ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಹೆಬ್ಬೆರಳು ಮುರಿತಕ್ಕೆ ಒಳಗಾಗಿದ್ದ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಹೊರಬಿದ್ದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಫೆಬ್ರವರಿ 5 ರಂದು ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಸರಣಿಯ ಮೊದಲ ಎರಡೂ ಪಂದ್ಯಗಳೂ ಇಲ್ಲೇ ನಡೆಯಲಿವೆ.
ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಜಡೇಜಾ ಕೈಬೆರಳಿಗೆ ಚೆಂಡು ಬಡಿದು ಮುರಿದಿತ್ತು. ಈ ಕಾರಣದಿಂದ ಅವರು ಗಬ್ಬಾದಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ನಿಂದ ಹೊರಬಿದ್ದಿದ್ದರು. ನಂತರ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಸರಣಿಗೆ ಪ್ರಕಟಿಸಿದ ತಂಡದಿದಲ್ಲೂ ಜಡೇಜಾ ಹೆಸರು ಇರಲಿಲ್ಲ. ಇದೀಗ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವುದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
-
Out of action for a https://t.co/ouz0ilet9j completed. But will soon return with a bang!💪🏻 pic.twitter.com/Uh3zQk7Srn
— Ravindrasinh jadeja (@imjadeja) January 12, 2021 " class="align-text-top noRightClick twitterSection" data="
">Out of action for a https://t.co/ouz0ilet9j completed. But will soon return with a bang!💪🏻 pic.twitter.com/Uh3zQk7Srn
— Ravindrasinh jadeja (@imjadeja) January 12, 2021Out of action for a https://t.co/ouz0ilet9j completed. But will soon return with a bang!💪🏻 pic.twitter.com/Uh3zQk7Srn
— Ravindrasinh jadeja (@imjadeja) January 12, 2021
ಆಲ್‌ರೌಂಡರ್ ಜಡೇಜಾ ಇಂಗ್ಲೆಂಡ್ ವಿರುದ್ಧದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗಲು 6ಕ್ಕೂ ಹೆಚ್ಚು ವಾರಗಳ ವಿಶ್ರಾಂತಿ ಅಗತ್ಯವಿದೆ. ನಂತರ ಅವರನ್ನು ಸೀಮಿತ ಓವರ್ಗಳ ಸರಣಿಗೆ ಆಯ್ಕೆ ಮಾಡಬೇಕೆ ಅಥವಾ ಬೇಡವಾ ಎಂಬುದರ ಬಗ್ಗೆ ನಂತರ ನಿರ್ಧರಿಸಲಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಜಡೇಜಾ ವಿಶ್ರಾಂತಿ ಬಲಿಕ ಬೆಂಗಳೂರಿನ ಪುನಶ್ಚೇತನ ಶಿಬಿರಕ್ಕೆ ಬರಲಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗಳಿಗೆ ಜಡೇಜಾ ಲಭ್ಯರಾಗುತ್ತಾರೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.
ಇದನ್ನೂ ಓದಿ: 13 ವಿಕೆಟ್ಗಳಲ್ಲಿ ಅತ್ಯಂತ ನೆಚ್ಚಿನ ವಿಕೆಟ್ ಯಾರು?.. ಸಿರಾಜ್ ಹೇಳಿದ್ದು ಹೀಗೆ..!