ರಾಜ್ಕೋಟ್: ಬಾಂಗ್ಲಾ ವಿರುದ್ಧ ರಾಜ್ಕೋಟ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲೂ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಯಡವಟ್ಟುಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅವರ ಪರವಾಗಿ ರೋಹಿತ್ ಶರ್ಮಾ ಬ್ಯಾಟ್ ಬೀಸಿದ್ದಾರೆ.
ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಬೌಲಿಂಗ್ ಮಾಡುತ್ತಿದ್ದ ವೇಳೆ ಚೆಂಡು ಸ್ಟಂಪ್ ದಾಟೋದಕ್ಕೂ ಮುನ್ನ ಸ್ಟಂಪ್ ಔಟ್ ಮಾಡುವ ಮೂಲಕ ಪಂತ್ ಆತುರ ತೋರಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅನೇಕರು ಟೀಕಾಪ್ರಹಾರವನ್ನೇ ನಡೆಸಿದ್ದರು.
ಚೆಂಡು ಸ್ಟಂಪ್ ದಾಟೋದಕ್ಕೂ ಮುನ್ನ ರಿಷಭ್ ಪಂತ್ ಆತುರ! ಯಡವಟ್ಟಿಗೆ ಕ್ಯಾಪ್ಟನ್ ಬೇಸರ! ವಿಡಿಯೋ
ಈ ಬಗ್ಗೆ ಮಾತನಾಡಿರುವ ರೋಹಿತ್, ದಯವಿಟ್ಟು ಪಂತ್ ಅವರನ್ನು ಏಕಾಂಗಿಯಾಗಿ ಬಿಟ್ಟುಬಿಡಿ. ನನಗೆ ಅನ್ನಿಸಿರುವ ಪ್ರಕಾರ ನೀವೆಲ್ಲರೂ ಅವನ ಬಗ್ಗೆ ಚಿಂತೆ ಮಾಡುವ ಬದಲು ಸುಮ್ಮನಿರುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿರುವ ರಿಷಭ್ ಪಂತ್ ಮೈದಾನದಲ್ಲಿ ತಪ್ಪುಗಳನ್ನು ಎಸಗುತ್ತಿದ್ದಾರೆ. ಇದು ತಂಡಕ್ಕೆ ತಲೆನೋವಾಗಿರೋದು ನಿಜ. ಆದರೆ ಆತ ಓರ್ವ ಪರಿಪೂರ್ಣ ವಿಕೆಟ್ ಕೀಪರ್ ಆಗಿ ನಿರ್ಮಾಣಗೊಳ್ಳಬೇಕಾದರೆ ಅವರಿಗೆ ಹೆಚ್ಚಿನ ಸಮಯವಕಾಶದ ಅವಶ್ಯಕತೆ ಇದೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.