ನವದೆಹಲಿ: ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಅಜರ್ ಅಲಿ ಕೊರೊನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವು ನೀಡಲು ಹರಾಜಿಗಿಟ್ಟಿದ್ದ ಬ್ಯಾಟ್ ಹಾಗೂ ಜರ್ಸಿ 22 ಲಕ್ಷ ರೂ ಸಂಗ್ರಹಿಸಿದೆ.
2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಡೇ ಆ್ಯಂಡ್ ನೈಟ್ ಟೆಸ್ಟ್‌ನಲ್ಲಿ ಅಜರ್ ಅಲಿ ತ್ರಿಶತಕ (301) ಬಾರಿಸಿದ್ದರು. ಇದು ಹಗಲು ರಾತ್ರಿ ಟೆಸ್ಟ್ಪಂದ್ಯವೊದರಲ್ಲಿ ದಾಖಲಾಗಿದ್ದ ಮೊದಲ ತ್ರಿಶತಕದ ದಾಖಲೆಯಾಗಿತ್ತು. ಈ ಬ್ಯಾಟ್ ಜೊತೆಗೆ 2017ರ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಫೈನಲ್‌ನಲ್ಲಿ ಅವರು ಧರಿಸಿದ್ದ ಜೆರ್ಸಿಯನ್ನು ಪಾಕ್ ತಂಡ ಆನ್ಲೈನ್ನಲ್ಲಿ ಹರಾಜಿಗಿಟ್ಟಿತ್ತು. ಇವರೆಡರ ಮೂಲಬೆಲೆ 10 ಲಕ್ಷ ಪಾಕಿಸ್ತಾನ ರೂಪಾಯಿ ಎಂದು ತಿಳಿಸಿದ್ದರು.
ಅಜರ್ ಅಲಿಯ ಒಳ್ಳೆಯ ಉದ್ದೇಶಕ್ಕಾಗಿ ನ್ಯೂಜೆರ್ಸಿಯಲ್ಲಿರುವ ಪಾಕಿಸ್ತಾನ ಮೂಲದ ಜಮಲ್ ಖಾನ್ ಒಂದು ಲಕ್ಷ ರೂ ದೇಣಿಗೆ ನೀಡಿದ್ದಾರೆ. ಈಗಾಗಲೇ ಭಾರತ ತಂಡದ ಕೆ.ಎಲ್. ರಾಹುಲ್, ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಕೂಡಾ ವಿಶ್ವಕಪ್ನಲ್ಲಿ ತಾನು ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿದ್ದರು.