು ಕೆ ಶ್ರೀಕಾಂತ್​ ಅವರ ದಾಖಲೆ ಸರಿಗಟ್ಟಿದ್ದಾರೆ.

ಕೊನೆಯ ಟೆಸ್ಟ್​ನ ನಾಲ್ಕನೇ ದಿನ ಆಸ್ಟ್ರೇಲಿಯದ ತಂಡದ ಬ್ಯಾಟಿಂಗ್​ ವೇಳೆ 3 ಅದ್ಭುತ ಕ್ಯಾಚ್​ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್​ನ 2 ಸೇರಿ ಒಟ್ಟಾರೆ ಈ ಪಂದ್ಯದಲ್ಲಿ 5 ಕ್ಯಾಚ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ರೋಹಿತ್‌ ಶರ್ಮಾ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ 5 ಕ್ಯಾಚ್ ಪಡೆದ ಭಾರತದ 4ನೇ ಕ್ರಿಕೆಟರ್​ ಎನಿಸಿಕೊಂಡಿದ್ದಾರೆ.

ರೋಹಿತ್ ಶರ್ಮಾಗೂ ಮೊದಲು 1969/70 ಏಕನಾಥ ಸೋಲ್ಕರ್, 1991/92ರಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಹಾಗೂ 1997/98 ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧ 5 ಕ್ಯಾಚ್‌​ ಪಡೆದಿದ್ದರು.

ಬ್ರಿಸ್ಬೇನ್‌ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ಟೀಂ ಪೇನ್​ ಮತ್ತು ಸ್ಟೀವ್ ಸ್ಮಿತ್ ಕ್ಯಾಚ್​ ಪಡೆದಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಕ್ಯಾಮರೋನ್ ಗ್ರೀನ್ ಕ್ಯಾಚ್ ಪಡೆದು ಮಿಂಚಿದ್ದರು.

ಇದನ್ನು ಓದಿ:ಫಲಿತಾಂಶ ಏನಾದ್ರೂ ಚಿಂತೆಯಿಲ್ಲ, ನಮ್ಮ ಕ್ರಿಕೆಟಿಗರ ಬಗ್ಗೆ ಹೆಮ್ಮೆ ಪಡಿ: ಸುನೀಲ್ ಗವಾಸ್ಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.