ನವದೆಹಲಿ: ಭಾರತ ತಂಡದ ಬ್ಯಾಟಿಂಗ್ ಮಾಂತ್ರಿಕ ಅಜಿಂಕ್ಯಾ ರಹಾನೆ ಶಾಂತತೆ ಮತ್ತು ಸಂಯೋಜನೆಯುಳ್ಳ ಆಟಗಾರ ಎಂಬ ಮಾತ್ರಕ್ಕೆ ಆತ ದುರ್ಬಲ ಎಂದು ತಪ್ಪು ತಿಳಿದುಕೊಳ್ಳಬೇಕಾಗಿಲ್ಲ. ಅವರು ಕೊಹ್ಲಿಯಷ್ಟೇ ಆಕ್ರಮಣಕಾರಿ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ನಂತರ ತವರಿಗೆ ಮರಳಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಮುಂಬೈ ಬ್ಯಾಟ್ಸ್ಮನ್ ರಹಾನೆ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಡಿಸೆಂಬರ್ 26ರಂದು ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ರಹಾನೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
32 ವರ್ಷದ ರಹಾನೆ ಈ ಹಿಂದೆ ಭಾರತ ತಂಡವನ್ನು ಎರಡು ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಆ ಎರಡೂ ಪಂದ್ಯಗಳಲ್ಲೂ ಭಾರತ ತಂಡ ಜಯ ಸಾಧಿಸಿದೆ. 2017ರಲ್ಲಿ ಆಸ್ಟೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ಮತ್ತು 2019ರಲ್ಲಿ ಅಫ್ಘಾನಿಸ್ತಾನದ ವಿರುದ್ಧ ರಹಾನೆ ಭಾರತ ತಂಡದ ನೇತೃತ್ವ ವಹಿಸಿಕೊಂಡಿದ್ದರು.
![ಅಜಿಂಕ್ಯಾ ರಹಾನೆ](https://etvbharatimages.akamaized.net/etvbharat/prod-images/910662-693775-ajinkya-rahane-pti_2412newsroom_1608799732_781.jpg)
" ಅಜಿಂಕ್ಯ ರಹಾನೆ ಈ ಮೊದಲೇ ಭಾರತವನ್ನು ಮುನ್ನಡೆಸಿದ್ದಾರೆ. ಮತ್ತು ಅವರು ಶಾಂತತೆಯಿಂದ ಕಾಣುತ್ತಾರೆ ನಿಜ. ಆದರ ಇದರರ್ಥ ಅವರು ಆಕ್ರಮಣಕಾರಿಯಲ್ಲ ಎಂದು ಭಾವಿಸುವುದು ತಪ್ಪು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆಕ್ರಮಣಶೀಲತೆ ತೋರಿಸುವ ವಿಧಾನ ಇರುತ್ತದೆ. ಉದಾಹರಣೆಗೆ ಪೂಜಾರಾ, ಅವರು ತುಂಬಾ ಶಾಂತ ಮತ್ತು ಸಂಯೋಜನೆ ಸ್ವಭಾವದವರಾಗಿರುತ್ತಾರೆ. ಅವರ ದೇಹ ಭಾಷೆ ಕೇಂದ್ರೀಕೃತವಾಗಿದೆ. ಆದರೆ ಪೂಜಾರ ಬೇರೆಯವರಿಗಿಂತ ಕಡಿಮೆ ಎಫರ್ಟ್ ಹಾಕುತ್ತಾರೆ ಎಂದು ಅರ್ಥವಲ್ಲ" ಎಂದು ಸಚಿನ್ ನ್ಯೂಸ್ ಏಜನ್ಸಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಹಾನೆ ತಂತ್ರಗಾರಿಕೆ ವಿರಾಟ್ ಕೊಹ್ಲಿಗಿಂತ ತುಂಬಾ ಭಿನ್ನವಾಗಿರುತ್ತದೆ. ಆದರೆ, ಅವರ ಮತ್ತು ತಂಡದ ಗುರಿ ಮಾತ್ರ ಒಂದೇ ಆಗಿರುತ್ತದೆ ಎಂದು 47 ವರ್ಷದ ಸಚಿನ್ ಹೇಳಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಕ್ರಿಯೆ ನೀಡುವುದರಲ್ಲಿ ವಿಭಿನ್ನತೆ ಹೊಂದಿರುತ್ತಾರೆ. ಆದರೆ, ಎಲ್ಲರ ಗಮ್ಯಸ್ಥಾನ ಒಂದೇ ಎಂದು ನಾನು ಭರವಸೆ ನೀಡಬಲ್ಲೆ. ಅವರಿಬ್ಬರು(ಕೊಹ್ಲಿ-ರಹಾನೆ) ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ವಿಭಿನ್ನ ದಾರಿಯನ್ನು ಹೊಂದಿದ್ದಾರೆ. ಹಾಗಾಗಿ, ಅಜಿಂಕ್ಯ ವಿಭಿನ್ನ ಶೈಲಿ ಮತ್ತು ತಂತ್ರಗಾರಿಕೆಯನ್ನು ಹೊಂದಿದ್ದಾರೆ. ಹಾಗಾಗಿ ಪಿಚ್ ಹೇಗೆ ವರ್ತಿಸುತ್ತದೆ, ಹೇಗೆ ಪ್ಲಾನ್ ಮಾಡಬೇಕು ಮತ್ತು ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ ಅಪ್ ಹೇಗಿರಬೇಕು ತಂಡದ ಆಡಳಿತ ಮಂಡಳಿ ಅವರ ಜೊತೆ ಕೆಲಸ ಮಾಡಲಿದ್ದಾರೆ ಎಂದು ಸಚಿನ್ ತಿಳಿಸಿದ್ದಾರೆ.