ಮೆಲ್ಬೋರ್ನ್: ಅಡಿಲೇಡ್ ಓವಲ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್, ಟೆಸ್ಟ್ ಪಂದ್ಯಕ್ಕೆ ಪಿಂಕ್ ಬಾಲ್ಗಿಂತ ರೆಡ್ ಬಾಲ್ ಉತ್ತಮ. ಅದು ಬ್ಯಾಟ್ ಮತ್ತು ಚೆಂಡಿನ ನಡುವೆ ಉತ್ತಮ ಸ್ಪರ್ಧೆ ಸೃಷ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸಮನಾದ ಸ್ಪರ್ಧೆ ಹೊಂದಿದ್ದವು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಚುರುಕಿನ ದಾಳಿ ನಡೆಸಿದ ಆತಿಥೇಯರು ಭಾರತವನ್ನು 36 ರನ್ಗಳಿಗೆ ಕಟ್ಟಿಹಾಕಿ ಗೆಲುವಿನ ಕೇಕೆ ಹಾಕಿದರು.
ಅಡಿಲೇಡ್ ಪಂದ್ಯದ ನಂತರ ಮಾತನಾಡಿದ್ದ ಮಾಜಿ ಸ್ಪಿನ್ನರ್ ಶೇನ್ ವಾರ್ನ್, ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ ಗುಲಾಬಿ ಚೆಂಡನ್ನು ಬಳಸಬೇಕೆಂದು ಹೇಳಿದ್ದರು. ಕೆಂಪು ಚೆಂಡು ಏನನ್ನೂ ಮಾಡುವುದಿಲ್ಲ ಮತ್ತು 25 ಓವರ್‌ಗಳ ನಂತರ ಮೃದುವಾಗಿರುತ್ತದೆ ಎಂದಿದ್ದರು.
ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಕಮಿನ್ಸ್, ಒಂದು ವರ್ಷದಲ್ಲಿ ಗುಲಾಬ ಚೆಂಡಿನೊಂದಿಗೆ ಒಂದು ಅಥವಾ ಎರಡು ಪಂದ್ಯಗಳು ಉತ್ತಮ. ಆದರೆ, ಎಲ್ಲಾ ಟೆಸ್ಟ್ ಪಂದ್ಯಗಳನ್ನು ಗುಲಾಬಿ ಚೆಂಡಿನೊಂದಿಗೆ ಆಡುವ ಆಲೋಚನೆಯನ್ನು ಒಪ್ಪಿಲ್ಲ.
ಓದಿ: ಆಸೀಸ್ ಲೆಜೆಂಡ್ಗಳು ರಹಾನೆ ನಾಯಕತ್ವ ಹೊಗಳುತ್ತಿರುವುದು ಹೃದಯಸ್ಪರ್ಶಿಯಾಗಿತ್ತು: ಗಾವಸ್ಕರ್
"ನಾನು ಇನ್ನೂ ಕೆಂಪು ಚೆಂಡಿನೊಂದಿಗೆ ಟೆಸ್ಟ್ ಕ್ರಿಕೆಟ್ ಆಡುವುದನ್ನು ಪ್ರೀತಿಸುತ್ತೇನೆ. ಒಂದು ವರ್ಷದಲ್ಲಿ ಒಂದು ಅಥವಾ ಎರಡು ಟೆಸ್ಟ್‌ಗಳಂತೆ ಗುಲಾಬಿ ಚೆಂಡಿನಲ್ಲಿ ಆಟವಾಡುವುದು ಉತ್ತಮ. ಆದರೆ ರೆಡ್ ಬಾಲ್ ಟೆಸ್ಟ್ ಉತ್ತಮ. ಇದು ಬ್ಯಾಟ್ ಮತ್ತು ಚೆಂಡಿನ ನಡುವೆ ಉತ್ತಮ ಸ್ಪರ್ಧೆ ಸೃಷ್ಟಿಸುತ್ತದೆ. ನಾವು ಕೆಲವು ಉತ್ತಮ ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನು ಹೊಂದಿದ್ದೇವೆ. ಆದರೆ ಕೆಂಪು ಚೆಂಡಿನೊಂದಿಗೆ ನೀವು ಇನ್ನೂ ಉತ್ತಮ ಸ್ಪರ್ಧೆಯನ್ನು ಹೊಂದಿರುತ್ತೀರಿ" ಅವರು ಹೇಳುತ್ತಾರೆ.
ಆಸ್ಟ್ರೇಲಿಯಾ-ಭಾರತ ನಡುವಿನ 3ನೇ ಟೆಸ್ಟ್ ಪಂದ್ಯ ನಿಗದಿಯಂತೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ದೃಢಪಡಿಸಿದೆ.
ಮೂರನೇ ಟೆಸ್ಟ್ ಪಂದ್ಯಕ್ಕೆ ಉತ್ಸುಕರಾಗಿರುವ ಕಮಿನ್ಸ್, ಸ್ಪಿನ್ನರ್ ನಾಥನ್ ಲಯಾನ್ ವಿಕೆಟ್‌ನ ನಿಧಾನಗತಿಯ ಲಾಭ ಪಡೆಯುತ್ತಾರೆ ಎಂದಿದ್ದಾರೆ.