ಕರಾಚಿ: ಹಿರಿಯ ಆಟಗಾರರು ಕೇವಲ ಸುತ್ತಾಟದಲ್ಲಿ ಮಾತ್ರ ಆಸಕ್ತಿ ಹೊಂದಿಲ್ಲ. ತಂಡದ ಭವಿಷ್ಯದ ಯೋಜನೆಗಳಿಗೆ ಸಿದ್ಧರಿದ್ದಾರೆಯೇ ಎಂಬುದನ್ನ ಅರಿಯಲು ಪಿಸಿಬಿ ಪರಿಣಾಮಕಾರಿ ಸಂವಹನ ನಡೆಸಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ಮುಹಮ್ಮದ್ ಹಫೀಜ್ ಹೇಳಿದ್ದಾರೆ.
ಹಿರಿಯ ಆಟಗಾರರೊಂದಿಗಿನ ಸಂವಹನದ ಅಂತರವನ್ನು ಪಿಸಿಬಿ ಸರಿಪಡಿಸಬೇಕು. ಆಟಗಾರರೊಂದಿಗೆ ಉತ್ತಮ ಸಂವಹನ ಬಾಂಧವ್ಯವನ್ನಿಟ್ಟುಕೊಳ್ಳಬೇಕು. ಇದರಿಂದ ತಮ್ಮ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದರು.
ಭಾನುವಾರ ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 67 ರನ್ ಗಳಿಸಿದ ಹಫೀಜ್ ಮಾತನಾಡಿ, ವಿಶ್ವಕಪ್ ಪಂದ್ಯದಿಂದ ಹೊರಗುಳಿದ ನಂತರ ಪಾಕಿಸ್ತಾನ ತಂಡವನ್ನು ಸೇರಿಕೊಂಡಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು. ತಂಡಕ್ಕೆ ಇನ್ನೂ ಹೆಚ್ಚಿನ ಮೌಲ್ಯ ತಂದುಕೊಡುವುದರ ಜೊತೆಗೆ ವಿಶ್ವಾಸ ಹೆಚ್ಚಿಸಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮತ್ತೋರ್ವ ಮಾಜಿ ನಾಯಕ ಮತ್ತು ಹಿರಿಯ ಆಟಗಾರ ಶೋಯೆಬ್ ಮಲಿಕ್ ಅವರನ್ನು ವಿಶ್ವಕಪ್ ಪಂದ್ಯದ ಬಳಿಕ ಇದೀಗ ಬಾಂಗ್ಲಾದೇಶ ಸರಣಿಗೆ ಕರೆಸಿಕೊಳ್ಳಲಾಯಿತು. ಲಾಹೋರ್‌ನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಮಲಿಕ್ ಅರ್ಧಶತಕ ಬಾರಿಸಿ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟರು. ನಾನು ಪಾಕಿಸ್ತಾನ ತಂಡಕ್ಕೆ ಬ್ಯಾಟ್ಸ್‌ಮನ್ ಮತ್ತು ಬೌಲರ್ ಆಗಿ ಕೊಡುಗೆ ನೀಡಲು ಬಯಸುತ್ತೇನೆ. ನನ್ನ ಆಟದಲ್ಲಿ ಯಾವುದೇ ಕುಂದು ಕೊರತೆಗಳಿಲ್ಲದಿರುವುದರಿಂದ ಪರೀಕ್ಷೆಯನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಬುಧವಾರ ಎಲ್‌ಯುಎಂ ವಿಶ್ವವಿದ್ಯಾಲಯದ ಬಯೋಮೆಕಾನಿಕ್ ಲ್ಯಾಬ್‌ನಲ್ಲಿ ಬೌಲಿಂಗ್ ಮೌಲ್ಯಮಾಪನ ಪರೀಕ್ಷೆಗೆ ಮುಹಮ್ಮದ್ ಹಫೀಜ್ ಹಾಜರಾಗಲಿದ್ದಾರೆ. ಕಳೆದ ವರ್ಷ ಯುಕೆ ಟಿ-20 ಯಲ್ಲಿ ಆಡುವಾಗ ಹಫೀಜ್ ತಮ್ಮ ಬೌಲಿಂಗ್ ಪ್ರಕ್ರಿಯೆಯಲ್ಲಿ ತಪ್ಪು ಮಾಡಿ ಆಟ ಆಡುವುದನ್ನು ನಿಲ್ಲಿಸಲಾಗಿತ್ತು. ಸದ್ಯ ಮತ್ತೆ ಆಟ ಆಡುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ.