ETV Bharat / sports

ಆತ ಭವಿಷ್ಯದಲ್ಲಿ ಯುವರಾಜ್​-ಸೆಹ್ವಾಗ್​ರಂತೆ ಬ್ಯಾಟಿಂಗ್​ ನಡೆಸಿಲಿದ್ದಾನೆ: ಸುರೇಶ್​ ರೈನಾ

ಯಜುವೇಂದ್ರ ಚಹಾಲ್​ ಜೊತೆ ಇನ್ಸ್ಟಾಗ್ರಾಮ್​ ಲೈವ್​ನಲ್ಲಿ ಕಾಣಿಸಿಕೊಂಡ ರೈನಾ, "ರಿಷಭ್ ಪಂತ್ ಓರ್ವ ಅತ್ಯುತ್ತಮ ಆಟಗಾರ, ಆತ ಖಂಡಿತ ಯುವರಾಜ್ ಸಿಂಗ್ ಮತ್ತು ಸೆಹ್ವಾಗ್ ಅವರನ್ನು ನೆನಪಿಸಿತ್ತಾನೆ, ಮತ್ತು ಆತನ ಫ್ಲಿಕ್ ಶಾಟ್ ದ್ರಾವಿಡ್‌ರನ್ನು ನೆನಪಿಸುತ್ತದೆ" ಎಂದು ಯುವ ವಿಕೆಟ್​ ಕೀಪರ್​ ಬೆಂಬಲಕ್ಕೆ ನಿಂತಿದ್ದಾರೆ.

ಸುರೇಶ್​ ರೈನಾ
ಸುರೇಶ್​ ರೈನಾ
author img

By

Published : Apr 28, 2020, 3:19 PM IST

ಮುಂಬೈ: ರಿಷಭ್​ ಪಂತ್​ ಒಬ್ಬರ ಪ್ರತಿಭಾನ್ವಿತ ಆಟಗಾರ, ಆತ ಭಾರತ ತಂಡದ ಲೆಜೆಂಡ್​ಗಳಾದ ಯುವರಾಜ್​ ಹಾಗೂ ವಿರೇಂದ್ರ ಸೆಹ್ವಾಗ್​ ರೀತಿಯಲ್ಲಿ ಸ್ಫೋಟಕ ಆಟ ಆಡುವ ಸಾಮರ್ಥ್ಯವಿದೆ ಎಂದು ಪವರ್​ ಹಿಟ್ಟರ್​ ಖ್ಯಾತಿಯ ಸುರೇಶ್​ ರೈನಾ ಯುವ ವಿಕೆಟ್​ ಕೀಪರ್ ಬೆಂಬಲಕ್ಕೆ ನಿಂತಿದ್ದಾರೆ.

ಯಜುವೇಂದ್ರ ಚಹಾಲ್​ ಜೊತೆ ಇನ್ಸ್ಟಾಗ್ರಾಮ್​ ಲೈವ್​ನಲ್ಲಿ ಕಾಣಿಸಿಕೊಂಡ ರೈನಾ, "ರಿಷಭ್ ಪಂತ್ ಓರ್ವ ಅತ್ಯುತ್ತಮ ಆಟಗಾರ, ಆತ ಖಂಡಿತ ಯುವರಾಜ್ ಸಿಂಗ್ ಮತ್ತು ಸೆಹ್ವಾಗ್ ಅವರನ್ನು ನೆನಪಿಸಿತ್ತಾನೆ, ಮತ್ತು ಆತನ ಫ್ಲಿಕ್ ಶಾಟ್ ದ್ರಾವಿಡ್‌ರನ್ನು ನೆನಪಿಸುತ್ತದೆ" ಎಂದು ಯುವ ವಿಕೆಟ್​ ಕೀಪರ್​ ಬೆಂಬಲಕ್ಕೆ ನಿಂತಿದ್ದಾರೆ.

ರಿಷಭ್ ಪಂತ್​
ರಿಷಭ್ ಪಂತ್​

ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಪಂತ್​, ಸಾಕಷ್ಟು ಅವಕಾಶಗಳು ಸಿಕ್ಕರೂ ತಮ್ಮ ಸಾಮರ್ಥ್ಯ ಸಾಭೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಈ ಮಧ್ಯೆ ಕಳೆದ ಆಸ್ಟ್ರೇಲಿಯಾ ಮತ್ತು ಕಿವೀಸ್​ ಸರಣಿಯ ವೇಳೆ ಕೆಎಲ್​ ರಾಹುಲ್​ ವಿಕೆಟ್​ ಕೀಪಿಂಗ್​ ಜೊತೆಗೆ ಬ್ಯಾಟಿಂಗ್​ನಲ್ಲಿ ಮಿಂಚಿದ್ದರು. ಇದರಿಂದ ಪಂತ್​ ಬೆಂಚ್​ ಕಾಯುವಂತಾಗಿತ್ತು.

ಇನ್ನು ಸುರೇಶ್ ರೈನಾ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಓರ್ವ ಬಲಿಷ್ಠ ನಾಯಕ, ತಂಡವನ್ನು ಮುನ್ನಡೆಸುವುದಲ್ಲದೆ ಗೇಮ್​ ಚೇಂಜರ್​ ಆಗಿಯೂ ಮೈದಾನದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರಲ್ಲಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವ ಶಕ್ತಿಯಿದೆ ಎಂದು ಕೊಹ್ಲಿ ನಾಯಕತ್ವನ್ನು ಹೊಗಳಿದ್ದಾರೆ.

ಇನ್ನು ಇದಕ್ಕೂ ಮೊದಲು ಪಂತ್​ ಕುರಿತು ಮಾತನಾಡಿದ್ದ ರೋಹಿತ್​ ಶರ್ಮಾ ಕೂಡ "ಪಂತ್​ ತಮ್ಮ ಈಗಷ್ಟೆ ಕರಿಯರ್​ ಆರಂಭಿಸಿದ್ದಾರೆ. ಆತನಿಗೆ 20-21 ವಯಸ್ಸು. ಆತನ ವೈಫಲ್ಯ ಒತ್ತಡಕ್ಕೀಡಾಗುತ್ತಿದ್ದಾನೆ. ಪಂತ್​ ವೈಫಲ್ಯವನ್ನು ಮಾಧ್ಯಮಗಳು ಕೂಡ ಪಂತ್ ವೈಫಲ್ಯವನ್ನು ಎತ್ತಿ ಹಿಡಿಯುತ್ತಿವೆ. ಇದು ಅವರ ಕರ್ತವ್ಯವಾಗಿರಬಹುದು, ಆದರೆ ಆದರೆ ಕೆಲವೊಂದು ಬಾರಿ ಅವರ ಬರಹ ಬೇರೊಬ್ಬರ ಜೀವನದಲ್ಲಿ ದೊಡ್ಡ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.