ETV Bharat / sports

ಫಿಂಚ್​ ಆಡದಿದ್ದರೆ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿ: ನೆಹ್ರಾ-ಪಠಾಣ್ ಸಲಹೆ

ಒಂದು ವೇಳೆ ಮುಂದಿನ ಪಂದ್ಯದಲ್ಲಿ ಆ್ಯರೋನ್​ ಫಿಂಚ್​ರನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡಿಸಲು ಆರ್​ಸಿಬಿ ಬಯಸದಿದ್ದರೆ ನಾಯಕ ವಿರಾಟ್​ ಸ್ವತಃ ಆರಂಭಿಕರಾಗಿ ಪಡಿಕ್ಕಲ್ ಜೊತೆ ಆಡಬಹುದು ಎಂದು ನೆಹ್ರಾ ಹೇಳಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By

Published : Nov 3, 2020, 8:18 PM IST

ಮುಂಬೈ: ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್​ರನ್ನು ಆಡಿಸುವ ಮನಸ್ಸಿಲ್ಲದಿದ್ದರೆ ಆರ್​ಸಿಬಿ ಪರ ನಾಯಕ ವಿರಾಟ್ ಕೊಹ್ಲಿ, ಪಡಿಕ್ಕಲ್​ ಜೊತೆ ಇನ್ನಿಂಗ್ಸ್ ಆರಂಭಿಸಬೇಕು ಎಂದು ಮಾಜಿ ಕ್ರಿಕೆಟಿಗರಾದ ಆಶೀಷ್ ನೆಹ್ರಾ ಹಾಗೂ ಇರ್ಫಾನ್ ಪಠಾಣ್​ ಸಲಹೆ ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಸೋಲು ಕಂಡ ನಂತರ ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ಸಂವಾದ ನಡೆಸುವ ವೇಳೆ ನೆಹ್ರಾ ಮತ್ತು ಇರ್ಫಾನ್ ಪಠಾಣ್​ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ವೇಳೆ ತುಂಬಾ ಒತ್ತಡವಿತ್ತು. ಇಂತಹ ಸಂದರ್ಭದಲ್ಲಿ ಅಕ್ಸರ್ ಪಟೇಲ್ ಅಥವಾ ಆರ್‌.ಅಶ್ವಿನ್‌ ಬೌಲಿಂಗ್​ಗೆ ಹೊಡೆಯುವುದು ಸುಲಭವಲ್ಲ. ವಿಕೆಟ್ ಕಳೆದುಕೊಳ್ಳಲು ಬಯಸದ ಕೊಹ್ಲಿಯನ್ನ ರನ್​ ಗಳಿಸದಂತೆ ಡೆಲ್ಲಿ ಬೌಲರ್​ಗಳು ನಿಯಂತ್ರಿಸಿದರು ಎಂದು ನೆಹ್ರಾ ಡೆಲ್ಲಿ ಕ್ಯಾಪಿಟಲ್ಸ್​ ಬೌಲಿಂಗ್​ ವಿಭಾಗವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಈ ಸಮಸ್ಯೆ ಬಗೆಹರಿಯಬೇಕಾದರೆ ಕೊಹ್ಲಿ ಆರಂಭಿಕರಾಗಿ ಇನ್ನಿಂಗ್ಸ್​ ಆರಂಭಿಸಬೇಕೆಂದು ಹೇಳಿದ್ದಾರೆ.

ಒಂದು ವೇಳೆ ಮುಂದಿನ ಪಂದ್ಯದಲ್ಲಿ ಆ್ಯರೋನ್​ ಫಿಂಚ್​ರನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡಿಸಲು ಆರ್​ಸಿಬಿ ಬಯಸದಿದ್ದರೆ ನಾಯಕ ವಿರಾಟ್​ ಸ್ವತಃ ಆರಂಭಿಕರಾಗಿ ಪಡಿಕ್ಕಲ್ ಜೊತೆ ಆಡಬಹುದು ಎಂದು ನೆಹ್ರಾ ಹೇಳಿದ್ದಾರೆ.

ನೆಹ್ರಾರ ಮಾತಿಗೆ ಒಪ್ಪಿಗೆ ಸೂಚಿಸಿರುವ ಇರ್ಫಾನ್ ಪಠಾಣ್​, ಆರ್​ಸಿಬಿ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಬೇಕಾದರೆ ಕೊಹ್ಲಿ ಇನ್ನಿಂಗ್ಸ್ ಆರಂಭಿಸಬೇಕು. ಆದರೆ ಇದಕ್ಕೆ ಮಧ್ಯಮ ಕ್ರಮಾಂಕದಲ್ಲಿ ಯಾರಾದರೂ ಒಬ್ಬ ಬ್ಯಾಟ್ಸ್​ಮನ್​ ಅಗತ್ಯವಿದೆ ಎಂದರು.

ತಕ್ಷಣ ಪ್ರತಿಕ್ರಿಯಿಸಿದ ನೆಹ್ರಾ ಮಧ್ಯಮ ಕ್ರಮಾಂಕದಲ್ಲಿ ಮೊಯೀನ್ ಅಲಿಗೆ ಅವಕಾಶ ನೀಡಿದರೆ ಆರ್​ಸಿಬಿ ಬ್ಯಾಟಿಂಗ್ ಲೈನ್​ಅಪ್ ಬಲಿಷ್ಠವಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.