ನವದೆಹಲಿ: ಉದ್ದೀಪನ ಮದ್ದು ಸೇವನೆ ಆರೋಪದಡಿ 8 ತಿಂಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅಮಾನತುಗೊಂಡಿರುವ ಉದಯೋನ್ಮುಖ ಬ್ಯಾಟ್ಸ್ಮನ್ ಪೃಥ್ವಿ ಶಾ ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಪೃಥ್ವಿ ಶಾ ಟ್ವೀಟ್ ಸಾರಾಂಶ:
ಮುಂದಿನ 8 ತಿಂಗಳ ಕಾಲ ಅಂದರೆ ನವೆಂಬರ್ವರೆಗೂ ನಾನು ಕ್ರಿಕೆಟ್ ಆಡದಂತೆ ಬಿಸಿಸಿಐ ನಿಷೇಧ ಹೇರಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ನನ್ನ ಶರೀರದಲ್ಲಿ ನಿಷೇಧಿತ ದ್ರವ್ಯ ಕಂಡು ಬಂದಿದೆ. 2019ರ ಫೆಬ್ರವರಿ ತಿಂಗಳಲ್ಲಿ ಮುಂಬೈ ತಂಡದೊಂದಿಗೆ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಿದ್ದ ವೇಳೆ ಕೆಮ್ಮು-ನೆಗಡಿ ಇದ್ದ ಕಾರಣ ಔಷಧ ತೆಗೆದುಕೊಂಡಿದ್ದೆ. ಆದರೆ ಇದು ನಿಷೇಧಿತ ವಸ್ತುಗಳು ಎಂಬ ತಿಳಿವಳಿಕೆ ನನಗಿರಲಿಲ್ಲ ಎಂದು ಶಾ ಹೇಳಿದ್ದು, ಆಸ್ಟ್ರೇಲಿಯಾ ಟೂರ್ನಿಂದ ಹೊರಬಂದ ಬಳಿಕ ನಾನು ನೋವಿನಿಂದ ಬಳಲುತ್ತಿದ್ದು, ಇಲ್ಲಿಯರೆಗೂ ಗುಣಮುಖಗೊಂಡಿಲ್ಲ.
- — Prithvi Shaw (@PrithviShaw) July 30, 2019 " class="align-text-top noRightClick twitterSection" data="
— Prithvi Shaw (@PrithviShaw) July 30, 2019
">— Prithvi Shaw (@PrithviShaw) July 30, 2019
ನಾನು ಮಾಡಿರುವುದನ್ನು ಒಪ್ಪಿಕೊಳ್ಳುವೆ. ಇದೇ ನನ್ನ ಶಕ್ತಿ ಎಂದು ಪರಿಗಣಿಸಿ ಮುಂದಿನ ದಿನಗಳಲ್ಲಿ ಎದ್ದು ನಿಲ್ಲುವೆ ಎಂದಿರುವ ಶಾ, ಅಥ್ಲೀಟ್ಗಳು ಔಷಧಿ ತೆಗೆದುಕೊಳ್ಳುವಾಗ ಬಹಳ ಎಚ್ಚರದಿಂದ ಇರಬೇಕು ಎಂದಿದ್ದಾರೆ. ಬಿಸಿಸಿಐ, ಕ್ರಿಕೆಟ್ ಸಿಬ್ಬಂದಿಗೆ ಧನ್ಯವಾದ ತಿಳಿಸಿರುವ ಶಾ, ಕ್ರಿಕೆಟ್ ನನ್ನ ಜೀವನ, ಟೀಂ ಇಂಡಿಯಾ ಪರ ಆಡುವುದಕ್ಕಿಂತಲೂ ಯಾವುದೂ ದೊಡ್ಡದಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿ ಮರಳುವೆ ಎಂದಿದ್ದಾರೆ.
ಪೃಥ್ವಿ ಶಾ ಜತೆಗೆ ರಾಜಸ್ಥಾನ ತಂಡದ ದಿವ್ಯ ಗಜರಾಜ್ ಮತ್ತು ವಿದರ್ಭ ತಂಡದ ಅಕ್ಷಯ್ ದುಲ್ಲಾವರ್ ಕೂಡ ಡೋಪಿಂಗ್ ನಿಯಮ ಉಲ್ಲಂಘಿಸಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.