ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಯ ಸಂದರ್ಶನ ಮುಕ್ತಾಯಗೊಂಡಿದ್ದು, ತಂಡದ ನೂತನ ಕೋಚ್ ಆಗಿ ಮತ್ತೊಂದು ಅವಧಿಗೆ ಹಾಲಿ ಕೋಚ್ ರವಿಶಾಸ್ತ್ರಿ ಆಯ್ಕೆಗೊಂಡಿದ್ದಾರೆ. ಮುಂಬೈನಲ್ಲಿ ಇಂದು ನಡೆಸಲಾದ ಸಂದರ್ಶನದ ಬಳಿಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಹೊಸ ಕೋಚ್ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.
ತಂಡದ ಕೋಚ್ ಹುದ್ದೆಗಾಗಿ ಇಂದು ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸಿತ್ತು. ಈ ವೇಳೆ ಆರು ಜನ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಆದರೆ ಅಫ್ಘಾನಿಸ್ತಾನದ ಮಾಜಿ ಕೋಚ್ ಸಿಮನ್ಸ್ ರೇಸ್ನಿಂದ ಪ್ರಮುಖರಾಗಿ ಹೊರಬಿದ್ದಿದ್ದರು.
-
The CAC reappoints Mr Ravi Shastri as the Head Coach of the Indian Cricket Team. pic.twitter.com/vLqgkyj7I2
— BCCI (@BCCI) August 16, 2019 " class="align-text-top noRightClick twitterSection" data="
">The CAC reappoints Mr Ravi Shastri as the Head Coach of the Indian Cricket Team. pic.twitter.com/vLqgkyj7I2
— BCCI (@BCCI) August 16, 2019The CAC reappoints Mr Ravi Shastri as the Head Coach of the Indian Cricket Team. pic.twitter.com/vLqgkyj7I2
— BCCI (@BCCI) August 16, 2019
ಉಳಿದಂತೆ ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ಲಾಲ್‌ಚಂದ್ ರಜಪೂತ್, ಹಾಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಹಾಗೂ ಶ್ರೀಲಂಕಾ ಕೋಚ್ ಟಾಮ್ ಮೂಡಿ ನಡುವೆ ನೇರ ಸ್ಪರ್ಧೆ ಎದುರಾಗಿತ್ತು. ಆದರೆ ಫೈನಲ್ ಆಗಿ ಶಾಸ್ತ್ರಿ ಮತ್ತೊಂದು ಅವಧಿಗೆ ಆಯ್ಕೆಗೊಂಡಿದ್ದಾರೆ.
ಟೀಂ ಇಂಡಿಯಾ ತಂಡಕ್ಕೆ ಆಯ್ಕೆಗೊಂಡಿರುವ ಕೋಚ್ ಮುಂದಿನ 2021ರ ಐಸಿಸಿ ಟಿ-20 ವಿಶ್ವಕಪ್ವರೆಗೂ ಮಾತ್ರ ಟೀಂ ಇಂಡಿಯಾ ತಂಡದೊಂದಿಗೆ ಇರಲಿದ್ದು, ತದನಂತರ ಮತ್ತೊಂದು ಅವಧಿಗೆ ನೂತನ ಕೋಚ್ ಆಯ್ಕೆ ಮಾಡಲು ಬಿಸಿಸಿಐ ತೀರ್ಮಾನ ಮಾಡಿದೆ.
ಸದ್ಯ ವೆಸ್ಟ್ ಇಂಡೀಸ್‌ನಲ್ಲಿ ಟಿ-20 ಹಾಗೂ ಏಕದಿನ ಸರಣಿಗಳಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದ್ದು, ಟೆಸ್ಟ್ ಸರಣಿಗೆ ಅಣಿಯಾಗಿದೆ. ಇನ್ನು ರವಿಶಾಸ್ತ್ರಿ ಜತೆಗೆ ಮೈಕ್ ಹಸ್ಸನ್, ಫಿಲ್ ಸಿಮನ್ಸ್, ಟಾಮ್ ಮೂಡಿ, ರಾಬಿನ್ ಸಿಂಗ್, ಲಾಲ್‌ಚಂದ್ ರಜಪೂತ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ರವಿಶಾಸ್ತ್ರಿಗೆ ಹೋಲಿಸಿದಾಗ ಉಳಿದ ಅಭ್ಯರ್ಥಿಗಳು ಅಷ್ಟೊಂದು ಪ್ರಬಲ ಅಲ್ಲ ಎಂದು ಕಂಡು ಬರದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಅಂಶುಮನ್ ಗಾಯಕ್‌ವಾಡ್ ಹಾಗೂ ಶಾಂತ ರಂಗಸ್ವಾಮಿ ಭಾಗಿಯಾಗಿ ಈ ನಿರ್ಧಾರ ಕೈಗೊಂಡಿದ್ದಾರೆ.