ಹೈದರಾಬಾದ್: ಒಂದು ಕಾಲದಲ್ಲಿ ವಿನಯ್ ಕುಮಾರ್ ಕರ್ನಾಟಕ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡವರು. ನಂತರ ತಂಡದ ನಾಯಕ ಪಟ್ಟ ಅಲಂಕರಿಸಿ ಕರ್ನಾಟಕ ತಂಡವನ್ನ ರಣಜಿ ಕ್ರಿಕೆಟ್ನಲ್ಲಿ ನಂಬರ್ ಒನ್ ಪಟ್ಟಕ್ಕೆರಿಸಿದವರು ಇದೇ ವಿನಯ್ ಕುಮಾರ್.
ಕರ್ನಾಟಕ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ರಾಜ್ಯ ಕ್ರಿಕೆಟ್ ತಂಡವನ್ನು ವಿನಯ್ ಕುಮಾರ್ ತೊರೆದು ಪುದುಚೇರಿ ತಂಡವನ್ನು ಸೇರಿಕೊಂಡು ಅಲ್ಲಿಯೂ ತಮ್ಮ ಬೌಲಿಂಗ್ ಛಾಪು ಮೂಡಿಸಿದ್ದಾರೆ. ವಿನಯ್ ಕುಮಾರ್ ಕರ್ನಾಟಕ ತಂಡವನ್ನು 15 ವರ್ಷಕ್ಕೂ ಹೆಚ್ಚು ಕಾಲ ಪ್ರತಿನಿಧಿಸಿ ಬಹು ದೊಡ್ಡ ಸಾಧನೆ ಮಾಡಿದವರು.
ಪ್ರಸ್ತುತ ಪುದುಚೇರಿ ತಂಡದ ಪರ ಆಡುತ್ತಿರುವ ವಿನಯ್ ಕುಮಾರ್ ಚಂಡೀಗಢದ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ನಡೆಸಿ 6 ವಿಕೆಟ್ ಕಿತ್ತು ಮಿಂಚಿದ್ದಲ್ಲದೇ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ಬೌಲರ್ ಎಂಬ ಕಿರ್ತಿಗೆ ಪಾತ್ರರಾಗಿದ್ದಾರೆ. ಇದಲ್ಲದೇ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 26ನೇ ಬಾರಿ ಐದು ವಿಕೆಟ್ಗಳ ಸಾಧನೆ ಮಾಡಿದ ಸಾಧನೆ ಮಾಡಿದ್ದಾರೆ.
-
500 first class wickets. Thankful and grateful 🙏🙏 @BCCI @BCCIdomestic #RanjiTrophy #karnataka #pondicherry pic.twitter.com/Enw0cyTdKj
— Vinay Kumar R (@Vinay_Kumar_R) January 27, 2020 " class="align-text-top noRightClick twitterSection" data="
">500 first class wickets. Thankful and grateful 🙏🙏 @BCCI @BCCIdomestic #RanjiTrophy #karnataka #pondicherry pic.twitter.com/Enw0cyTdKj
— Vinay Kumar R (@Vinay_Kumar_R) January 27, 2020500 first class wickets. Thankful and grateful 🙏🙏 @BCCI @BCCIdomestic #RanjiTrophy #karnataka #pondicherry pic.twitter.com/Enw0cyTdKj
— Vinay Kumar R (@Vinay_Kumar_R) January 27, 2020
ಇದು ನನ್ನ ಪಾಲಿನ ಬಹುದೊಡ್ಡ ಸಾಧನೆಯಾಗಿದೆ. ಯಾವುದೇ ತಂಡದ ಪರ ನಾನು ಆಡಿದರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರುವುದು ನನಗೆ ಸಂತಸ ಇದೆ ಎಂದು ತಮ್ಮ ಖುಷಿ ಹಂಚಿಕೊಂಡಿದ್ದಾರೆ.
2004-05ರಲ್ಲಿ ಕರ್ನಾಟಕ ಪರ ರಣಜಿ ಟ್ರೋಫಿ ಕ್ರಿಕೆಟ್ಗೆ ಕಾಲಿಟ್ಟ ವಿನಯ್ ಕುಮಾರ್ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆದು ಮಿಂಚಿದರು. ಟೀಮ್ ಇಂಡಿಯಾ ಪರ ಒಂದು ಟೆಸ್ಟ್, 31 ಏಕದಿನ ಪಂದ್ಯ ಹಾಗೂ 9 ಟಿ-20 ಪಂದ್ಯಗಳನ್ನಾಡಿದ್ದರೆ. ಐಪಿಎಲ್ನಲ್ಲೂ ತಮ್ಮ ಖದರ್ ತೊರಿಸಿರುವ ವಿನಯ್ ಆರ್ಸಿಬಿ ಮತ್ತು ಕೆಕೆಆರ್ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.