ಗಯಾನ: ಭಾರತ- ವೆಸ್ಟ್ ಇಂಡೀಸ್ ನಡುವಿನ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 146 ರನ್ಗಳಿಸಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ಕೊಹ್ಲಿ ವಿಂಡೀಸ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನವಿತ್ತರು. ವಿಂಡೀಸ್ ಪರ ಬ್ಯಾಟಿಂಗ್ ಇಳಿದ ನರೈನ್(2), ಲೆವಿಸ್(10) ಹಾಗೂ ಶಿಮ್ರಾನ್ ಹೆಟ್ಮೈರ್ರನ್ನು ದೀಪಕ್ ಚಹಾರ್ ಪವರ್ ಪ್ಲೇ ಒಳಗೆ ಪೆವಿಲಿಯನ್ ಸೇರಿಸಿದರು.
-
That's the end of the West Indies innings – they finish on 146/6.
— ICC (@ICC) August 6, 2019 " class="align-text-top noRightClick twitterSection" data="
Kieron Pollard top-scored with 58 and for India, Deepak Chahar was exceptional, returning figures of 3/4 from three overs!#WIvIND LIVE 👇https://t.co/BLwOeTRm5h pic.twitter.com/7cOtbywqzN
">That's the end of the West Indies innings – they finish on 146/6.
— ICC (@ICC) August 6, 2019
Kieron Pollard top-scored with 58 and for India, Deepak Chahar was exceptional, returning figures of 3/4 from three overs!#WIvIND LIVE 👇https://t.co/BLwOeTRm5h pic.twitter.com/7cOtbywqzNThat's the end of the West Indies innings – they finish on 146/6.
— ICC (@ICC) August 6, 2019
Kieron Pollard top-scored with 58 and for India, Deepak Chahar was exceptional, returning figures of 3/4 from three overs!#WIvIND LIVE 👇https://t.co/BLwOeTRm5h pic.twitter.com/7cOtbywqzN
ಈ ಹಂತದಲ್ಲಿ ಜೊತೆಯಾದ ಪೊಲಾರ್ಡ್ ಹಾಗೂ ಪೂರನ್ 66 ರನ್ ಜೊತೆಯಾಟ ನೀಡಿದರು. 17 ರನ್ಗಳಿಸಿದ್ದ ಪೂರನ್ ಹಾಗೂ 58 ರನ್ಗಳಿಸಿದ್ದ ಕೀರನ್ ಪೊಲಾರ್ಡ್ ಸೈನಿಗೆ ವಿಕೆಟ್ ಒಪ್ಪಿಸಿದ್ದರು. ಪೊಲಾರ್ಡ್ 45 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದರು. ಇವರಿಬ್ಬರ ನಂತರ ಅಬ್ಬರಿಸಿದ ಪೊವೆಲ್20 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 32 ರನ್ಗಳಿಸಿ ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದ ತಂಡವನ್ನು ಸ್ಪರ್ಧಾತ್ಮಕ ಮೊತ್ತ ದಾಖಲಿಸುವಂತೆ ಮಾಡಿದರು. ಬ್ರಾತ್ವೇಟ್ 10, ಅಲೆನ್ 8 ರನ್ಗಳಸಿದರು.
ಸರಣಿಯಲ್ಲಿ ಮೊದಲ ಪಂದ್ಯವಾಡಿದ ದೀಪಕ್ ಚಹಾರ್ 4 ರನ್ ನೀಡಿ 3 ವಿಕೆಟ್ ಪಡೆದರು. ಸೈನಿ 2 ವಿಕೆಟ್ ಹಾಗೂ ಇಂದೇ ಪದಾರ್ಪಣೆ ಮಾಡಿದ ರಾಹುಲ್ ಚಹಾರ್ ಒಂದು ವಿಕೆಟ್ ಪಡೆದರು.