ETV Bharat / sports

ಐಪಿಎಲ್ 2020: ಕನ್ನಡಿಗ ರಾಹುಲ್​ಗೆ ಆರೆಂಜ್​ ಕ್ಯಾಪ್, ರಬಾಡಗೆ ಪರ್ಪಲ್​ ಕ್ಯಾಪ್​ - ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ

ಕೆಎಲ್​ ರಾಹುಲ್ 670 ರನ್​ಗಳಿಸಿ 13ನೇ ಆವೃತ್ತಿಯ ಐಪಿಎಲ್​ನಲ್ಲಿ ಗರಿಷ್ಠ ರನ್​ ಸರದಾರರಾಗಿದ್ದರೆ, ಡೆಲ್ಲಿ ತಂಡದ ವೇಗಿ ಕಗಿಸೋ ರಬಡಾ ಹೆಚ್ಚು ವಿಕೆಟ್​ ಪಡೆದಿದ್ದಾರೆ.

ಕನ್ನಡಿಗ ರಾಹುಲ್​ಗೆ ಆರೆಂಜ್​ ಕ್ಯಾಪ್, ರಬಾಡಗೆ ಪರ್ಪಲ್​ ಕ್ಯಾಪ್​

author img

By

Published : Nov 10, 2020, 11:24 PM IST

ದುಬೈ: ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ 670 ರನ್​ಗಳ ನೆರವಿನಿಂದ ಆರೆಂಜ್​ ಕ್ಯಾಪ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.

ಪೈನಲ್ ಪಂದ್ಯಕ್ಕೂ ಮುನ್ನ 603 ರನ್​ಗಳಿಸಿದ್ದ ಧವನ್​ ಮಂಗಳವಾರ ನಡೆದ ಮುಂಬೈ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 15 ರನ್​ಗಳಿಸಿ ಔಟಾಗುವ ಮೂಲಕ 618 ರನ್​ಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 3ನೇ ಸ್ಥಾನದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಡೇವಿಡ್ ವಾರ್ನರ್(548), ಮುಂಬೈ ಇಂಡಿಯನ್ಸ್ ತಂಡದ ಡಿಕಾಕ್​ ​5ನೇ ಸ್ಥಾನದಲ್ಲಿದ್ದಾರೆ.

ಇನ್ನು ಬೌಲಿಂಗ್​ ವಿಭಾಗದಲ್ಲಿ ಕಗಿಸೋ ರಬಾಡ 30 ವಿಕೆಟ್ ಪಡೆದು ಪರ್ಪಲ್​ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿದ್ದ ಜಸ್ಪ್ರೀತ್ ಬುಮ್ರಾ(27) ಇಂದಿನ ಪಂದ್ಯದಲ್ಲಿ ವಿಕೆಟ್​ ಪಡೆಯದ ಕಾರಣ ರಬಾಡಗೆ ಮೊದಲ ಸ್ಥಾನ ಖಚಿತವಾಗಿದೆ. ಮೂರನೇ ಸ್ಥಾನದಲ್ಲಿ ಟ್ರೆಂಟ್ ಬೌಲ್ಟ್ (25), 4ರಲ್ಲಿ ಚಹಾಲ್ ಮತ್ತು ಎನ್ರಿಚ್ ನೋಕಿಯೆ (21) ಹಾಗೂ 5ನೇ ಸ್ಥಾನದಲ್ಲಿ 20 ವಿಕೆಟ್ ಪಡೆದಿರುವ ರಶೀದ್, ಆರ್ಚರ್​, ಶಮಿ 5ನೇ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.